ಕಂಬಳಕ್ಕೆ ವಿರೋಧ ಸಲ್ಲ: ಶಾಸಕ ಕೆ.ಹರೀಶ್‌ಗೌಡ

ಕಂಬಳ ಕ್ರೀಡೆ
ಕಂಬಳ ಕ್ರೀಡೆ
Published on

ಪ್ರಮುಖ ಮುಖ್ಯಾಂಶಗಳು

  • ಕಂಬಳಕ್ಕಾಗಿ ಪರಿಸರ ನಾಶ ಮಾಡುತ್ತಿಲ್ಲ
  • ದಸರಾದಲ್ಲಿ ಕಂಬಳ ಕ್ರೀಡೆ ಆಯೋಜನೆಯಲ್ಲಿ ಯಾವ ತಪ್ಪೂ ಇಲ್ಲ
ಮೈಸೂರು: ನಾಡಹಬ್ಬ ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆ ಆಯೋಜನೆಯಲ್ಲಿ ಯಾವ ತಪ್ಪೂ ಇಲ್ಲ ಎಂದು ಶಾಸಕ ಕೆ.ಹರೀಶ್‌ಗೌಡ ಅವರು ರಾಜ್ಯ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
ಆಷಾಢ ಶುಕ್ರವಾರ ಆಚರಣೆ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
 ಕಂಬಳಕ್ಕಾಗಿ ಪರಿಸರ ನಾಶ ಮಾಡುತ್ತಿಲ್ಲ. ಬೇರೆ ಬೇರೆ ಸಂಸ್ಕೃತಿಯನ್ನು ಪರಿಚಯಿಸುವುದೇ ನಾಡಹಬ್ಬ. ಹೀಗಾಗಿ, ಇದಕ್ಕೆ ವಿರೋಧ ಸರಿಯಲ್ಲ. ಎಲ್ಲರನ್ನೂ ಕರೆಸಿ ಮಾತನಾಡುತ್ತೇವೆ ಎಂದು ಹೇಳಿದರು.
ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆದರೆ, ಮೈಸೂರಿಗೆ ಮತ್ತೊಂದು ಸಚಿವ ಸ್ಥಾನ ಕೊಡಲೇಬೇಕು. ಇಲ್ಲಿಗೆ ಯಾರಿಗಾದರೂ ಒಂದು ಸ್ಥಾನ ಕೊಡಲಿ. ಶೀಘ್ರದಲ್ಲೇ ಸಿಎಂ ಮೈಸೂರಿಗೆ ಬರುತ್ತಾರೆ. ಅವರು ಮೈಸೂರಿನ ಅಳಿಯ, ಮೈಸೂರಿಗೆ ಬರಲೇಬೇಕು ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net