ಕೌಶಲ ಅಭಿವೃದ್ಧಿಯ ಕಡೆಗೂ ಗಮನ ನೀಡಿ: ಎಲ್ ಐಸಿ ಅಧಿಕಾರಿ ಸುಬ್ರಮಣ್ಯ

ಜೆಎಸ್‌ಎಸ್ ಪ್ರಧಾನ ಭವನ ವಿದ್ಯಾರ್ಥಿನಿಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ  ಸುಬ್ರಮಣ್ಯ ಅವರನ್ನು ಗೌರವಿಸಲಾಯಿತು. ಡಾ.ಎನ್.ಮಹದೇವಸ್ವಾಮಿ, ಪ್ರದೀಪ್ ಇದ್ದರು.
ಜೆಎಸ್‌ಎಸ್ ಪ್ರಧಾನ ಭವನ ವಿದ್ಯಾರ್ಥಿನಿಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸುಬ್ರಮಣ್ಯ ಅವರನ್ನು ಗೌರವಿಸಲಾಯಿತು. ಡಾ.ಎನ್.ಮಹದೇವಸ್ವಾಮಿ, ಪ್ರದೀಪ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆರಳಣಿಕೆಯಷ್ಟು ಮಂದಿಗೆ ಮಾತ್ರ ಉದ್ಯೋಗ ದೊರಕುತ್ತಿದ್ದು, ಉಳಿದವರಿಗೆ ಅವರ ಓದಿಗೆ ತಕ್ಕಂತ ಕೆಲಸ ದೊರೆಯದೇ ಬೇರೆ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ
  • ಇಂದಿನ ಅಗತ್ಯಕ್ಕೆ ತಕ್ಕಂತೆ ಪದವಿ ಜತೆಗೆ ಸೂಕ್ತ ಕೌಶಲವನ್ನು ಮೈಗೂಡಿಸಿಕೊಳ್ಳದೇ ಇರುವುದೇ ಇದಕ್ಕೆ ಮುಖ್ಯಕಾರಣ
ಜೀವವಿಮಾ ಅಧಿಕಾರಿ ಸುಬ್ರಮಣ್ಯ ಅಭಿಪ್ರಾಯ ಉದ್ಯೋಗ ಅವಕಾಶಗಳು ಕುರಿತ ಉಪನ್ಯಾಸ
ಪದವಿ ಜತೆಗೆ ಕೌಶಲ ಅಭಿವೃದ್ಧಿಯ ಕಡೆಗೂ ಗಮನ ನೀಡಬೇಕು ಇಲ್ಲದಿದ್ದರೆ ಉದ್ಯೋಗ ಸಿಗದು ಎಂದು ಭಾರತೀಯ ಜೀವವಿಮಾ ಅಧಿಕಾರಿ ಸುಬ್ರಮಣ್ಯ ಅಭಿಪ್ರಾಯಪಟ್ಟರು.
ನಗರದ ಆರ್‌ಟಿಒ ವೃತ್ತದ ಬಳಿ ಇರುವ ಜೆಎಸ್‌ಎಸ್ ಪ್ರಧಾನ ಭವನ ವಿದ್ಯಾರ್ಥಿನಿಲಯದಲ್ಲಿ ಆಯೋಜಿಸಿದ್ದ ‘ಉದ್ಯೋಗ ಅವಕಾಶಗಳು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವಿವಿಧ ಪದವಿ, ತಾಂತ್ರಿಕ ವಿಷಯಗಳ ಪದವಿ ಓದಿ ಲಕ್ಷಾಂತರ ವಿದ್ಯಾರ್ಥಿಗಳು ಕಾಲೇಜುಗಳಿಂದ ಹೊರ ಬರುತ್ತಿದ್ದಾರೆ. ಆದರೆ ಇವರಲ್ಲಿ ಬೆರಳಣಿಕೆಯಷ್ಟು ಮಂದಿಗೆ ಮಾತ್ರ ಉದ್ಯೋಗ ದೊರಕುತ್ತಿದ್ದು, ಉಳಿದವರಿಗೆ ಅವರ ಓದಿಗೆ ತಕ್ಕಂತ ಕೆಲಸ ದೊರೆಯದೇ ಬೇರೆ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಇಂದಿನ ಅಗತ್ಯಕ್ಕೆ ತಕ್ಕಂತೆ ಪದವಿ ಜತೆಗೆ ಸೂಕ್ತ ಕೌಶಲವನ್ನು ಮೈಗೂಡಿಸಿಕೊಳ್ಳದೇ ಇರುವುದೇ ಇದಕ್ಕೆ ಮುಖ್ಯಕಾರಣ. ಚೀನಾದಲ್ಲಿ ನಿರುದ್ಯೋಗ ಪ್ರಮಾಣದ ದರ ಶೇ. 1.2ರಷ್ಟಿದೆ. ಆದರೆ ನಮ್ಮ ದೇಶದಲ್ಲಿ ಶೇ.28ರಷ್ಟಿದೆ. ಇದಕ್ಕೆ ಪ್ರಮುಖ ಕಾರಣ ಕೌಶಲದ ಕೊರತೆ ಎಂದು ಹೇಳಿದರು.
