ಸೇಂಟ್ ಮೇರಿಸ್ ಶಾಲೆಯಲ್ಲಿ ‘ಶಾಂತಿ’ ಕಾರ್ಯಕ್ರಮ

ಎಚ್.ಡಿ.ಕೋಟೆ ಪಟ್ಟಣದ ಸೇಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಾಂತಿ ಕಾರ್ಯಕ್ರಮದಲ್ಲಿ ವೇಷಭೂಷಣದಲ್ಲಿ ಮಕ್ಕಳು ಗಮನ ಸೆಳೆದರು.
ಎಚ್.ಡಿ.ಕೋಟೆ ಪಟ್ಟಣದ ಸೇಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಾಂತಿ ಕಾರ್ಯಕ್ರಮದಲ್ಲಿ ವೇಷಭೂಷಣದಲ್ಲಿ ಮಕ್ಕಳು ಗಮನ ಸೆಳೆದರು.
Published on
ಎಚ್.ಡಿ.ಕೋಟೆ: ಪಟ್ಟಣದ ಸೇಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಂತಿ ಕಾರ್ಯಕ್ರಮ ನಡೆಯಿತು.
ಮುಖ್ಯ ಶಿಕ್ಷಕಿ ಸಿಸ್ಟರ್ ಬ್ರಿಜಿತ್ ಪಿ.ಜೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಂತಿ ಎಂಬುದು ಕೇವಲ ಗಲಾಟೆ ಇಲ್ಲದಿರುವ ಸ್ಥಿತಿಯಲ್ಲ. ಬದಲಾಗಿ ಎಲ್ಲರೂ ಸಂತೋಷದಿಂದ ಬಾಳುವ ಸಾಮರ್ಥ್ಯದ ಬದುಕು. ಹಾಗೆಯೇ ಪ್ರಜಾಪ್ರಭುತ್ವದಲ್ಲಿರುವ ಎಲ್ಲ ಪ್ರಜೆಗಳು, ಪಾಲಕರು, ಮಕ್ಕಳು ಸಮಾಜದಲ್ಲಿ ಪರಸ್ಪರ ಗೌರವ, ಸ್ನೇಹ ಪರತೆ ಮತ್ತು ಸಹಿಷ್ಣುತೆಯಿಂದ ಬಾಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಶಿಕ್ಷಕ ಎಂ.ಕುಮಾರ್ ಹಾಗೂ ಸ್ವಾಮಿಗೌಡ ನೇತೃತ್ವದಲ್ಲಿ ಮಕ್ಕಳು ಸ್ವಾಮಿ ವಿವೇಕಾನಂದ, ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಮದರ್ ತೆರೇಸಾ, ಯೇಸು ಕ್ರಿಸ್ತ, ದೇಶ ಕಾಯುವ ಸೈನಿಕರ ವೇಷಗಳನ್ನು ಧರಿಸಿ ಗಮನ ಸೆಳೆದರು.
ಇದೇ ಸಂದರ್ಭದಲ್ಲಿ ಸಹ ಶಿಕ್ಷಕರಾದ ಕಾಂತರಾಜು, ಸಂದೇಶ್, ಎ.ಪ್ರಸನ್ನ, ಆಶಾ, ಮಣಿಮಿಸ್, ರೀಟಾ, ಪ್ರಭಾವತಿ, ಪವಿತ್ರಾ, ಸುಕನ್ಯಾ, ಭಾರ್ಗವಿ ಇನ್ನಿತರರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net