ಕ್ಷೀಣಿಸುತ್ತಿದೆ ಶುದ್ಧ ಆಮ್ಲಜನಕ ಲಭ್ಯತೆ

ಸರಗೂರು ತಾಲೂಕಿನ ಪಟ್ಟಣದ ಪ್ರಗತಿ ವಿದ್ಯಾಸಂಸ್ಥೆ ಕಾಲೇಜು ಆವರಣದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿದರು.ಲೋಕೇಶ್.ವಿನೋದಕುಮಾರ್, ಪ್ರಭಾಕರ, ಪ್ರಕಾಶ್ ಇತರರು ಇದ್ದರು.
ಸರಗೂರು ತಾಲೂಕಿನ ಪಟ್ಟಣದ ಪ್ರಗತಿ ವಿದ್ಯಾಸಂಸ್ಥೆ ಕಾಲೇಜು ಆವರಣದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿದರು.ಲೋಕೇಶ್.ವಿನೋದಕುಮಾರ್, ಪ್ರಭಾಕರ, ಪ್ರಕಾಶ್ ಇತರರು ಇದ್ದರು.
Published on
ಸರಗೂರು.: ಅರಣ್ಯನಾಶದಿಂದ ಪರಿಸರ ಮಾಲಿನ್ಯ ಹೆಚ್ಚಾಗಿದ್ದು, ಶುದ್ಧ ಆಮ್ಲಜನಕ ಲಭ್ಯತೆ ಕ್ಷೀಣಿಸುತ್ತಿದೆ ಎಂದು ಸರಗೂರು ವಲಯ ಅರಣ್ಯಾಧಿಕಾರಿ ಡಾ. ಎಚ್. ಎಲ್. ಲೋಕೇಶ್ ಹೇಳಿದರು.
ಪಟ್ಟಣದ ಪ್ರಗತಿ ವಿದ್ಯಾಸಂಸ್ಥೆ ಹಾಗೂ ಕಾಲೇಜು ರಾಜಮ್ಮ ಲಿಂಗಯ್ಯ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಪರಿಸರ ದಿನಾಚರಣೆಯನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮಿತಿ ಮೀರಿದ ಜನಸಂಖ್ಯೆಯೇ ಪರಿಸರ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. ಎಲ್ಲರಿಗೂ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಅಪಾರ ಪ್ರಮಾಣದ ಗಿಡ, ಮರಗಳನ್ನು ನಾಶ ಮಾಡಲಾಗುತ್ತಿದೆ ಎಂದರು. ಈಗಾಗಲೇ ನೀರು ಮತ್ತು ಆಹಾರವನ್ನು ಕಲುಷಿತಗೊಳಿಸಲಾಗಿದೆ. ಇನ್ನು ಮುಂದೆ ಉತ್ತಮವಾದ ಆಮ್ಲಜನಕವೂ ಸಿಗುವುದಿಲ್ಲ ಎಂದು ಅವರು ಎಚ್ಚರಿಸಿದರು. ಇಂದಿನ ವಿದ್ಯಾರ್ಥಿಗಳು ಮುಂದಿನ ದಿನಗಳಿಗೆ ಭೂಮಿಯನ್ನು ಉಳಿಸಿ ಕೊಳ್ಳಬೇಕಾದರೆ ಸಾಧ್ಯವಾದಷ್ಟು ಗಿಡಗಳನ್ನು ನೆಡಬೇಕು. ಎಲ್ಲ ಆಚರಣೆಗಳಿಗೂ ಉಡುಗೊರೆಯಾಗಿ ಗಿಡಗಳನ್ನೇ
ಕೊಡಬೇಕು ಎಂದವರು ಸಲಹೆ ನೀಡಿದರು.
ಪತ್ರಕರ್ತ ವಿನೋದ್ ಕುಮಾರ್ ಬಿ. ನಾಯಕ್, ಧರ್ಮದರ್ಶಿ ಪ್ರಭಾಕರ್, ಪ್ರಾಂಶುಪಾಲ ಪ್ರಕಾಶ್, ಉಪನ್ಯಾಸಕರಾದ ಗೋವಿಂದರಾಜು, ನಾಗರತ್ನಾ, ವನಿತಾ ಮಣಿ ಇತರರು ಇದ್ದರು. ಈ ಸಂದರ್ಭದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಪ್ರಬಂಧ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಕಂಠಪಾಠ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net