ನವನಗರ ಸಹಕಾರ ಬ್ಯಾಂಕ್ 13 ಜನ ನಿರ್ದೇಶಕರ ಆಯ್ಕೆ

 ಪಟ್ಟಣದ ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಚಿತ್ರ.
ಪಟ್ಟಣದ ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಚಿತ್ರ.
Published on

ಪ್ರಮುಖ ಮುಖ್ಯಾಂಶಗಳು

  • ಕೆ.ಎನ್.ಬಸಂತ್ ಸೇರಿ ಹಲವರು ಮತ್ತೆ ಅವಿರೋಧ ಆಯ್ಕೆ
ಕೆ.ಆರ್.ನಗರ : ಪಟ್ಟಣದ ಹೆಸರಾಂತ ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ 2026-31ನೇ ಸಾಲಿಗೆ ಆಡಳಿತ ಮಂಡಳಿಯ ನೂತನ ನಿರ್ದೇಶಕರಾಗಿ 13 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಜ.31ರಂದು 13 ಜನರನ್ನು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದಿದ್ದರಿಂದ 13 ಜನರೂ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಮೈಸೂರಿನ ಸಹಕಾರ ಸಂಘಗಳ ಜಂಟಿ ನಿಬಂಧಕರ ಕಚೇರಿಯ ಎಂ.ಎನ್.ಸೋಮಶೇಖರ್ ಪ್ರಕಟಿಸಿದರು.
 ಕೆ.ಎನ್.ಬಸಂತ್ , ಅಧ್ಯಕ್ಷರು, ನವನಗರ ಅರ್ಬನ್ ಬ್ಯಾಂಕ್
ಸಾಮಾನ್ಯ ವರ್ಗದಿಂದ ಎಚ್.ಎಸ್.ಲೋಕೇಶ್, ಕೆ.ಎನ್.ಬಸಂತ್, ಸಿ.ಪಿ.ಎಸ್.ಲೋಕೇಶ್, ಕೆ.ಎನ್. ರಮೇಶರಾವ್ ಕದಂ, ಅಶೋಕ ಕುಮಾರ್, ಎಚ್.ಟಿ. ಗೋಪಾಲೇಗೌಡ, ಜೆ.ವೆಂಕಟೇಶ್, ಮಹಿಳಾ ಮೀಸಲಾತಿಯಿಂದ ಡಾ.ಎಂ.ಪಿ.ಸುಮತಿ, ವೀಣಾ ಕುಮಾರ್, ಹಿಂದುಳಿದ ಪ್ರವರ್ಗ ಎ ಯಿಂದ ಮರಿಲಿಂಗಾಚಾರ್, ಹಿಂದುಳಿದ ಪ್ರವರ್ಗ ಬಿ ಯಿಂದ ಚೇತನಾ, ಪರಿಶಿಷ್ಟ ಜಾತಿಯಿಂದ ಎಸ್.ಮಹದೇವಯ್ಯ, ಪರಿಶಿಷ್ಟ ಪಂಗಡದಿಂದ ಎಲ್.ರಂಗನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಸಿ.ಸುರೇಶ್ ಹಾಗೂ ಬ್ಯಾಂಕ್ ವ್ಯವಸ್ಥಾಪಕ ಎಂ.ಪಿ.ಸುಹಾಸ್ ಗೌಡ ನೂತನ ಆಡಳಿತ ಮಂಡಳಿಯ ನಿರ್ದೇಶಕರನ್ನು ಅಭಿನಂದಿಸಿದರು.
ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಆರು ಬಾರಿ ಆಡಳಿತ ಮಂಡಳಿಯ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಮೂರು ಬಾರಿ ಬ್ಯಾಂಕ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿ ಗ್ರಾಹಕರಿಗೆ ಉತ್ತಮ ಆಡಳಿತ ವ್ಯವಸ್ಥೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net