ದಸರಾದಲ್ಲಿ ಕಂಬಳ ಕ್ರೀಡೆ ಬೇಡ

ದಸರಾದಲ್ಲಿ ಕಂಬಳ ಆಯೋಜನೆ ಕುರಿತು ‘ಪರಿಸರಕ್ಕಾಗಿ ನಾವು’ ಸಂಘಟನೆಯ ವತಿಯಿಂದ ಸುತ್ತೂರು ಶ್ರೀಗಳಿಗೆ ಮನವಿ ಸಲ್ಲಿಸಲಾಯಿತು. ಎ.ಟಿ.ರಾಮಸ್ವಾಮಿ, ಡಾ.ರಾಮಕೃಷ್ಣ, ಪರಶುರಾಮೇಗೌಡ, ಪ್ರೊ.ಕಾಳಚನ್ನೇಗೌಡ,  ಕೆ.ಜಿ.ಗುರುಸ್ವಾಮಿ ಇನ್ನಿತರರಿದ್ದರು.
ದಸರಾದಲ್ಲಿ ಕಂಬಳ ಆಯೋಜನೆ ಕುರಿತು ‘ಪರಿಸರಕ್ಕಾಗಿ ನಾವು’ ಸಂಘಟನೆಯ ವತಿಯಿಂದ ಸುತ್ತೂರು ಶ್ರೀಗಳಿಗೆ ಮನವಿ ಸಲ್ಲಿಸಲಾಯಿತು. ಎ.ಟಿ.ರಾಮಸ್ವಾಮಿ, ಡಾ.ರಾಮಕೃಷ್ಣ, ಪರಶುರಾಮೇಗೌಡ, ಪ್ರೊ.ಕಾಳಚನ್ನೇಗೌಡ, ಕೆ.ಜಿ.ಗುರುಸ್ವಾಮಿ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪರಿಸರಕ್ಕಾಗಿ ನಾವು ಸಂಘಟನೆಯಿಂದ ಸುತ್ತೂರು ಮಠಕ್ಕೆ ಭೇಟಿ
  • ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗೆ ಮನವಿ
ಮೈಸೂರು: ದಸರಾದಲ್ಲಿ ಕಂಬಳ ಆಯೋಜನೆ ಕುರಿತು ‘ಪರಿಸರಕ್ಕಾಗಿ ನಾವು’ ಸಂಘಟನೆಯ ಅಧ್ಯಕ್ಷ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ನಿಯೋಗವು ಮಂಗಳವಾರ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿ ಮಾಡಿತು. 
ಜತೆಗೆ, ದಸರಾದಲ್ಲಿ ಕಂಬಳ ಕ್ರೀಡೆ ಆಯೋಜನೆ ರದ್ದು ಪಡಿಸುವಂತೆ ಸಿಎಂಗೆ ಸಲಹೆ ನೀಡಲು ಮನವಿ ಸಲ್ಲಿಸಲಾಯಿತು.
ಈ ಹಿಂದೆ ತಿ.ನರಸೀಪುರ ರೇಷ್ಮೆ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ಮಾಡುವ ಯೋಜನೆಯನ್ನು ಸರ್ಕಾರ ರದ್ದು ಪಡಿಸಲು ಸಹಾಯ ಮಾಡಿದಂತೆ ಕಂಬಳ ಆಯೋಜನೆ ರದ್ದು ಪಡಿಸಲು ಕೂಡ ಸಹಾಯ ಮಾಡಬೇಕು ಎಂದು ಶ್ರೀಗಳನ್ನು ವಿನಂತಿ ಮಾಡಲಾಯಿತು. 
ಮನವಿ ಸ್ವೀಕರಿಸಿದ ಶ್ರೀಗಳು, ‘ಕಂಬಳ ಆಯೋಜನೆ ಮಾಡಲೇಬೇಕು ಎಂಬ ಪ್ರತಿಷ್ಠೆ ತಮಗಿಲ್ಲ. ಅಧಿಕಾರಿಗಳೊಂದಿಗೆ ಸಮಾಲೋಚಿಸಿ ತೀರ್ಮಾನಿಸುವೆ’ ಎಂದು ಇತ್ತೀಚೆಗೆ ಮೈಸೂರಿನಲ್ಲಿ ಸಿಎಂ ಹೇಳಿರುವುದನ್ನು ಸ್ವಾಮೀಜಿ ಸ್ಮರಿಸಿಕೊಂಡರು.
ನಿಯೋಗದಲ್ಲಿ ತೋಟಗಾರಿಕೆ ಇಲಾಖೆಯ ನಿವೃತ್ತ ನಿರ್ದೇಶಕ ಡಾ.ರಾಮಕೃಷ್ಣ, ‘ಪನಾಸಂ’ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ, ಪ್ರೊ.ಕಾಳಚನ್ನೇಗೌಡ, ಕೆ.ಜಿ.ಗುರುಸ್ವಾಮಿ ಮತ್ತು ದರ್ಶನ್ ಆಲೂರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net