ಶಾಲೆ, ಹುಟ್ಟೂರು ಎಂದಿಗೂ ಮರೆಯದಿರಿ:ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಸಲಹೆ

ಹುಣಸೂರು ತಾಲೂಕು ಹಿಂಡಗೂಡ್ಲು ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಲಾಗೈಡ್ ಬಳಗ’ದಿಂದ ಸರ್ಕಾರಿ ಶಾಲಾ, ಕಾಲೇಜಿಗೆ ಒಂದು ಲಕ್ಷ ರೂ. ವೆಚ್ಚದ ಕಂಪ್ಯೂಟರ್, ಕ್ರೀಡಾ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು. ಡಾ.ಪಿ.ಶಿವರಾಜು, ಎಚ್.ಎನ್.ವೆಂಕಟೇಶ್, ಹರೀಶ್‌ಕುಮಾರ್ ಹೆಗ್ಡೆ, ಎಂ.ಬಿ.ಮರಂಕಲ್,  ಮಹದೇವ್, ದಾ.ರಾ.ಮಹೇಶ್, ಕೇಶವಮೂರ್ತಿ, ಶ್ರೀನಿವಾಸಮೂರ್ತಿ, ಶಿವಕುಮಾರ್ ಇತರರು ಇದ್ದರು.
ಹುಣಸೂರು ತಾಲೂಕು ಹಿಂಡಗೂಡ್ಲು ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಲಾಗೈಡ್ ಬಳಗ’ದಿಂದ ಸರ್ಕಾರಿ ಶಾಲಾ, ಕಾಲೇಜಿಗೆ ಒಂದು ಲಕ್ಷ ರೂ. ವೆಚ್ಚದ ಕಂಪ್ಯೂಟರ್, ಕ್ರೀಡಾ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು. ಡಾ.ಪಿ.ಶಿವರಾಜು, ಎಚ್.ಎನ್.ವೆಂಕಟೇಶ್, ಹರೀಶ್‌ಕುಮಾರ್ ಹೆಗ್ಡೆ, ಎಂ.ಬಿ.ಮರಂಕಲ್, ಮಹದೇವ್, ದಾ.ರಾ.ಮಹೇಶ್, ಕೇಶವಮೂರ್ತಿ, ಶ್ರೀನಿವಾಸಮೂರ್ತಿ, ಶಿವಕುಮಾರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇಂದಿನ ಡಿಜಿಟಲ್ ಯುಗದಲ್ಲಿ ಶಿಕ್ಷಣ ಎಂದರೆ, ಕೇವಲ ಪುಸ್ತಕಾಧಾರಿತ ಅಧ್ಯಯನವಲ್ಲ. ತಾಂತ್ರಿಕ ಜ್ಞಾನವೂ ಮಕ್ಕಳಿಗೆ ಸಮಾನವಾಗಿ ಅಗತ್ಯವಾಗಿದೆ
  • ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶದ ಮಕ್ಕಳಿಗಿಂತ ಶಿಕ್ಷಣ ಅಲ್ಲದೆ ಶಿಕ್ಷಣೇತರ ಕಾರ್ಯಕ್ರಮದಲ್ಲಿ ಬಹಳಷ್ಟು ಬಲಿಷ್ಠರಾಗಿದ್ದಾರೆ
ಮೈಸೂರು: ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಶಾಲೆ, ಹುಟ್ಟೂರು ಎಂದಿಗೂ ಮರೆಯಬಾರದು ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಹೇಳಿದರು.
ಹುಣಸೂರು ತಾಲೂಕು ಹಿಂಡಗೂಡ್ಲು ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಲಾಗೈಡ್ ಬಳಗ’ದಿಂದ ಕಿರಂಗೂರು ಕ್ಲಸ್ಟರ್ ವ್ಯಾಪ್ತಿಯ ನಾಲ್ಕು ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಕಾಲೇಜಿಗೆ ಒಂದು ಲಕ್ಷ ರೂ.ವೆಚ್ಚದ ಕಂಪ್ಯೂಟರ್, ಕ್ರೀಡಾ ಪರಿಕರಗಳನ್ನು ವಿತರಿಸಿ ಮಾತನಾಡಿ, ಇದಕ್ಕೆ ಉದಾಹರಣೆಯಾಗಿ ಹಿರಿಯ ವಕೀಲ ಎಚ್.ಎನ್.ವೆಂಕಟೇಶ್ ಅವರು, ದೇವಾಲಯ ನಿರ್ಮಾಣಕ್ಕೆ ನೆರವು ನೀಡಿರುವುದಲ್ಲದೆ ಕಲಿತ ಶಾಲೆಗೆ ಶಿಕ್ಷಣಕ್ಕೆ ಪೂರಕವಾದ ಸಾಮಗ್ರಿಗಳನ್ನು ನೀಡುತ್ತಿರುವುದು ಸಂತೋಷ ತಂದಿದೆ ಎಂದರು.
