ಮಹಿಳೆಯರ ಆಕಾಂಕ್ಷೆ ಹತ್ತಿಕ್ಕುವ ಕೆಲಸ ಬೇಡ: ಎಂಎಲ್ ಸಿ ಡಾ.ಯತೀಂದ್ರ ಸಿದ್ದರಾಮಯ್ಯ

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿಯಿಂದ ನಗರದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಹುತಾತ್ಮ ಯೋಧರ ತಾಯಂದಿರು ಮತ್ತು ಮಡದಿಯರನ್ನು ಗೌರವಿಸಲಾಯಿತು. ಡಾ.ಯತೀಂದ್ರ ಸಿದ್ದರಾಮಯ್ಯ, ನಾಗಲಕ್ಷ್ಮೀ ಚೌಧರಿ, ಎಂ.ಕೆ.ಸೋಮಶೇಖರ್, ವಿ.ಪಿ.ಸುಶೀಲಾ ಇತರರಿದ್ದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿಯಿಂದ ನಗರದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಹುತಾತ್ಮ ಯೋಧರ ತಾಯಂದಿರು ಮತ್ತು ಮಡದಿಯರನ್ನು ಗೌರವಿಸಲಾಯಿತು. ಡಾ.ಯತೀಂದ್ರ ಸಿದ್ದರಾಮಯ್ಯ, ನಾಗಲಕ್ಷ್ಮೀ ಚೌಧರಿ, ಎಂ.ಕೆ.ಸೋಮಶೇಖರ್, ವಿ.ಪಿ.ಸುಶೀಲಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜಕೀಯವಾಗಿ ಅಧಿಕಾರ ಪಡೆಯುವ ಸಂದರ್ಭದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಧಕ್ಕುವುದಿಲ್ಲ.
  • ಮಹಿಳೆ ಆಗುವುದಕ್ಕೂ ಮೊದಲು ಅವರೂ ಮನುಷ್ಯರು ಎಂಬದನ್ನು ಅರಿತುಕೊಳ್ಳಬೇಕು
ಮೈಸೂರು:ಸಮಾಜಕ್ಕೆ ಏನಾದರೂ ನೀಡಬೇಕು ಎಂಬ ಹಂಬಲದಲ್ಲಿ ಕೆಲಸ ಮಾಡುವ ಮಹಿಳೆಯರ ಆಕಾಂಕ್ಷೆಗಳನ್ನು ಹತ್ತಿಕ್ಕುವ ಕೆಲಸ ಮಾಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿಯಿಂದ ನಗರದ ಪುರಭವನದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಸೃಷ್ಟಿಯಲ್ಲಿ ಗಂಡು, ಹೆಣ್ಣು ಪ್ರಮುಖರು. ಇಬ್ಬರಲ್ಲಿ ಒಬ್ಬರಿಲ್ಲದೇ ಇದ್ದರೆ ಸೃಷ್ಟಿಯೇ ಅಪೂರ್ಣ. ಇಬ್ಬರು ಸಮಾನರಾದರೂ ಸಮಾಜದಲ್ಲಿ ಹಲವಾರು ವಿಷಯದಲ್ಲಿ ಹೆಣ್ಣನ್ನು ಧಮನ ಮಾಡುವ ಕೆಲಸಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಕೀಯವಾಗಿ ಅಧಿಕಾರ ಪಡೆಯುವ ಸಂದರ್ಭದಲ್ಲಿ ಮಹಿಳೆಯರಿಗೆ ಸರಿಯಾದ ಸ್ಥಾನಮಾನ ಧಕ್ಕುವುದಿಲ್ಲ. ಮಹಿಳೆಯರು, ಮಕ್ಕಳು ಮತ್ತು ಮನೆಯನ್ನು ಪೋಷಣೆ ಮಾಡುತ್ತಾರೆ. ಅವರನ್ನು ಕುಟುಂಬಕ್ಕೆ ಸೀಮಿತ ಮಾಡಿ ಕೆಲವು ಪುರುಷರು ಈ ರೀತಿ ಕಟ್ಟುಪಾಡು ಮಾಡಿದ್ದಾರೆ. ಅದಕ್ಕೆ ಧರ್ಮದ ತಳುಕು ಹಾಕಿದ್ದಾರೆ ಎಂದು ತಿಳಿಸಿದರು.
ಮಹಿಳೆ ಆಗುವುದಕ್ಕೂ ಮೊದಲು ಅವರೂ ಮನುಷ್ಯರು ಎಂಬದನ್ನು ಅರಿತುಕೊಳ್ಳಬೇಕು. ಸಮಾಜಕ್ಕೆ ಏನಾದರೂ ನೀಡಬೇಕು ಎಂಬ ಹಂಬಲಗಳಿವೆ. ಈ ನಿಟ್ಟಿನಲ್ಲಿ ಮಹಿಳೆಯರ ಆಕಾಂಕ್ಷೆಗಳನ್ನು ಹತ್ತಿಕ್ಕಿವ ಕೆಲಸ ಮಾಡಬಾರದು ಎಂದು ಹೇಳಿದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಮಾತನಾಡಿ, ಹಕ್ಕು, ನ್ಯಾಯ, ಕ್ರಮ ಈ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುಖ್ಯ ಸಂದೇಶವಾಗಿದ್ದು, ಹಣ್ಣು ತನ್ನ ಹಕ್ಕಿನ ಬಗ್ಗೆ ತಿಳಿದುಕೊಳ್ಳಬೇಕು ಎಂದರು ಹೇಳಿದರು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಸಮಿತಿಯ ರಾಜ್ಯಾಧ್ಯಕ್ಷೆ ವಿ.ಪಿ.ಸುಶೀಲಾ, ಪತ್ರಕರ್ತ ಕೆ.ದೀಪಕ್, ರಾಜೇಶ್, ಎಂ.ಪುಟ್ಟರಾಜು, ಅಮೀನ ಬೇಗಂ, ವೈ.ಬಿ.ಈಶ್ವರ್, ಪರಮೇಶ್, ಎನ್.ಕೆ.ಸುದರ್ಶನ್, ಎಚ್.ಟಿ.ಪಾರ್ವತಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net