ಪಾರ್ಕಿನ್ಸನ್ ಕಾಯಿಲೆಯ ಅಪಾಯ ನಿಯಂತ್ರಣ ಸಾಧ್ಯ

 ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಪಾರ್ಕಿನ್ಸನ್ ದಿನಾಚರಣೆಯನ್ನು ಡಾ.ಸಿ.ಪಿ.ಮಧು ಉದ್ಘಾಟಿಸಿದರು. ಡಾ.ಎಸ್.ಹರ್ಷ, ಡಾ.ನೇಮಿಚಂದ್ರ ಇನ್ನಿತರರಿದ್ದರು.
ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಪಾರ್ಕಿನ್ಸನ್ ದಿನಾಚರಣೆಯನ್ನು ಡಾ.ಸಿ.ಪಿ.ಮಧು ಉದ್ಘಾಟಿಸಿದರು. ಡಾ.ಎಸ್.ಹರ್ಷ, ಡಾ.ನೇಮಿಚಂದ್ರ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೆಎಸ್‌ಎಸ್ ಆಸ್ಪತ್ರೆ ನಿರ್ದೇಶಕ ಡಾ.ಸಿ.ಪಿ.ಮಧು ಹೇಳಿಕೆ
  • ಪಾರ್ಕಿನ್ಸನ್ ಕಾಯಿಲೆಯು ನರಮಂಡಲದ ಚಲನೆಯ ಅಸ್ವಸ್ಥತೆ
ಮೈಸೂರು; ಆರಂಭಿಕ ರೋಗ ನಿರ್ಣಯದಿಂದ ಪಾರ್ಕಿನ್ಸನ್ ಕಾಯಿಲೆಯನ್ನು ಸುಧಾರಿಸಬಹುದು ಎಂದು ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕ  ಡಾ.ಸಿ.ಪಿ.ಮಧು ಹೇಳಿದರು.
ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಪಾರ್ಕಿನ್ಸನ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಪಾರ್ಕಿನ್ಸನ್ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು, ಆರಂಭಿಕ ರೋಗನಿರ್ಣಯ ಉತ್ತೇಜಿಸಲು ಮತ್ತು ರೋಗಿಗಳಿಗೆ ಉತ್ತಮ ಆರೈಕೆ ವ್ಯವಸ್ಥೆ ಒದಗಿಸಲು ಪಾರ್ಕಿನ್ಸನ್ ದಿನ ಮೀಸಲಾಗಿರುವ ದಿನವಾಗಿದೆ. ನರವೈಜ್ಞಾನಿಕ ಕಾಯಿಲೆಯ ರೋಗಿಗಳ ಜೀವನದ ಗುಣಮಟ್ಟ ಸುಧಾರಿಸುವಲ್ಲಿ ಜೆಎಸ್‌ಎಸ್ ಆಸ್ಪತ್ರೆ ಪ್ರಮುಖವಾಗಿದ್ದು, ತಜ್ಞ ವೈದ್ಯರ ತಂಡ ಮತ್ತು ಗುಣಮಟ್ಟದ ಚಿಕಿತ್ಸೆಯನ್ನು ನೀಡುವಲ್ಲಿ ಮಂಚೂಣಿಯಲ್ಲಿದೆ ಎಂದರು. 
ನ್ಯೂರಾಲಜಿ ವಿಭಾಗದ ಪ್ರಾಧ್ಯಾಪಕ, ಮುಖ್ಯಸ್ಥ ಡಾ.ಎಸ್.ಹರ್ಷ ಮಾತನಾಡಿ, ಪಾರ್ಕಿನ್ಸನ್ ಕಾಯಿಲೆಯು ನರಮಂಡಲದ ಚಲನೆಯ ಅಸ್ವಸ್ಥತೆಯಾಗಿದ್ದು, ಇದು ಕಾಲಾನಂತರದಲ್ಲಿ ತೊಂದರೆ ನೀಡುತ್ತದೆ. ನರಮಂಡಲವು ಚಲನೆ ಸೇರಿದಂತೆ ದೇಹದ ಹಲವು ಭಾಗ ನಿಯಂತ್ರಿಸುವ ನರ ಕೋಶಗಳ ಜಾಲವಾಗಿದೆ. ಪಾರ್ಕಿನ್ಸನ್ ಲಕ್ಷಣಗಳು ನಿಧಾನವಾಗಿ ಪ್ರಾರಂಭವಾಗುತ್ತವೆ. 
ಮೊದಲ ಲಕ್ಷಣವೆಂದರೆ ಕೈ, ಕಾಲು ಅಥವಾ ದವಡೆಯಲ್ಲಿ ನಡುಕ ಉಂಟಾಗುವುದು. ನಂತರ ಅಸ್ವಸ್ಥತೆ, ಬಿಗಿತ, ಚಲನೆ ನಿಧಾನವಾಗುವುದು ಮತ್ತು ಸಮತೋಲನದ ತೊಂದರೆಗೆ ಕಾರಣವಾಗಬಹುದು. ಇದು ಬೀಳುವ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಪ್ರಾರಂಭದಲ್ಲೇ ಲಕ್ಷಣ ಪತ್ತೆಹಚ್ಚಿ ಚಿಕಿತ್ಸೆ ನೀಡಿದರೆ ಹೆಚ್ಚಿನ ಅಪಾಯ ನಿಯಂತ್ರಿಸಬಹುದು ಎಂದರು.
ನ್ಯೂರಾಲಜಿ ವಿಭಾಗದ ಪ್ರಾಧ್ಯಾಪಕ ಡಾ.ನೇಮಿಚಂದ್ರ, ಪಾರ್ಕಿನ್ಸನ್ ಕಾಯಿಲೆಯ ಲಕ್ಷಣಗಳ ಕುರಿತು ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಡಾ.ಪಿ.ಶಸ್ತಾರ, ಸಾಮಾನ್ಯ ಚಿಕಿತ್ಸಾ ಆಯ್ಕೆಗಳು ಮತ್ತು ರೋಗಿಯು ಜೀವನದ ಗುಣಮಟ್ಟವನ್ನು ಹೇಗೆ ಸುಧಾರಿಸಬಹುದು ಎಂಬುದರ ಕುರಿತು ಮಾತನಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net