ಮೈಸೂರು: ಆನ್‌ಲೈನ್ ವಂಚನೆಯಿಂದ ನಗರದ ಇಬ್ಬರು 15.5 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ಬರದಲಿದೆ ಎಂದು ಯರಗನಹಳ್ಳಿ ನಿವಾಸಿಯೊಬ್ಬರಿಗೆ ವಾಟ್ಸ್‌ಆ್ಯಪ್‌ಗೆ ಸಂದೇಶ ಬಂದಿದೆ. ವಂಚಕನನ್ನು ಸಂಪರ್ಕಿಸಿದ ನಿವಾಸಿ ಆತ ಹೇಳಿದ ನಾನಾ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 3.5 ಲಕ್ಷ ರೂ.ಹಣ ಹೂಡಿಕೆ ಮಾಡಿದ್ದಾರೆ. ನಂತರ ಹಣ ವಾಪಸ್ ಬಾರದಿದ್ದಾಗ ವಂಚನೆಯಾಗಿರುವುದು ಗೊತ್ತಾಗಿದೆ.
ಎರಡನೇ ಪ್ರಕರಣದಲ್ಲಿ ಮುಂಬೈ ಪೊಲೀಸ್ ಎಂದು ಹೇಳಿಕೊಂಡ ವಂಚಕ, ನಿಮ್ಮ ಆಧಾರ್ ಕಾರ್ಡ್ ಬಳಸಿಕೊಂಡು ಅಕ್ರಮ ಮಾಡಲಾಗಿದೆ ಎಂದು ಸರಸ್ವತಿಪುರಂನ ನಿವೃತ್ತ ಸರ್ಕಾರಿ ಅಧಿಕಾರಿಯನ್ನು ಬೆದರಿಸಿ ಅವರ ಬ್ಯಾಂಕ್ ಖಾತೆಯಿಂದ 12 ಲಕ್ಷ ರೂ.ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಇಬ್ಬರು ನೀಡಿದ ದೂರಿನ ಮೇರೆಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.