ಅಲಯನ್ಸ್ ಗ್ರೀನ್ ಪೋಸ್ಟರ್ ಸ್ಪರ್ಧೆಯಲ್ಲಿ ನಿಶಾಲ್ ಪ್ರಥಮ

ಬಹುಮಾನ ಪಡೆದ ವಿದ್ಯಾರ್ಥಿಗಳು
ಬಹುಮಾನ ಪಡೆದ ವಿದ್ಯಾರ್ಥಿಗಳು
Published on

ಪ್ರಮುಖ ಮುಖ್ಯಾಂಶಗಳು

  • 50 ಸಾವಿರ ರೂ. ನಗದು ಬಹುಮಾನ, ಪ್ರಶಸ್ತಿ ಫಲಕ ಹಾಗೂ ಪ್ರಮಾಣಪತ್ರ
  • ಅಸೋಸಿಯೇಷನ್‌ನ ವಾರ್ಷಿಕ ಅಂತಾರಾಷ್ಟ್ರೀಯ ಸಮಾವೇಶದ ಪ್ರಶಸ್ತಿ ಪ್ರದಾನ

ಮೈಸೂರು:

ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್ ನ್ಯಾಷನಲ್ನಿಂದ 2026-27ನೇ ಸಾಲಿನಲ್ಲಿ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ‘ಪ್ರಕೃತಿಯಿಂದ ಪ್ರೇರಿತ, ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ’ ಘೋಷ ವಾಕ್ಯದ ಅಂತಾರಾಷ್ಟ್ರೀಯ ಮಟ್ಟದ ಅಲಯನ್ಸ್ ಗ್ರೀನ್ ಪೋಸ್ಟರ್ ಸ್ಪರ್ಧೆಯಲ್ಲಿ ನಗರದ ಇಬ್ಬರು ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದಾರೆ.

ವಿಜಯನಗರ 4ನೇ ಹಂತದ ಎಸ್‌ವಿಇಐ ಶಾಲೆಯ ಎಲ್.ನಿಶಾಲ್ ಮಾನೆ ಪ್ರಥಮ ಸ್ಥಾನ ಪಡೆದು 50 ಸಾವಿರ ರೂ.ಬಹುಮಾನ, ಪ್ರಶಸ್ತಿ ಫಲಕ ಹಾಗೂ ಪ್ರಮಾಣಪತ್ರಕ್ಕೆ ಭಾಜನರಾಗಿದ್ದಾರೆ. ಅಲ್ಲದೇ ಬೇಡನ್ ಪೊವೆಲ್ ಪಬ್ಲಿಕ್ ಸ್ಕೂಲ್‌ನ ಅಭಿನಂದನ್ ಎಸ್. ಗವಿಮಠ್ ಸಮಾಧಾನಕರ ಬಹುಮಾನ ಪಡೆದು 5 ಸಾವಿರ ರೂ. ಹಾಗೂ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ.
ವಿವಿಧ ಜಿಲ್ಲೆಗಳಿಂದ ಬಂದ ಅಂತಿಮ ಸುತ್ತಿನ ಕಲಾಕೃತಿಗಳನ್ನು ಹೈದರಾಬಾದ್‌ನ ಜೆಎನ್‌ಎಫ್‌ಎಯು ಕಾಲೇಜ್ ಆಫ್ ಫೈನ್ ಆರ್ಟ್ಸ್ ಸಹಾಯಕ ಪ್ರಾಧ್ಯಾಪಕರು ಮೌಲ್ಯಮಾಪನ ಮಾಡಿದ್ದರು. ವಿಜೇತರಿಗೆ 2027ರ ಮಾರ್ಚ್‌ನಲ್ಲಿ ಆಯೋಜಿಸುವ ಅಸೋಸಿಯೇಷನ್‌ನ ವಾರ್ಷಿಕ ಅಂತಾರಾಷ್ಟ್ರೀಯ ಸಮಾವೇಶದ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಈ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಿದ ಹಿನ್ನೆಲೆಯಲ್ಲಿ ಜಿಲ್ಲೆ 255(ಎಸ್)ರ ಜಿಲ್ಲಾ ಗವರ್ನರ್ ಮಹಾಬಲೇಶ್ವರ ಬೈರಿ ಅವರಿಗೆ ಅಂತಾರಾಷ್ಟ್ರೀಯ ಸಂಸ್ಥೆಯು ವಿಶೇಷ ಮನ್ನಣಾ ಪ್ರಶಸ್ತಿ ಘೋಷಿಸಿದೆ.
ಅಂತಾರಾಷ್ಟ್ರೀಯ ಕಾರ್ಯದರ್ಶಿ ಡಾ.ನಾಗರಾಜ್ ವಿ. ಬೈರಿ, ಮುಖ್ಯ ಸಂಯೋಜಕ ಚಿಕ್ಕಣ್ಣ, ಸಂಯೋಜಕಿ ಶ್ವೇತಾ ದಿನೇಶ್ ವಿಜೇತರನ್ನು ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net