ಪುಸ್ತಕಗಳು ಮಾತ್ರ ನಮಗೆ ಸತ್ಯದ ದರ್ಶನ ಮಾಡಿಸಬಲ್ಲದು : ಕುಲಪತಿ ಪ್ರೊ.ಎನ್.ಕೆ. ಲೋಕನಾಥ್

ಮೈಸೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವಜ್ರ ಮಹೋತ್ಸವದ ಅಂಗವಾಗಿ ವಿಜ್ಞಾನ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಶೃಂಗಸಭೆಯಲ್ಲಿ ಸ್ಮರಣ ಸಂಚಿಕೆಯನ್ನು ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಬಿಡುಗಡೆ ಮಾಡಿದರು. ವಿಕ್ರಮ್ ಸಂಪತ್, ಪ್ರೊ.ಎನ್.ಎಸ್. ಹರಿನಾರಾಯಣ, ಡಾಶಾಲಿನಿ ಆರ್. ಅರಸ್ ಹಾಗೂ ಇತರರು ಇದ್ದರು.
ಮೈಸೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವಜ್ರ ಮಹೋತ್ಸವದ ಅಂಗವಾಗಿ ವಿಜ್ಞಾನ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಶೃಂಗಸಭೆಯಲ್ಲಿ ಸ್ಮರಣ ಸಂಚಿಕೆಯನ್ನು ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಬಿಡುಗಡೆ ಮಾಡಿದರು. ವಿಕ್ರಮ್ ಸಂಪತ್, ಪ್ರೊ.ಎನ್.ಎಸ್. ಹರಿನಾರಾಯಣ, ಡಾಶಾಲಿನಿ ಆರ್. ಅರಸ್ ಹಾಗೂ ಇತರರು ಇದ್ದರು.
Published on
ಮೈಸೂರು: ಡಿಜಿಟಲ್ ಯುಗದಲ್ಲಿ ನಮಗೆ ದೊರೆಯುವ ಮಾಹಿತಿಯಲ್ಲಿ ಸಾಕಷ್ಟು ತಪ್ಪುಗಳು ಇರಬಹುದು. ಹಾಗಾಗಿ ಸಾರ್ವಜನಿಕರಿಗೆ ನಿಖರ ಹಾಗೂ ವಿಶ್ವಾಸಾರ್ಹ ಜ್ಞಾನ ಒದಗಿಸುವಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಪಾತ್ರ ಅತ್ಯಂತ ದೊಡ್ಡದು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವಜ್ರ ಮಹೋತ್ಸವದ ಅಂಗವಾಗಿ ವಿಜ್ಞಾನ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಶೃಂಗಸಭೆ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಎಲ್ಲ ಮಾಹಿತಿಗಳು ಮೊಬೈಲ್ನಲ್ಲೇ ದೊರೆಯುತ್ತಿದೆ. ಆದರೆ, ಈ ಮಾಹಿತಿ ಎಷ್ಟು ನೈಜವಾಗಿದೆ ಎಂಬುದು ಮುಖ್ಯ. ಮೊಬೈಲ್‌ನಲ್ಲಿ ದೊರೆಯುವ ಮಾಹಿತಿಯಲ್ಲಿ ಸುಳ್ಳು ಯಾವುದು, ನಿಜ ಯಾವುದು ಎಂಬುದನ್ನು ಪತ್ತೆ ಹಚ್ಚುವುದೇ ಯುವ ಪೀಳಿಗೆಗೆ ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಪುಸ್ತಕಗಳು ಮಾತ್ರ ನಮಗೆ ಸತ್ಯದ ದರ್ಶನ ಮಾಡಿಸಬಲ್ಲದು ಎಂದರು.
ವಿದ್ಯಾರ್ಥಿಗಳಲ್ಲಿ ಅಧ್ಯಯನದ ಶಿಸ್ತು ಕಡಿಮೆಯಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಇಂದಿನ ಪೀಳಿಗೆಗೆ ತಾಳ್ಮೆ ಅತ್ಯಗತ್ಯ. ಸಂಶೋಧನಾ ಪ್ರಬಂಧಗಳನ್ನು ಬಿಡಿಬಿಡಿಯಾಗಿ ಓದುವ ಬದಲು, ಸಂಪೂರ್ಣವಾಗಿ ಓದಿ, ವಿಶ್ಲೇಷಿಸುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜ್ಞಾನ ಸಂಪಾದನೆಗಾಗಿ ನಾವು ಪುಸ್ತಕಗಳನ್ನು ಓದಬೇಕು. ಆದರೆ ಅಷ್ಟಕ್ಕೇ ನಿಲ್ಲದೆ, ಆ ಜ್ಞಾನವನ್ನು ನಾವು ವಿವೇಕವನ್ನಾಗಿ ಪರಿವರ್ತಿಸಬೇಕು. ಉನ್ನತ ಶಿಕ್ಷಣದಲ್ಲಿರುವ ಪ್ರತಿಯೊಬ್ಬರಿಗೂ ಇದು ಅತಿ ಮುಖ್ಯ. ಗ್ರಂಥಾಲಯ ವಿಜ್ಞಾನವು ಕೇವಲ ಒಂದು ವಿಷಯಕ್ಕೆ ಸೀಮಿತವಾಗಿಲ್ಲ. ಅದು ಭೌತವಿಜ್ಞಾನ, ಮಾನವಿಕ, ವಾಣಿಜ್ಯ ಸೇರಿದಂತೆ ಎಲ್ಲ ವಿಭಾಗಗಳನ್ನು ಒಟ್ಟಿಗೆ ಜೋಡಿಸುವ ಅದ್ಭುತ ಕೊಂಡಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭ ನಿವೃತ್ತ ಪ್ರಾಧ್ಯಾಪಕರಾದ ಡಾ. ಶಾಲಿನಿ ಆರ್. ಅರಸ್, ಎನ್.ವಿ. ಸತ್ಯನಾರಾಯಣ, ಡಾ.ಪಿ.ವೈ. ರಾಜೇಂದ್ರ ಕುಮಾರ್, ಡಾ.ಎನ್. ಚೌಡಪ್ಪ, ಪ್ರೊ.ಕೆ.ಎಸ್. ರಾಘವನ್, ಪ್ರೊ. ಕೈಸರ್ ಜಹಾನ್ ಬೇಗಂ, ಪ್ರೊ.ಮಲ್ಲಿನಾಥ ಕುಂಬಾರ್ ಅವರಿಗೆ ಡಿಜೆಎಸ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಲೇಖಕ ವಿಕ್ರಮ್ ಸಂಪತ್, ವಿಭಾಗದ ಮುಖ್ಯಸ್ಥ ಪ್ರೊ.ಎನ್.ಎಸ್. ಹರಿನಾರಾಯಣ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net