ರೋಟರಿ ಕಾರ್ಯಕ್ರಮಗಳು ಜನರ ಬದುಕು ರೂಪಿಸಲಿ

ಪಿರಿಯಾಪಟ್ಟಣದ ಕನಕ ಭವನದಲ್ಲಿ ನಡೆದ ರೋಟರಿ ಪಿರಿಯಾಪಟ್ಟಣ ಮಿಡ್ ಟೌನ್ ಸಂಸ್ಥೆಯ ಪದಗ್ರಹಣ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಯಶಸ್ವಿ ಎಸ್.ಸೋಮಶೇಖರ್, ರಾಘವೇಂದ್ರ, ಎಂ.ಎಂ.ರಾಜೇಗೌಡ, ಬಲರಾಮ್, ಬಿ.ಎಸ್.ಹರೀಶ್, ಜಿ.ಕೆ.ಜಗನ್, ಟಿ.ಕೆ.ಚೇತನ್ ಇದ್ದರು.
ಪಿರಿಯಾಪಟ್ಟಣದ ಕನಕ ಭವನದಲ್ಲಿ ನಡೆದ ರೋಟರಿ ಪಿರಿಯಾಪಟ್ಟಣ ಮಿಡ್ ಟೌನ್ ಸಂಸ್ಥೆಯ ಪದಗ್ರಹಣ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಯಶಸ್ವಿ ಎಸ್.ಸೋಮಶೇಖರ್, ರಾಘವೇಂದ್ರ, ಎಂ.ಎಂ.ರಾಜೇಗೌಡ, ಬಲರಾಮ್, ಬಿ.ಎಸ್.ಹರೀಶ್, ಜಿ.ಕೆ.ಜಗನ್, ಟಿ.ಕೆ.ಚೇತನ್ ಇದ್ದರು.
Published on
ಪಿರಿಯಾಪಟ್ಟಣ: ರೋಟರಿಯ ಶಾಶ್ವತ ಯೋಜನೆಗಳು ಸಾರ್ವಜನಿಕ ವಲಯದಲ್ಲಿ ಪರಿಣಾಮಕಾರಿಯಾಗಿ ಛಾಪು ಮೂಡಿಸಲಿವೆ ಎಂದು ರೋಟರಿ 3181 ಜಿಲ್ಲೆಯ ನಿಯೋಜಿತ ಪ್ರಾಂತಪಾಲ ಯಶಸ್ವಿ ಎಸ್.ಸೋಮಶೇಖರ್ ತಿಳಿಸಿದರು.
ಪಟ್ಟಣದ ಕನಕ ಭವನದಲ್ಲಿ ಭಾನುವಾರ ರೋಟರಿ ಪಿರಿಯಾಪಟ್ಟಣ ಮಿಡ್ ಟೌನ್ ಸಂಸ್ಥೆಯ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೋಟರಿ ಎಂದರೆ ಕೇವಲ ಸಭೆ ಸಮಾರಂಭ, ಮೋಜು-ಮಸ್ತಿ ಮಾಡುವ ಕಾರ್ಯಕ್ರಮವಾಗದೆ, ನಿರ್ಗತಿಕರ ಬದುಕಿನಲ್ಲಿ ಶಾಶ್ವತ ಪರಿಣಾಮ ಬೀರುವಂತಹ ಯೋಜನೆಗಳಾಗಬೇಕು ಎಂದರು.
ರೋಟರಿ ಸಂಸ್ಥೆಯು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಜನರ ಬದುಕನ್ನು ರೂಪಿಸುವಂತಿರಬೇಕು, ಒಬ್ಬ ವಿದ್ಯಾರ್ಥಿಯ ಜೀವನದಲ್ಲಿ ಪುಸ್ತಕದ ಪುಟವಾಗಬೇಕು, ಒಬ್ಬ ರೈತನ ಬದುಕು ಹಸನಾಗಬೇಕು, ಒಬ್ಬ ರೋಗಿಯ ಜೀವನದಲ್ಲಿ ಭರವಸೆ ಮೂಡಿಸುವಂತಿರಬೇಕು, ಒಬ್ಬ ಯುವಕನಿಗೆ ನಾಯಕನನ್ನಾಗಿಸುವ ಪ್ರೇರಣೆಯಾಗಬೇಕು ಎಂದರು.
