ನೂಲು ಘಟಕದಲ್ಲಿ ಕ್ರೀಡಾಂಗಣ ನಿರ್ಮಾಣ ಬೇಡ

ತಿ.ನರಸೀಪುರ ಪಟ್ಟಣದ ರೇಷ್ಮೆ ಕಾರ್ಖಾನೆಯ ನೂಲು ತೆಗೆಯುವ ಘಟಕದ ಆವರಣದಲ್ಲಿ ಮಂಗಳವಾರ ಪರಿಸರಕ್ಕಾಗಿ ನಾವು ಸಂಘಟನೆ ಕಾರ್ಯಕರ್ತರು ಕ್ರೀಡಾಂಗಣ ನಿರ್ಮಾಣ ಮಾಡುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿದರು.
ತಿ.ನರಸೀಪುರ ಪಟ್ಟಣದ ರೇಷ್ಮೆ ಕಾರ್ಖಾನೆಯ ನೂಲು ತೆಗೆಯುವ ಘಟಕದ ಆವರಣದಲ್ಲಿ ಮಂಗಳವಾರ ಪರಿಸರಕ್ಕಾಗಿ ನಾವು ಸಂಘಟನೆ ಕಾರ್ಯಕರ್ತರು ಕ್ರೀಡಾಂಗಣ ನಿರ್ಮಾಣ ಮಾಡುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ರೇಷ್ಮೆ ಕಾರ್ಖಾನೆಯ ನೂಲು ತೆಗೆಯುವ ಘಟಕದ ಆವರಣ
  • ಪರಿಸರಕ್ಕಾಗಿ ನಾವು, ಪರಿಸರ ಕಾರ್ಯಕರ್ತರ ರಾಜ್ಯ ಸಂಘಟನೆ ಪದಾಧಿಕಾರಿಗಳು
* ಪರಿಸರಕ್ಕಾಗಿ ನಾವು ಸಂಘಟನೆಯಿಂದ ತೀವ್ರ ವಿರೋಧ
ವಿಜಯವಾಣಿ ಸುದ್ದಿಜಾಲ ತಿ.ನರಸೀಪುರ
ಪಟ್ಟಣದ ರೇಷ್ಮೆ ಕಾರ್ಖಾನೆಯ ನೂಲು ತೆಗೆಯುವ ಘಟಕದ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲು ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪರಿಸರಕ್ಕಾಗಿ ನಾವು, ಪರಿಸರ ಕಾರ್ಯಕರ್ತರ ರಾಜ್ಯ ಸಂಘಟನೆ ಪದಾಧಿಕಾರಿಗಳು ಕಾರ್ಖಾನೆಗೆ ಭೇಟಿ ನೀಡಿ, ಕ್ರೀಡಾಂಗಣ ನಿರ್ಮಾಣದಿಂದ ಪರಿಸರ ಮತ್ತು ಜೀವ ವೈವಿಧ್ಯತೆ ನಾಶದ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಪಟ್ಟಣದಲ್ಲಿರುವ ಸರ್ಕಾರಿ ಸ್ವಾಮ್ಯದ ಏಕೈಕ ಕಾರ್ಖಾನೆಯಾಗಿರುವ ರೇಷ್ಮೆ ನೂಲು ತೆಗೆಯುವ ಘಟಕಕ್ಕೆ ಆಗಮಿಸಿದ ಪರಿಸರಕ್ಕಾಗಿ ನಾವು ಕಾರ್ಯಕರ್ತರು ಆವರಣದಲ್ಲಿನ ಪರಿಸರವನ್ನು ವೀಕ್ಷಿಸಿದರು. ಕ್ರೀಡಾಂಗಣ ನಿರ್ಮಾಣದಿಂದ ಕಾರ್ಖಾನೆ ಮುಚ್ಚುವ ಸ್ಥಿತಿ ತಲುಪಲಿದೆ. ಪಾರಂಪರಿಕ ಮಹತ್ವವನ್ನು ಹೆಚ್ಚಿಸಿರುವ ಮೈಸೂರು ಸೀರೆಗಳ ತಯಾರಿಕೆಗೆ ಹೊಡೆತ ಬೀಳಲಿದೆ ಹಾಗೂ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಆತಂಕ ವ್ಯಕ್ತಪಡಿಸಿದರಲ್ಲದೆ, ರಾಜ್ಯ ಸರ್ಕಾರ ಕೂಡಲೇ ಸದರಿ ಸ್ಥಳದಲ್ಲಿ ಕ್ರೀಡಾಂಗಣ ನಿರ್ಮಾಣವನ್ನು ಕೈ ಬಿಟ್ಟು, ಸೂಕ್ತ ಅನ್ಯ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಆಗ್ರಹಿಸಿದರು.
