ಹುಣಸೂರು ನಗರದ ರಾಷ್ಟ್ರೀಯ ಕೃಷಿ ವಾಣಿಜ್ಯ ಸಂಶೋಧನಾ ಕೇಂದ್ರದಲ್ಲಿ ನಿವೃತ್ತಿ ಹೊಂದಿದ ಲಲಿತಾ ಅವರನ್ನು ಕೇಂದ್ರದ ವತಿಯಿಂದ ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್ ಸನ್ಮಾನಿಸಿದರು. ಡಾ.ರಾಘವೇಂದ್ರ, ಡಾ.ನಂದಾ, ಡಾ.ವೆಂಕಟೇಶ್ ಇತರರಿದ್ದರು.
ಹುಣಸೂರು: ನಗರದ ರಾಷ್ಟ್ರೀಯ ವಾಣಿಜ್ಯ ಕೃಷಿ ಸಂಶೋಧನಾ ಕೇಂದ್ರ(ಎನ್‌ಐಆರ್‌ಸಿಎ)ದಲ್ಲಿ 40 ವರ್ಷಗಳಿಂದ ಸಸಿ ವಂಶಾಭಿವೃದ್ಧಿ ವಿಭಾಗದ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡ ಲಲಿತಾ ಅವರನ್ನು ಸಂಸ್ಥೆ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಕೇಂದ್ರದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಲಲಿತಾರಿಗೆ ಕೇಂದ್ರದ ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್ ಗೌರವಿಸಿದರು. ಈ ವೇಳೆ ಮಾತನಾಡಿದ ಅವರು, ಹುಣಸೂರಿನಲ್ಲಿ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರವಾಗಿ ಸ್ಥಾಪನೆಯಾಗಿ 7 ವಸಂತಗಳೇ ಕಳೆದಿವೆ. ಇದೀಗ ಕೇಂದ್ರವು ರಾಷ್ಟ್ರೀಯ ವಾಣಿಜ್ಯ ಕೃಷಿ ಸಂಶೋಧನಾ ಕೇಂದ್ರವಾಗಿ ಪರಿವರ್ತಿತಗೊಂಡಿದೆ. 40 ವರ್ಷಗಳಿಂದ ತಂಬಾಕು ಕೃಷಿಯಲ್ಲಿ ಈ ಭಾಗದ ತಂಬಾಕು ಕೃಷಿಕರಿಗೆ ಕೇಂದ್ರವು ತನ್ನದೇ ಆದ ಸಲಹೆ, ಸೂಚನೆಗಳೊಂದಿಗೆ ಕೇಂದ್ರವೇ ಅಭಿವೃದ್ಧಿಪಡಿಸಿದ ಎಫ್‌ಸಿಎಚ್ 222 ಮತ್ತು ಎಫ್‌ಸಿಎಚ್ 246 ತಳಿಗಳ ಅಭಿವೃದ್ಧಿ ಕಾರ್ಯದಲ್ಲಿ ವಿಜ್ಞಾನಿಗಳಿಗೆ ಅತ್ಯುತ್ತಮವಾಗಿ ಸಹಕಾರ ನೀಡಿದರು. ಅವರ ಕೌಶಲಯುತ ಕಾರ್ಯಗಳು ನಮ್ಮ ಕಾರ್ಯದೊತ್ತಡವನ್ನು ಕಡಿಮೆ ಮಾಡಿದ್ದವು. ಇದೀಗ ಅವರು ನಿವೃತ್ತಿ ಹೊಂದಿರುವುದು ಅವರ ಸೇವೆಯ ಸಾರ್ಥಕತೆಯನ್ನು ನಾನು ಎಂದಿಗೂ ನೆನಪಿಸಿಕೊಳ್ಳಲಿದ್ದೇವೆ ಎಂದು ಶ್ಲಾಘಿಸಿದರು.
ಸಮಾರಂಭದಲ್ಲಿ ಹಿರಿಯ ವಿಜ್ಞಾನಿಗಳಾದ ಡಾ.ರಾಘವೇಂದ್ರ, ಡಾ.ನಂದಾ, ವೆಂಕಟೇಶ್, ತಾಂತ್ರಿಕ ಸಿಬ್ಬಂದಿ, ಆಡಳಿತಾತ್ಮಕ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.