ನಿರಂತರ ಫೌಂಡೇಷನ್ ನಿಂದ "ಪಾರ್ಟಿ-' ನಾಟಕ ಪ್ರದರ್ಶನ

ನಿರಂತರ ರಂಗತಂಡದಿಂದ ಚಿದಂಬರರಾವ್ ಜಂಬೆ ನಿರ್ದೇಶನದಲ್ಲಿ ಪ್ರಸಾದ್ ಕುಂದೂರ್ ಅನುವಾದಿತ ‘ಪಾರ್ಟಿ’ ನಾಟಕ ಪ್ರದರ್ಶನವಾಯಿತು.
ನಿರಂತರ ರಂಗತಂಡದಿಂದ ಚಿದಂಬರರಾವ್ ಜಂಬೆ ನಿರ್ದೇಶನದಲ್ಲಿ ಪ್ರಸಾದ್ ಕುಂದೂರ್ ಅನುವಾದಿತ ‘ಪಾರ್ಟಿ’ ನಾಟಕ ಪ್ರದರ್ಶನವಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಸಮಾನತೆ, ಜನಪರ ಚಿಂತನೆ ಮತ್ತು ಸಾಂಸ್ಕೃತಿಕ ಹೊಣೆಗಾರಿಕೆ ಮುಖ್ಯ
  • ರಂಗಭೂಮಿ ಜೀವಂತ ಕ್ಷೇತ್ರವಾಗಿ ರೂಪಿಸುವ ದಿಕ್ಕಿನಲ್ಲಿ ನಿರಂತರ ಕಾರ್ಯನಿರ್ವಹಿಸುತ್ತಿದೆ
ಮೈಸೂರು:ನಗರದ ನಿರಂತರ ಫೌಂಡೇಷನ್‌ನಿಂದ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ‘ಪಾರ್ಟಿ’ ನಾಟಕ ಪ್ರದರ್ಶಿಸಲಾಯಿತು.
ಲೇಖಕ ಪ್ರೊ.ಒ.ಎಲ್. ನಾಗಭೂಷಣಸ್ವಾಮಿ ನಾಟಕಕ್ಕೆ ಚಾಲನೆ ನೀಡಿ, ಪ್ರಮುಖ ರಂಗತಂಡಗಳಲ್ಲಿ ಒಂದಾದ ನಿರಂತರ ಫೌಂಡೇಷನ್ ಮೂರು ದಶಕಗಳಿಂದ ಕನ್ನಡ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಚಿಂತನಾ ಪ್ರಧಾನ ಸಾಂಸ್ಕೃತಿಕ ವೇದಿಕೆ ಎಂದು ಬಣ್ಣಿಸಿದರು.
ಸಮಾನತೆ, ಜನಪರ ಚಿಂತನೆ ಮತ್ತು ಸಾಂಸ್ಕೃತಿಕ ಹೊಣೆಗಾರಿಕೆಯನ್ನು ಆಧಾರವಾಗಿಟ್ಟುಕೊಂಡು, ರಂಗಭೂಮಿಯನ್ನು ಸಮಾಜದೊಂದಿಗೆ ಸಂವಾದ ನಡೆಸುವ ಜೀವಂತ ಕ್ಷೇತ್ರವಾಗಿ ರೂಪಿಸುವ ದಿಕ್ಕಿನಲ್ಲಿ ನಿರಂತರ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ರಂಗಭೂಮಿಗೆ ನಿರ್ದೇಶಕ ಚಿದಂಬರರಾವ್ ಜಂಬೆ ಕೊಡುಗೆ ಅಪಾರ. ನಾಟಕ ಶೈಲಿಯಲ್ಲಿ ವಿಶೇಷ ಪ್ರಾವೀಣ್ಯ ಹೊಂದಿರುವ ಅವರು, ಪಠ್ಯ ಮತ್ತು ಪ್ರದರ್ಶನದ ನಡುವಿನ ಸೂಕ್ಷ್ಮತೆಯನ್ನು ನಿಖರವಾಗಿ ಹಿಡಿದಿಡುತ್ತಾರೆ. ಪಾತ್ರಗಳ ಮನೋವೈಜ್ಞಾನಿಕ ಆಳ ಮತ್ತು ದೃಶ್ಯ ವಿನ್ಯಾಸದಲ್ಲಿ ಅಳವಡಿಸುವ ವಿಶೇಷ ನೈಪುಣ್ಯ ಅವರ ನಿರ್ದೇಶನದ ಬಲ ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಕಾಳಚೆನ್ನೇಗೌಡ, ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ನಾಟಕಕಾರ ನಿರಂತರದ ಪ್ರಸಾದ್ ಕುಂದೂರ್, ನಿರಂತರದ ಎಂ.ಎಂ.ಸುಗುಣ, ಹಿರಿಯ ರಂಗಕರ್ಮಿಗಳಾದ ರಾಮೇಶ್ವರಿವರ್ಮ, ರತ್ನಾ ಮಿರ್ಲೆ, ಮುಖಂಡ ಚಿನ್ನಸ್ವಾಮಿ ವಡ್ಡಗೆರೆ, ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆ, ನಿರಂತರದ ಶ್ರೀನಿವಾಸ್, ಡಾ. ರೇಖಾ, ಕೆಂಪಣ್ಣ, ಸಹ ಪ್ರಾಧ್ಯಾಪಕ ರಘು ರೆಡ್ಡಿ, ಉಪನ್ಯಾಸಕ ಸ.ವೆ.ರ.ಸ್ವಾಮಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net