ಗ್ರಾಮ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ

ತಿ.ನರಸೀಪುರ ತಾಲೂಕಿನ ಬಿ.ಶೆಟ್ಟಹಳ್ಳಿ ಗ್ರಾಮದಲ್ಲಿರುವ ಸಮುದಾಯ ಭವನದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯಲ್ಲಿ ಪಿಡಿಒ ಕೆ.ಪಿ.ಕೆಂಪೇಗೌಡ ಮಾತನಾಡಿದರು. ರಂಗರಾಜು, ಎಸ್.ಸಿ.ಶಿವಮೂರ್ತಿ, ಕೆ.ಡಿ.ವಿನೂತನ್, ಕೌಸರ್ ಬಾನು, ಮುಜಾವರ್ ಇತರರು ಇದ್ದರು.
ತಿ.ನರಸೀಪುರ ತಾಲೂಕಿನ ಬಿ.ಶೆಟ್ಟಹಳ್ಳಿ ಗ್ರಾಮದಲ್ಲಿರುವ ಸಮುದಾಯ ಭವನದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯಲ್ಲಿ ಪಿಡಿಒ ಕೆ.ಪಿ.ಕೆಂಪೇಗೌಡ ಮಾತನಾಡಿದರು. ರಂಗರಾಜು, ಎಸ್.ಸಿ.ಶಿವಮೂರ್ತಿ, ಕೆ.ಡಿ.ವಿನೂತನ್, ಕೌಸರ್ ಬಾನು, ಮುಜಾವರ್ ಇತರರು ಇದ್ದರು.
Published on
ತಿ.ನರಸೀಪುರ: ತಾಲೂಕಿನ ಬಿ.ಶೆಟ್ಟಹಳ್ಳಿ ಗ್ರಾಮದಲ್ಲಿರುವ ಸಮುದಾಯ ಭವನದಲ್ಲಿ ಶನಿವಾರ ಗ್ರಾಮ ಪಂಚಾಯಿತಿ ವತಿಯಿಂದ 2025-26ನೇ ಸಾಲಿನ ವಿ.ಬಿ. ಜಿ ರಾಮ್ ಜಿ ಉದ್ಯೋಗ ಖಾತರಿ ಯೋಜನೆ ಮತ್ತು 15ನೇ ಹಣಕಾಸು ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ ನಡೆಸಲಾಯಿತು.
ಸಭೆಯಲ್ಲಿ ತಾಲೂಕು ವಿ.ಬಿ.ಜಿ ರಾಮ್ ಜಿ ಯೋಜನೆ ಸಂಯೋಜಕ ರಂಗರಾಜು ಅವರು ಮಾತನಾಡಿ, ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಯೋಜನೆಯಡಿ 54 ಲಕ್ಷ ರೂ.ಗಳ ವೆಚ್ಚದ 55 ಕಾಮಗಾರಿಗಳನ್ನು ಮಾಡಲಾಗಿದೆ. ಜಮೀನು ಅಭಿವೃದ್ಧಿ, ಕೊಟ್ಟಿಗೆ ನಿರ್ಮಾಣ, ಸಿಸಿ ರಸ್ತೆ ಚರಂಡಿ ಅಭಿವೃದ್ಧಿ ಕಾಮಗಾರಿಗಳು ಪಾರದರ್ಶಕವಾಗಿ ನಡೆದಿದೆ ಎಂದು ಸಾಮಾಗ್ರಿ ವೆಚ್ಚ ಕೂಲಿ ವೆಚ್ಚ ಅನುದಾನದ ಬಗ್ಗೆ ಸವಿವರವಾಗಿ ಮಂಡಿಸಿದರು. ಅಲ್ಲದೆ 15ನೇ ಹಣಕಾಸಿನ ಯೋಜನೆ ಅಡಿ 2025-26 ಸಾಲಿನಲ್ಲಿ ಅನುದಾನ ಬಂದಿಲ್ಲ. 2024ನೇ ಸಾಲಿನಲ್ಲಿ ಬಂದಿದ್ದ 31 ಲಕ್ಷ ರೂ.ಗಳ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ ಮಾಹಿತಿ ನೀಡಿದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ನೋಡಲ್ ಅಧಿಕಾರಿ ಎಸ್.ಸಿ.ಶಿವಮೂರ್ತಿ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿರುತ್ತದೆ. ಪಾರದರ್ಶಕತೆಯಿಂದ ಕಾಮಗಾರಿಗಳು ನಡೆದಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಲು ಗ್ರಾಮ ಸಭೆಯನ್ನು ಏರ್ಪಡಿಸಲಾಗುತ್ತದೆ. ಗ್ರಾಮ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಬೇಕು. ಆಗ ಗ್ರಾಮ ಪಂಚಾಯಿತಿಯಲ್ಲಿ ಸಿಗಬಹುದಾದ ಸೌಲಭ್ಯ ಗ್ರಾಮಗಳಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ದೊರಕುತ್ತದೆ. ವಿ.ಬಿ. ರಾಮ್ ಜಿ ಯೋಜನೆ ಶಾಲೆಗಳ ಅಭಿವೃದ್ಧಿಗೆ ಪೂರಕವಾಗಿದೆ, ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಪಿ.ಕೆಂಪೇಗೌಡ ಮಾತನಾಡಿ, ಪ್ರಸ್ತುತ ವಿ.ಬಿ.ಜಿ. ರಾಮ್ ಜಿ ಯೋಜನೆಯ ಆರಂಭವಾಗಿದೆ. ಇದರಲ್ಲಿ ಸಮುದಾಯ ಕಾಮಗಾರಿ, ಅಂಗನವಾಡಿ ಕಟ್ಟಡ, ಶಾಲೆ ಅಭಿವೃದ್ಧಿ, ಜಲ ಭದ್ರತೆ, ವಿಪತ್ತು ನಿರ್ವಹಣೆ ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಸೇರಿದಂತೆ 318 ಕಾಮಗಾರಿ ಒಳಗೊಂಡಿವೆ. ಯೋಜನೆಯಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಬಿ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಗ್ರಾಮಸ್ಥರ ಸಹಕಾರದೊಂದಿಗೆ ಮಾದರಿ ಗ್ರಾಮ ಮಾಡೋಣ ಎಂದರು.
ಇದೇ ವೇಳೆ ಆಶಾ ಕಾರ್ಯಕರ್ತರ ಮತ್ತು ಆರೋಗ್ಯ ಮಿತ್ರ, ನರೇಗಾ ಕಾಯಕ ಮಿತ್ರ ಪಂಚಾಯಿತಿ ವತಿಯಿಂದ ಬ್ಯಾಗ್, ವಾಟರ್ ಬಾಟಲ್, ಛತ್ರಿ, ಪಾದರಕ್ಷೆಯನ್ನು ವಿತರಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೆ.ಡಿ.ವಿನೂತನ್, ನೋಡಲ್ ಅಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ಶಿವಮೂರ್ತಿ, ಗ್ರಾಪಂ ಮಾಜಿ ಸದಸ್ಯ ನೀಲಯ್ಯ, ಎಸ್‌ಸಿ/ಎಸ್‌ಟಿ ಸಮಿತಿ ಸದಸ್ಯರಾದ ಕುಕ್ಕೂರು ಪ್ರಸನ್ನ, ಸಹಾಯಕ ಇಂಜಿನಿಯರ್ ಪ್ರಶಾಂತ್, ಕಾರ್ಯದರ್ಶಿ ಕೌಸರ್ ಬಾನು, ಮುಜಾವರ್ ಸೇರಿದಂತೆ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿ ಹಾಗೂ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net