ಮಾದಕ ವಸ್ತು ಸೇವನೆಯಿಂದ ದೂರವಿರಿ

  ಬೆಟ್ಟದಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಮಾದಕ ದ್ರವ್ಯಗಳು ಹಾಗೂ ಮನೋವಿಕಾರಕ ಪದಾರ್ಥಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಸಬ್ ಇನ್‌ಸ್ಪೆಕ್ಟರ್ ಅಜಯ್ ಕುಮಾರ್ ಮಾತನಾಡಿದರು. ಪಿಎಸ್‌ಐ ಕಿರಣ್,  ಕೌಸಲ್ಯಾದೇವಿ ಇತರರಿದ್ದರು.
ಬೆಟ್ಟದಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಮಾದಕ ದ್ರವ್ಯಗಳು ಹಾಗೂ ಮನೋವಿಕಾರಕ ಪದಾರ್ಥಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಸಬ್ ಇನ್‌ಸ್ಪೆಕ್ಟರ್ ಅಜಯ್ ಕುಮಾರ್ ಮಾತನಾಡಿದರು. ಪಿಎಸ್‌ಐ ಕಿರಣ್, ಕೌಸಲ್ಯಾದೇವಿ ಇತರರಿದ್ದರು.
Published on
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೆಟ್ಟದಪುರ ಪೊಲೀಸ್ ಠಾಣೆವತಿಯಿಂದ ಸೋಮವಾರ ಮಾದಕ ದ್ರವ್ಯಗಳು ಹಾಗೂ ಮನೋವಿಕಾರಕ ಪದಾರ್ಥಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಸಬ್ ಇನ್‌ಸ್ಪೆಕ್ಟರ್ ಅಜಯ್ ಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಜನರು ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಾದಕ ವಸ್ತುಗಳ ಸೇವನೆಯು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುವುದರ ಜತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳು ಶಿಕ್ಷಣದ ಕಡೆ ಹೆಚ್ಚಿನ ಗಮನಹರಿಸಿ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಉತ್ತಮ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು. ಸ್ನೇಹಿತರ ಒತ್ತಡ ಅಥವಾ ಕುತೂಹಲದಿಂದ ಯಾವುದೇ ಮಾದಕ ವಸ್ತುಗಳನ್ನು ಪ್ರಯೋಗಿಸಬಾರದು. ಮಾದಕ ವ್ಯಸನವು ವ್ಯಕ್ತಿಯ ಬದುಕು ಮಾತ್ರವಲ್ಲದೆ ಕುಟುಂಬ ಮತ್ತು ಸಮಾಜದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.
ಅನುಮಾನಾಸ್ಪದ ಚಟುವಟಿಕೆಗಳು, ಮಾದಕ ವಸ್ತುಗಳ ಮಾರಾಟ ಅಥವಾ ಸಾಗಣೆ ಕುರಿತು ಮಾಹಿತಿ ದೊರೆತಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ತಿಳಿಸುವ ಮೂಲಕ ಸಮಾಜವನ್ನು ಮಾದಕ ಮುಕ್ತವಾಗಿಸಲು ಸಹಕರಿಸುವಂತೆ ಕರೆ ನೀಡಿದರು.
ಪಿಎಸ್‌ಐ ಕಿರಣ್, ಕಾಲೇಜಿನ ಪ್ರಾಂಶುಪಾಲೆ ಕೌಶಲ್ಯಾದೇವಿ ಹಾಗೂ ಉಪನ್ಯಾಸಕರಾದ ಜ್ಯೋತಿಪ್ರಸಾದ್, ಮಣಿಕಂಠ, ಸುಮಂತ್, ಪೂಜಾ, ಕಿರಣ್, ಚೇತನ್, ಸೃಜನ್, ಕಾಲೇಜಿನ ಸಿಬ್ಬಂದಿ,ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net