ಕಾಂಗ್ರೆಸ್, ಮಿತ್ರಪಕ್ಷಗಳ ವಿರುದ್ಧ ಆಕ್ರೋಶ

 ಹುಣಸೂರು ನಗರದ ಸಂವಿಧಾನವೃತ್ತದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಮಹಿಳಾ ಘಟಕದ ವತಿಯಿಂದ ಜನಾಕ್ರೋಶ ಪ್ರತಿಭಟನೆ ನಡೆಸಲಾಯಿತು. ಡಾ.ಪ್ರಫುಲ್ಲಾ ಮಲ್ಲಾಡಿ, ಸವಿತಾ ಚವಾಣ್, ಗಣೇಶ್ ಕುಮಾರಸ್ವಾಮಿ, ನಾಗರಾಜ ಮಲ್ಲಾಡಿ, ಸತೀಶ್, ಡಿಂಪಲ್, ಸ್ನೇಹಾ, ಮಂಜುಳಾ ಇದ್ದರು.
ಹುಣಸೂರು ನಗರದ ಸಂವಿಧಾನವೃತ್ತದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಮಹಿಳಾ ಘಟಕದ ವತಿಯಿಂದ ಜನಾಕ್ರೋಶ ಪ್ರತಿಭಟನೆ ನಡೆಸಲಾಯಿತು. ಡಾ.ಪ್ರಫುಲ್ಲಾ ಮಲ್ಲಾಡಿ, ಸವಿತಾ ಚವಾಣ್, ಗಣೇಶ್ ಕುಮಾರಸ್ವಾಮಿ, ನಾಗರಾಜ ಮಲ್ಲಾಡಿ, ಸತೀಶ್, ಡಿಂಪಲ್, ಸ್ನೇಹಾ, ಮಂಜುಳಾ ಇದ್ದರು.
Published on
ಹುಣಸೂರು : ಸಂಸತ್ತಿನಲ್ಲಿ ಮಹಿಳಾ ಮೀಸಲು ಮಸೂದೆ ವಿರೋಧಿಸಿದ ಕಾಂಗ್ರೆಸ್ ಮತ್ತು ಇಂಡಿ ಮಿತ್ತಪಕ್ಷಗಳ ವಿರುದ್ಧ ತಾಲೂಕು ಬಿಜೆಪಿ ಪ್ರತಿಭಟನೆ ನಡೆಸಿತು.
ಸೋಮವಾರ ನಗರದ ಸಂವಿಧಾನ ವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿ ಮಹಿಳಾ ಘಟಕ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಸದಸ್ಯರು ವಿಪಕ್ಷಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮಹಿಳಾ ವಿರೋಧಿ ನೀತಿ ಕಾಂಗ್ರೆಸ್‌ನ ಹಳೇ ಚಾಳಿ, ದೇಶದ ಮಹಿಳೆಯರಿಗೆ ಮಾಡಿತು. ಕಾಂಗ್ರೆಸ್ ಅಪಮಾನ, ನಾರಿಶಕ್ತಿ ಕೇಳಿದೆ ಅಧಿಕಾರ, ಕಾಂಗ್ರೆಸ್ ಮಾಡಿದೆ ತಿರಸ್ಕಾರ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ಪ್ರಫುಲ್ಲಾ ಮಲ್ಲಾಡಿ, ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅತ್ಯಂತ ಕಾಳಜಿ ಮತ್ತು ಜವಾಬ್ದಾರಿಯೊಂದಿಗೆ ಮಂಡಿಸಿದ್ದ ನಾರಿಶಕ್ತಿ ವಂದನಾ ಅಧಿನಿಯಮವನ್ನು ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ವಿರೋಧಿಸುವ ಮೂಲಕ ದೇಶದ ಮಹಿಳೆಯರನ್ನು ಅಪಮಾನಿಸಿವೆ. ಕಾಂಗ್ರೆಸ್ ಈ ಹಿಂದೆಯೂ ಅಂಬೇಡ್ಕರ್ 1951ರಲ್ಲಿ ಮಂಡಿಸಿದ್ದ ಹಿಂದೂ ಬಿಲ್ ಕೋಡ್ ಅನ್ನೂ ವಿರೋಧಿಸಿತ್ತು. ಇದೀಗ ಮತ್ತೆ ಮಹಿಳೆಯರ ಸ್ವಾಭಿಮಾನಕ್ಕೆ ಪೆಟ್ಟು ನೀಡುವ ಮೂಲಕ ಕಾಂಗ್ರೆಸ್ ದೇಶದ ಮಹಿಳಾ ಸಮುದಾಯದ ವಿರುದ್ಧದ ತನ್ನ ಕರಾಳ ಮುಖ ಅನಾವರಣಗೊಳಿಸಿದೆ ಎಂದರು.
ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬಹುದಾಗಿದ್ದ ಸಂದರ್ಭವನ್ನು ಪ್ರಧಾನಿ ಮೋದಿ ಎಲ್ಲರಿಗೂ ನೀಡಿದ್ದರು. ಆದರೆ ಕಾಂಗ್ರೆಸ್ ಅದನ್ನು ಹಾಳುಗೆಡವುವ ಮೂಲಕ ದೇಶದ ಮಹಿಳೆಯರಿಗೆ ದ್ರೋಹವೆಸಗಿದೆ. ಈಗಾಗಲೇ ದೇಶದ ಮಹಿಳೆಯರು ಕಾಂಗ್ರೆಸ್ ಅನ್ನು ತಿರಸ್ಕರಿಸುತ್ತಿದೆ. ಪಂಚರಾಜ್ಯ ಚುನಾವಣೆಯಲ್ಲೂ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಮಹಿಳಾ ಮೋರ್ಚಾ ಜಿಲ್ಲಾ ಸಮಿತಿ ಉಪಾಧ್ಯಕ್ಷೆ ಸವಿತಾ ಚವಾಣ್ ಮಾತನಾಡಿದರು. ಪ್ರತಿಭಟನೆಯಲ್ಲಿ ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ(ಗ್ರಾಮಾಂತರ)ಮಂಜುಳಾ, ಸದಸ್ಯರಾದ ಡಿಂಪಲ್, ಶ್ವೇತಾ, ಸ್ನೇಹಾ, ರಮಾ, ಅಂಕಿತಾ, ನಗರಾಧ್ಯಕ್ಷ ನಾರಾಯಣ, ಪ್ರಧಾನ ಕಾರ್ಯದರ್ಶಿ ಸುರೇಶ್, ವೆಂಕಟೇಶ್, ಎಸ್ಸಿ ಮೋರ್ಚಾ ಮಾಜಿ ರಾಜ್ಯಾಧ್ಯಕ್ಷ ನಾಗರಾಜ ಮಲ್ಲಾಡಿ, ಜಿಲ್ಲಾ ಸಮಿತಿ ಸದಸ್ಯರಾದ ಗಣೇಶ್ ಕುಮಾರಸ್ವಾಮಿ, ಹನಗೋಡು ಮಂಜುನಾಥ್, ಯುವ ಮೋರ್ಚಾ ಅಧ್ಯಕ್ಷ ರಾಘು, ಸತೀಶ್,ಅಣ್ಣಯ್ಯ, ನಟರಾಜ್, ಅರುಣ್ ಚವಾಣ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net