ಫೆ.6ರಂದು ಮೈಸೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ

ಧರ್ಮಸ್ಥಳ
ಧರ್ಮಸ್ಥಳ
Published on

ಪ್ರಮುಖ ಮುಖ್ಯಾಂಶಗಳು

  • 10 ದಿನಗಳು ಪಾದಯಾತ್ರೆ
  • ಫೆ.15ರಂದು ಮಹಾಶಿವರಾತ್ರಿ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ಯಾತ್ರೆ ತಲುಪಲಿದೆ
ಮೈಸೂರು: ನಗರದ ಕುಡುಮ ಶ್ರೀಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸೇವಾ ಟ್ರಸ್ಟ್ ವತಿಯಿಂದ ಧರ್ಮಸ್ಥಳಕ್ಕೆ 6ನೇ ವರ್ಷದ ಪಾದಯಾತ್ರೆ ಹಮ್ಮಿಕೊಂಡಿದೆ. ಫೆ.6ರಂದು ಸಂಜೆ 7ಕ್ಕೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಚಾಲನೆ ದೊರೆಯಲಿದೆ.
ಯಾತ್ರಾರ್ಥಿಗಳಿಗೆ ಮಾಲಾಧಾರಣೆ, ಪ್ರಸಾದ ವಿನಿಯೋಗ ನಡೆಯಲಿದ್ದು, ಜತೆಗೆ, ವಿವಿಧ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. 10 ದಿನಗಳು ಪಾದಯಾತ್ರೆ ನಡೆಯಲಿದ್ದು, ಫೆ.15ರಂದು ಮಹಾಶಿವರಾತ್ರಿ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ಯಾತ್ರೆ ತಲುಪಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಎಂ.ಕೆ.ಮಹದೇವ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪಾದಯಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಯದವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ತನ್ವೀರ್ ಸೇಠ್, ಟ್ರಸ್ಟ್ ಕಾನೂನು ಸಲಹೆಗಾರ ಓಂಶ್ಯಾಮ್ ಭಟ್, ಶಿಲ್ಪಿ ಅರುಣ್ ಯೋಗಿರಾಜ್ ಪಾಲ್ಗೊಳ್ಳುವರು ಎಂದು ತಿಳಿಸಿದರು. 
ಟ್ರಸ್ಟ್‌ನ ಎಂ.ಅಶೋಕ್‌ಕುಮಾರ್, ಚಿನ್ನಸ್ವಾಮಿ, ಜಿ.ಮುರುಗೇಶ್, ಸೂರ್ಯ ಕುಮಾರ್, ಸಿ.ಸುರೇಶ್, ರಾಜೇಶ್ವರಿ, ಪಲ್ಲವಿ, ಲತಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net