ಹುಣಸನಾಳು ಗ್ರಾಮದಲ್ಲಿ ಓಣಂ ಆಚರಣೆ

ಹುಣಸನಾಳು ಗ್ರಾಮದ ಗೋಕುಲಂ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಓಣಂ ಆಚರಿಸಲಾಯಿತು.
ಹುಣಸನಾಳು ಗ್ರಾಮದ ಗೋಕುಲಂ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಓಣಂ ಆಚರಿಸಲಾಯಿತು.
Published on

ನಂಜನಗೂಡು:

ತಾಲೂಕಿನ ಹುಣಸನಾಳು ಗ್ರಾಮದಲ್ಲಿರುವ ಗೋಕುಲಂ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಇತ್ತೀಚೆಗೆ ಓಣಂ ಹಬ್ಬ ಆಚರಿಸಲಾಯಿತು. ಶಾಲೆಯ ಪ್ರಾಂಗಣದಲ್ಲಿ ರಂಗೋಲಿ ಬರೆದು, ಶ್ರೀ ಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತಿ ಭಾವದಿಂದ ಪೂಜಿಸಲಾಯಿತು.

ಶಾಲೆಯ ಶಿಕ್ಷಕ ವೃಂದ ಕೇರಳದ ಸಾಂಪ್ರದಾಯಿಕ ಉಡುಗೆ ತೊಟ್ಟು ವಿದ್ಯಾರ್ಥಿಗಳಿಗೆ ಸಿಹಿ ಹಂಚಿ, ಹಬ್ಬ ಆಚರಿಸಿದರು. ಸಂಸ್ಥೆಯ ಅಧ್ಯಕ್ಷೆ ಮಂಜು ಭಾಷಿಣಿ ಮಾತನಾಡಿ, ಶ್ರೀ ಕೃಷ್ಣನ್ನು ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ನೀಡಿ ಕಾಪಾಡಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಶಾಲೆಯ ಸಾರಿಗೆ ವ್ಯವಸ್ಥೆಯ ವ್ಯವಸ್ಥಾಪಕ ಹರಿದಾಸ್, ಶಿಶು ವಿಹಾರದ ಮೇಲುಸ್ತುವಾರಿ ಉಷಾ ಹರಿದಾಸ, ಶಿಕ್ಷಕರು, ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net