ಅಲ್ಲದೆ, ಸರ್ಕಾರದಿಂದ 3.25ಕೋಟಿ ರೂ. ವಿಶೇಷ ಅನುದಾನ ತಂದು ರಸ್ತೆ ಅಭಿವೃದ್ಧಿ ಮಾಡಿರುವುದು ಸಹ ಹುಟ್ಟೂರಿನ ಕುರಿತು ಅವರಿಗೆ ಇರುವ ವಿಶೇಷ ಪ್ರೀತಿಯನ್ನು ತೋರುತ್ತದೆ. ಹುಟ್ಟೂರಿನ ಅಭಿವೃದ್ಧಿ ಆಗಬೇಕು ಎಂಬ ಅವರ ಕನಸು ಈಡೇರಲು ಗ್ರಾಮಸ್ಥರು ಸಹಕರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ವಕೀಲ ಹರೀಶ್‌ಕುಮಾರ್‌ಹೆಗ್ಡೆ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಶಿಕ್ಷಣ ಎಂದರೆ, ಕೇವಲ ಪುಸ್ತಕಾಧಾರಿತ ಅಧ್ಯಯನವಲ್ಲ. ತಾಂತ್ರಿಕ ಜ್ಞಾನವೂ ಮಕ್ಕಳಿಗೆ ಸಮಾನವಾಗಿ ಅಗತ್ಯವಾಗಿದೆ. ಮಕ್ಕಳು ಭವಿಷ್ಯದಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಾತ್ಮಕವಾಗಿ ಬೆಳೆಯಬೇಕಾದರೆ, ಕಂಪ್ಯೂಟರ್ ಹಾಗೂ ತಂತ್ರಜ್ಞಾನ ಆಧಾರಿತ ಅಧ್ಯಯನವೇ ಅವಶ್ಯಕ ಎಂದರು.
ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಡಿಜಿಟಲ್ ಜ್ಞಾನವನ್ನು ತಲುಪಿಸುವುದೇ ಇದರ ಉದ್ದೇಶವಾಗಿದೆ. ಸಾಮಾಜಿಕ ಜವಾಬ್ದಾರಿಯ ಅಂಗವಾಗಿ ಈ ಸೇವೆಯನ್ನು ಕೈಗೊಂಡಿರುವುದು ಮಾದರಿ ನಡೆಯಾಗಿದೆ. ಆದ್ದರಿಂದ ಈ ಶಾಲೆಯ ಕ್ರೀಡಾ ಸಾಮಗ್ರಿಗಳನ್ನು ಕೊಳ್ಳಲು ವೈಯಕ್ತಿಕವಾಗಿ 51 ಸಾವಿರ ರೂ. ಕೊಡುಗೆ ನೀಡುವುದಾಗಿ ಹೇಳಿದರು.
ಹಿರಿಯ ವಕೀಲ ‘ಲಾಗೈಡ್’ಎಚ್.ಎನ್. ವೆಂಕಟೇಶ್ ಮಾತನಾಡಿ, ನನ್ನ ತಂದೆ ಈ ಊರಿನಲ್ಲಿ ಹುಟ್ಟಿ ಶಿಕ್ಷಕರಾಗಿ ಹಲವರ ವಿದ್ಯಾರ್ಜನೆಗೆ ಕಾರಣರಾಗಿದ್ದಾರೆ. ಅಂತಹ ಕುಟುಂಬದಿಂದ ಬಂದ ನಾನು ಹುಟ್ಟಿದ ಊರಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಸದುದ್ದೇಶದಿಂದ ಈ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದೇನೆ. ಗ್ರಾಮಸ್ಥರು ಸಹ ಸಹಕಾರ ನೀಡುತ್ತಿರುವುದು ತುಂಬ ಸಂತೋಷ ಎಂದು ಹೇಳಿದರು.
ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಉದಯಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶದ ಮಕ್ಕಳಿಗಿಂತ ಶಿಕ್ಷಣ ಅಲ್ಲದೆ ಶಿಕ್ಷಣೇತರ ಕಾರ್ಯಕ್ರಮದಲ್ಲಿ ಬಹಳಷ್ಟು ಬಲಿಷ್ಠರಾಗಿದ್ದಾರೆ. ಶಿಕ್ಷಕರು ಅವರನ್ನು ಸರಿಯಾದ ದಾರಿಗೆ ತಂದು ತರಬೇತಿ ನೀಡಿದ್ದಲ್ಲಿ ಉತ್ತಮ ನಾಗರಿಕರಾಗಿ ಮಾಡಬಹುದು ಎಂದರು
ಬಿಇಒ ಮಹದೇವ್, ಅಧಿಕಾರಿಗಳಾದ ಕೇಶವಮೂರ್ತಿ, ಶ್ರೀನಿವಾಸಮೂರ್ತಿ, ಮುಖಂಡರಾದ ಶಿವಕುಮಾರ್, ರಾಜೇಗೌಡ (ಅಜ್ಜ), ಶೇಖರ್, ಕುಮಾರ್, ಮಂಜು, ಚೇತನ್ ರಾಮೇಗೌಡ, ಶೇಖರೇಗೌಡ, ವೆಂಕಟೇಶ್, ಹಿರಿಯ ಪತ್ರಕರ್ತರಾದ ಎಂ.ಬಿ. ಮರಮಕಲ್, ರಾಮ್, ಕೆ.ಪಿ. ನಾಗರಾಜ್, ಲಾರೆನ್ಸ್ ಮಿಲ್ಟನ್, ದಾ.ರಾ. ಮಹೇಶ್, ಶಿಕ್ಷಕರಾದ ಚಂದ್ರಶೇಖರ, ರಮೇಶ್, ಸಮಿತಿ ಸದಸ್ಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net