ಸಮುದ್ರ ಮಂಥನ ಸಂದರ್ಭದಲ್ಲಿ ಹಾಲಾಹಲ, ಅಮೃತ ಸೇರಿದಂತೆ ವಿವಿಧ ರೂಪದ ವಸ್ತುಗಳು ನಮಗೆ ದೊರಕಿದವು, ಆದರೆ ಅವುಗಳನ್ನು ಪಡೆಯಲು ವಿವಿಧ ಮನೋಭಾವ ಹೊಂದಿದ್ದ ವ್ಯಕ್ತಿಗಳು ಸಿದ್ಧರಿದ್ದರು. ರೋಟರಿಯಲ್ಲೂ ಹಲವು ಮನಸ್ಥಿತಿ ಹೊಂದಿರುವ ವ್ಯಕ್ತಿಗಳು ಇರುತ್ತಾರೆ. ಅವರನ್ನು ಸಂಭಾಳಿಸಿಕೊಂಡು ಹೋಗುವುದು ಅಧ್ಯಕ್ಷರ ಪ್ರಮುಖ ಜವಾಬ್ದಾರಿಯಾಗಬೇಕಿದೆ ಎಂದರು.
ವಲಯ 6ರ ಸಹಾಯಕ ಪ್ರಾಂತಪಾಲ ರಾಘವೇಂದ್ರ ಮಾತನಾಡಿ, ಈ ಸಾಲಿನ ಜಿಲ್ಲಾ ಪ್ರಾಂತಪಾಲರು ತಮ್ಮ ನಿಯೋಜಿತ ಕಾರ್ಯಕ್ರಮಗಳಲ್ಲಿ ರೂಪಿಸಿರುವ ಸೇವಾ ಚಟುವಟಿಕೆಯನ್ನು ಕ್ರಿಯಾಶೀಲರಾಗಿ ಮಾಡುವಂತೆ ಸಲಹೆ ನೀಡಿದರು.
ರೋಟರಿ ಪಿರಿಯಾಪಟ್ಟಣ ಮಿಡ್ ಟೌನ್‌ನ ನೂತನ ಅಧ್ಯಕ್ಷ ಬಲರಾಮ್ ಮಾತನಾಡಿ, ಸೇವೆಯ ಮೂಲಕವೇ ಜಗತ್ತನ್ನು ಬದಲಾಯಿಸಬಹುದು ಎಂಬುದಕ್ಕೆ ಈ ಬಾರಿ ನಮ್ಮ ರೋಟರಿ ಮಿಡ್‌ಟೌನ್‌ಗೆ ಡೈಮಂಡ್ ಪ್ಲಸ್ ಪ್ರಶಸ್ತಿಯ ಗರಿ ದೊರಕಿರುವುದು ಸಾಕ್ಷಿಯಾಗಿದೆ ಎಂದರು. ಸಮಾರಂಭದಲ್ಲಿ ಕ್ಲಬ್‌ಗೆ 6 ಸದಸ್ಯರು ಹೊಸದಾಗಿ ಸೇರ್ಪಡೆಗೊಂಡರು.
ವಲಯ ಸೇನಾನಿ ಎಂ.ಎಂ.ರಾಜೇಗೌಡ, ಕಾರ್ಯದರ್ಶಿ ಬಿ.ಎಸ್.ಹರೀಶ್, ನಿರ್ಗಮಿತ ಅಧ್ಯಕ್ಷ ಜಿ.ಕೆ.ಜಗನ್, ನಿರ್ಗಮಿತ ಕಾರ್ಯದರ್ಶಿ ಟಿ.ಕೆ.ಚೇತನ್, ನಿರ್ಗಮಿತ ಸಹಾಯಕ ಪ್ರಾಂತಪಾಲ ರಾಜೇಗೌಡ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net