ರಸ್ತೆ ಬದಿಯಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಚಾಟ್‌ಸೆಂಟರ್‌ಗಳು, ಚಹಾ ಅಂಗಡಿಗಳು, ಬಿದಿರಿನ ಸ್ಟಾಲ್‌ಗಳು, ಬೀದಿ ಬದಿಯ ಹೋಟೆಲ್‌ಗಳು ಸೇರಿದಂತೆ ಇತರ ಅನಧಿಕೃತ ವಾಣಿಜ್ಯ ಮಳಿಗೆಗಳನ್ನು ಪಾಲಿಕೆ ಸಿಬ್ಬಂದಿ ಜೆಸಿಬಿಗಳಿಂದ ಮುಲಾಜಿಲ್ಲದೆ ಕಿತ್ತು ಹಾಕಿದರು. ಈ ಸಂದರ್ಭದಲ್ಲಿ ಕೆಲವು ವ್ಯಾಪಾರಿಗಳು ಪ್ರತಿರೋಧ ಒಡ್ಡಿದರೂ ಪಾಲಿಕೆ ಸಿಬ್ಬಂದಿ ಜಗ್ಗಲಿಲ್ಲ. ಪರಿಕರಗಳನ್ನು ಜಪ್ತಿ ಮಾಡುವ ಮೂಲಕ ಬಿಸಿಮುಟ್ಟಿಸಿದರು.