ಪರಿಸರಕ್ಕಾಗಿ ನಾವು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಮಾತನಾಡಿ, ರೇಷ್ಮೆ ದಾರದ ಕಾರ್ಖಾನೆಯ ಭೂಮಿಯಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಯತ್ನ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾರ್ಖಾನೆಯ ಭೂಮಿ ಉಳಿಸಿ, ಪರಿಸರ ಉಳಿಸಿ ಎಂದು ಪರಿಸರದ ಬಳಗದಿಂದ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಗಿದೆ. ಕಾರ್ಖಾನೆಯ 13 ಎಕರೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು, ನೂರಾರು ಕೀಟಗಳು, 10ಕ್ಕೂ ಹೆಚ್ಚು ಬಗೆಯ ಚಿಟ್ಟೆಗಳು ಹಾಗೂ ಬೆಲೆಬಾಳುವ ಹಲವು ಜಾತಿಯ 500ಕ್ಕೂ ಹೆಚ್ಚು ಮರಗಳಿವೆ. ಈ ಪೈಕಿ ಐದು ಎಕರೆ ಜಾಗವನ್ನು ಕ್ರೀಡಾಂಗಣ ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ. ಈ ನಿರ್ಧಾರವನ್ನು ಕೈ ಬಿಟ್ಟು ಪರ್ಯಾಯಸ್ಥಳವನ್ನು ಆಯ್ಕೆ ಮಾಡಿಕೊಂಡು ಕ್ರೀಡಾಂಗಣ ನಿರ್ಮಿಸಬೇಕೆಂದು ಒತ್ತಾಯಿಸಿದರು.
ಮೈಸೂರು ಗ್ರಾಹಕ ಪರಿಷತ್ ಕಾರ್ಯದರ್ಶಿ ಪ್ರಭಾ ನಂದೀಶ್, ಶೈಲಜೇಶ್, ಪ್ರೊ. ಚೆನ್ನೇಗೌಡ, ರಂಗರಾಜು, ರವಿಬಳೆ, ಕಮಲ್ ಗೋಪಿನಾಥನ್, ಭಾನು ಪ್ರಶಾಂತ್, ವಿಶ್ವನಾಥ್, ಭಾಗ್ಯಾಶಂಕರ್, ಶೋಭಾ ಶಿವಕುಮಾರ್, ಗೀತಾ ವೇಲಮಣಿ, ಅಂಜನ, ಮಧುಶ್ರೀ, ಗಾಯತ್ರಿ, ಶಂಕರ್, ಗಂಟಯ್ಯ, ಸುಶೀಲಾ, ಗಣೇಶ್, ಲಕ್ಷ್ಮಣ್, ರಾಜೀವ್, ಸುಗುಣಾ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಕಾರ್ಯಧ್ಯಕ್ಷ ಕಿರಗಸೂರು ಶಂಕರ್, ತಾಲೂಕು ಪ್ರಧಾನ ಕಾರ್ಯದರ್ಶಿ ಕಿರಗಸೂರು ಪ್ರಸಾದ್‌ನಾಯಕ್, ಬಿ.ಪಿ.ಪರಶಿವಮೂರ್ತಿ. ಕುರುಬೂರು ಗೌರಿಶಂಕರ್, ಕರೋಹಟ್ಟಿ ಉಮೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net