ಕೆ.ಆರ್.ನಗರ: 2019ರ ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನಡೆದಿತ್ತು ಎನ್ನಲಾದ ಬೆಟ್ಟಿಂಗ್ ಬಗ್ಗೆ ಪ್ರಮಾಣೀಕರಿಸಲು ಶ್ರೀ ಕ್ಷೇತ್ರ ಕಪ್ಪಡಿಯಲ್ಲಿ ಆಣೆ ಪ್ರಮಾಣಕ್ಕೆ
ಜೆಡಿಎಸ್‌ನ ಎರಡೂ ಬಣದ ಮುಖಂಡರು ಆಗಮಿಸಿದ್ದಾಗ ಕೆಲ ಕಾಲ ಗೊಂದಲದ ವಾತಾವರಣ ಮೂಡಿತ್ತು.
ಸಾ.ರಾ. ನಂದೀಶ್ ಅವರು ಸುಮಲತಾ ಗೆಲ್ಲುತ್ತಾರೆಂದು 10 ಲಕ್ಷ ರೂ. ಬೆಟ್ಟಿಂಗ್ ಕಟ್ಟಿದ್ದರು. ಆ ಹಣವನ್ನು ಮೈಸೂರಿನ ಅವರ ಕಚೇರಿಯಲ್ಲಿ ಪಡೆದುಕೊಂಡಿದ್ದಾರೆ ಎಂದು ಜಿ.ಟಿ.ದೇವೇಗೌಡರ ಬೆಂಬಲಿಗ ಹೂಟಗಳ್ಳಿ ಸುರೇಶ್ ಕೆಲ ದಿನಗಳ ಹಿಂದೆ ಆರೋಪಿಸಿದ್ದರು. ನಾನೇಹಣವನ್ನು ಸಾ.ರಾ.ನಂದೀಶ್‌ಗೆ ಕೊಟ್ಟಿರುವೆ ಎಂದು ಕುಪ್ಪಹಳ್ಳಿ ಗ್ರಾಮದ ಜೆಡಿಎಸ್ ಮುಖಂಡ ಸೋಮಶೇಖರ್ ಪ್ರತಿಕ್ರಿಯಿಸಿದ್ದರು.
ಶುಕ್ರವಾರ ಬೆಳಗ್ಗೆ ಸಾ.ರಾ.ನಂದೀಶ್ ಗುಂಪು ಗ್ರಾಮಕ್ಕೆ ಆಗಮಿಸಿದಾಗ ಸುರೇಶ್ ಬೆಂಬಲಿಗರು ಹೆಬ್ಬಾಳಿನ ಮುಖ್ಯ ದ್ವಾರದ ಬಳಿ ಜಮಾಯಿಸಿದ್ದರು. ಹೂಟಗಳ್ಳಿ ಸುರೇಶ್ ಮತ್ತು ಕುಪ್ಪಳ್ಳಿ ಸೋಮಶೇಖರ್ ಅವರುಗಳು ಬೇರೆ ರಸ್ತೆಯಲ್ಲಿ ಕಪ್ಪಡಿ ಕ್ಷೇತ್ರಕ್ಕೆ ತೆರಳಿ ಪೂಜೆ ಮಾಡಿಸಿಕೊಂಡು ವಾಪಸಾಗುತ್ತಿದ್ದರು.
ಕುಪ್ಪಹಳ್ಳಿ ಸೋಮಶೇಖರ್ ಅವರನ್ನು ಅಡ್ಡಗಟ್ಟಿದ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ತಳ್ಳಾಟ, ನೂಕಾಟ ನಡೆಯಿತು. ಸ್ಥಳಕ್ಕೆ ಬಂದ ಪೊಲೀಸರು ಸೋಮಶೇಖರ್ ಅವರನ್ನು ಸ್ಕೂಟರ್‌ನಲ್ಲಿ ಕೆ.ಆರ್.ನಗರಕ್ಕೆ ಕಳುಹಿಸಿದರು. ಇದಾದ ನಂತರ ಸಾ.ರಾ ನಂದೀಶ್‌ಬೆಂಬಲಿಗರೊಂದಿಗೆ ಕಪ್ಪಡಿ ಕ್ಷೇತ್ರಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದರು.
ಸಾ.ರಾ.ನಂದೀಶ್ ಮಾತನಾಡಿ, ನಾನು ಯಾವುದೇ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿಲ್ಲ. ಆರೋಪ ಸುಳ್ಳು ಎಂದರು. ಎರಡೂ ಕಡೆಯವರು ಪ್ರತ್ಯೇಕವಾಗಿ ಗುದ್ದುಗೆ ದರ್ಶನ ಪಡೆಯಲು ಪೊಲೀಸರು ಬಂದೋಬಸ್ತ್ ಏರ್ಪಡಿಸಿದರು. ಯಾವುದೇ ಆಣೆ, ಪ್ರಮಾಣ ನಡೆಯಲಿಲ್ಲ.
ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಯುವ ಘಟಕ ಅಧ್ಯಕ್ಷ ಹಂಪಾಪುರ ಸುರೇಶ್, ಬಾಲು, ಮುಖಂಡರಾದ ಹೆಬ್ಬಾಳು ಸಂತೋಷ್, ಸುಜಯ್ ಗೌಡ ಇದ್ದರು.
05 ಕೆಆರ್ ಎನ್-1:-
ಕೆ.ಆರ್.ನಗರ ತಾಲೂಕಿನ ಹೆಬ್ಬಾಳು ಗ್ರಾಮದ ಕಪ್ಪಡಿಗೆ ತೆರಳುವ ಮುಖ್ಯ ದ್ವಾರದಲ್ಲಿ ಜಿಪಂ ಮಾಜಿ ಅಧ್ಯಕ್ಷ ಸಾ.ರಾ.ನಂದೀಶ್ ಮತ್ತು ಮಾಜಿ ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಕುಪ್ಪಹಳ್ಳಿ ಸೋಮಶೇಖರ್ ಅವರ ಆಣೆ ಪ್ರಮಾಣ ತಡೆದ ಹೆಬ್ಬಾಳು ಗ್ರಾಮಸ್ಥರು.