ಇತ್ತೀಚೆಗೆ ಸರ್ಕಾರಿ ಅಭಿಯೋಜಕರ ಹುದ್ದೆಗೆ ಪರೀಕ್ಷೆ ನಡೆಯಿತು. ಅದಕ್ಕೆ ಸಾವಿರಾರು ಮಂದಿ ಅರ್ಜಿ ಹಾಕಿ ಪರೀಕ್ಷೆಯನ್ನು ಬರೆದರು. ಆದರೆ ಉತ್ತೀರ್ಣಗೊಂಡರ ಸಂಖ್ಯೆ ಮಾತ್ರ ಹತ್ತನ್ನು ತಲುಪಿಲ್ಲ. ಇದಕ್ಕೆ ಪಠ್ಯವನ್ನು ಬಿಟ್ಟು ಇನ್ನಿತರೆ ಪ್ರಚಲಿತ ವಿದ್ಯಮಾನಗಳ, ಸಾಮಾನ್ಯ ಜ್ಞಾನ ತಿಳಿದುಕೊಳ್ಳದೇ ಇರುವುದೇ ಕಾರಣ ಎಂದರು.
ಇಂಗ್ಲಿಷ್ ಭಾಷೆಯನ್ನು ಅರ್ಥ ಮಾಡಿಕೊಳ್ಳದಿರುವುದು. ಆದ್ದರಿಂದ ಪದವೀಧರರಿಗೆ ವೃತ್ತಿಯ ಅವಕಾಶಗಳು ಸಿಗಬೇಕಾದರೇ ಸರಿಯಾದ ಮಾರ್ಗದರ್ಶನ, ಇಂಗ್ಲಿಷ್ ಭಾಷಾ ಜ್ಞಾನ ಅಗತ್ಯ ಎಂದರು.
ವಿದ್ಯಾರ್ಥಿಗಳು ವ್ಯಾಸಂಗದ ಸಂದರ್ಭದಲ್ಲೇ ವಿವಿಧ ಕಂಪನಿಗಳಲ್ಲಿ ಇಂಟರ್‌ಶಿಪ್ ಮಾಡುವುದಕ್ಕೆ ತೊಡಗಿಕೊಳ್ಳಬೇಕು. ಇದರಿಂದ ಕಾಲೇಜಿನಿಂದ ಹೊರಬರುವ ಹೊತ್ತಿಗೆ ಔದ್ಯೋಗಿಕ ಜಗತ್ತಿನ ಪರಿಚಯವಾಗುತ್ತದೆ. ಮುಂದೆ ವೃತ್ತಿಯ ವಿಷಯವಾಗಿ ಸಂದರ್ಶನಗಳು, ಅವಕಾಶಗಳು ಬಂದಾಗ ಇಲ್ಲಿನ ಅನುಭವ ಸಹಾಯ ಮಾಡುತ್ತದೆ ಎಂದರು.
ಉದ್ಯೋಗಕ್ಕಾಗಿ ನೀವು ಕಂಪನಿಗಳಿಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಅರ್ಜಿಯನ್ನು ಸಿದ್ದಗೊಳಿಸಬೇಡಿ. ಏಕೆಂದರೆ ನಿಮ್ಮ ಸಾಮರ್ಥ್ಯ, ನಿಮ್ಮ ದೌರ್ಬಲ್ಯ, ನಿಮ್ಮ ಗುರಿ ನಿಮಗೆ ಗೊತ್ತಿರುತ್ತದೆ ಹೊರತು ಎಐಗೆ ತಿಳಿದಿರುವುದಿಲ್ಲ. ಆದ್ದರಿಂದ ವಿಭಿನ್ನವಾಗಿ, ಸೃಜನತ್ಮಾಕವಾಗಿ ಅರ್ಜಿಯನ್ನು ಸಿದ್ದಗೊಳಿಸುವುದನ್ನು ಕಲಿತುಕೊಳ್ಳಿ ಎಂದು ಇದೇ ಸಂದರ್ಭದಲ್ಲಿ ಕಿವಿಮಾತು ಹೇಳಿದರು.
ನಿಲಯ ಪಾಲಕ ಡಾ.ಎನ್.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ನಿಲಯದ ವ್ಯವಸ್ಥಾಪಕ ಪ್ರದೀಪ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net