ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಏಕಾಏಕಿ ಕಾರ್ಡ್ ಡಿಲೀಟ್ ಮಾಡಿದರೆ ಬಡವರಿಗೆ ಅನ್ಯಾಯವಾಗುತ್ತದೆ. ಈ ಕಾರಣಕ್ಕಾಗಿ ಸದ್ಯಕ್ಕೆ ರಾಜ್ಯದಲ್ಲಿ ಬಿಪಿಎಲ್, ಎಪಿಎಲ್ ಕಾರ್ಡ್ ಮಾಡುವುದಿಲ್ಲ. ಬಿಪಿಎಲ್ ಮಾನದಂಡ ಇಂದಿನ ಆರ್ಥಿಕ ವ್ಯವಸ್ಥೆಗೆ ಸರಿಹೋಗುತ್ತಿಲ್ಲ. ಮಾನದಂಡಗಳನ್ನು ಬದಲಾಯಿಸಬೇಕಿದೆ, ಇನ್ನೂ ಬಹಳಷ್ಟು ಅರ್ಹರು ಬಿಪಿಎಲ್ ಕಾರ್ಡ್ ನಿಂದ ಹೊರಗಡೆ ಇದ್ದು, ಅವರನ್ನು ಒಳಗಡೆ ಸೇರಿಸಬೇಕಿದೆ ಎಂದರು.