ಶಿಕ್ಷಣದ ಜತೆಗೆ ಬದುಕುವ ಕಲೆ ಕಲಿಸಿರಿ

ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದ ಜೆಎಸ್‌ಎಸ್ ವಸತಿ ಶಾಲೆಯ ವಿದ್ಯಾರ್ಥಿ ಸಂಘವನ್ನು ನೂಪುರ ನೃತ್ಯ ಶಾಲೆಯ ನಿರ್ದೇಶಕ ನಾಟ್ಯಾಚಾರ್ಯ ಪ್ರೊ.ಕೆ. ರಾಮಮೂರ್ತಿರಾವ್ ಶನಿವಾರ ಉದ್ಘಾಟಿಸಿದರು.
ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದ ಜೆಎಸ್‌ಎಸ್ ವಸತಿ ಶಾಲೆಯ ವಿದ್ಯಾರ್ಥಿ ಸಂಘವನ್ನು ನೂಪುರ ನೃತ್ಯ ಶಾಲೆಯ ನಿರ್ದೇಶಕ ನಾಟ್ಯಾಚಾರ್ಯ ಪ್ರೊ.ಕೆ. ರಾಮಮೂರ್ತಿರಾವ್ ಶನಿವಾರ ಉದ್ಘಾಟಿಸಿದರು.
Published on
ನಂಜನಗೂಡು: ಶಿಕ್ಷಣದ ಜತೆಗೆ ಎಲ್ಲ ಕೆಲಸಗಳನ್ನು ನಿರ್ವಹಿಸುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಹಾಗೂ ಬದುಕುವ ಕಲೆ ತಿಳಿಯುತ್ತದೆ ಎಂದು ಮೈಸೂರಿನ ನೂಪುರ ನೃತ್ಯ ಶಾಲೆಯ ನಿರ್ದೇಶಕ ನಾಟ್ಯಾಚಾರ್ಯ ಪ್ರೊ.ಕೆ.ರಾಮಮೂರ್ತಿರಾವ್ ತಿಳಿಸಿದರು.
ಅವರು ಸುತ್ತೂರು ಗ್ರಾಮದ ವಸತಿ ಶಾಲೆಯ ವಿದ್ಯಾರ್ಥಿ ಸಂಘವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಶಿಕ್ಷಣ ಹಾಗೂ ಇಂದಿನ ಶಿಕ್ಷಣಕ್ರಮಗಳನ್ನು ಹೋಲಿಕೆ ಮಾಡುತ್ತಾ ಇಂದು ನಾವೆಲ್ಲರೂ ಕ್ರಿಯಾಶೀಲರಾಗಬೇಕು, ಯಾವುದೇ ಕೆಲಸವನ್ನು ಧೈರ್ಯದಿಂದ ಮಾಡಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯ ಮತ್ತು ಸಹಪಠ್ಯ ಚಟುವಟಿಕೆ ಅತ್ಯಂತ ಅವಶ್ಯ ಎಂದು ತಿಳಿಸಿದರು.
ಮೈಸೂರಿನ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಡೀನ್ ಡಾ.ಎಂ.ಎನ್.ನಾಗೇಂದ್ರ ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳಾದ ನೀವು ಕನಸುಕಾಣಬೇಕು. ಮಲಗಿದ್ದಾಗ ಕಾಣುವುದು ಕನಸಲ್ಲ, ನಿದ್ರೆ ಮಾಡಲು ಬಿಡದೇ ಇರುವ ಹಾಗೇ ಮಾಡುವುದೇ ಕನಸು ಎಂಬ ಅಬ್ದುಲ್ ಕಲಾಂ ಅವರ ನುಡಿಯನ್ನು ನೆನಪಿಸಿದ ಅವರು, ವಿದ್ಯಾವಂತರಲ್ಲಿ ಕೃತಜ್ಞತಾ ಭಾವ ಇರಬೇಕು. ನಾವು ಓದಿದ ಸಂಸ್ಥೆಗೆ ನಮ್ಮ ಕೈಲಾದ ಸಹಾಯ ಮಾಡಬೇಕು ಎಂದು ತಿಳಿಸಿದರು.
ಮೈಸೂರಿನ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸಹ ಪ್ರಾಧ್ಯಾಪಕ ಡಾ.ಅಶ್ವಿನಿ ಪ್ರಸಾದ್ ಮಾತನಾಡಿ, ವಿದ್ಯಾರ್ಥಿ ಸಂಘದ ನಾಯಕರಾದವರು ಇತರ ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕು. ನಾವು ಬೇರೆಯವರ ಸಂತೋಷದಲ್ಲಿ ನಮ್ಮ ಸಂತೋಷವನ್ನು ಕಾಣಬೇಕು ಎಂದು ಹೇಳಿದರು.
ಸಂಸ್ಥೆಗಳ ಸಹಾಯಕ ಸಂಯೋಜನಾಧಿಕಾರಿ ವೀರಭದ್ರಯ್ಯ, ಹಿರಿಯ ವಿದ್ಯಾರ್ಥಿ ಡಾ.ಎಸ್.ಹರ್ಷವರ್ಧನ್, ಸುತ್ತೂರು ಜೆಎಸ್‌ಎಸ್ ಸಂಸ್ಥೆಗಳ ಸಹಾಯಕ ಆಡಳಿತಾಧಿಕಾರಿ ಬಿ.ಎಲ್.ತ್ರಿಪುರಾಂತಕ, ಮುಖ್ಯಸ್ಥರಾದ ಬಿ.ಎನ್.ಜ್ಞಾನೇಶ್, ಡಾ.ಎಚ್. ಎಂ.ಮಹೇಶ್, ರಾಜಶೇಖರಮೂರ್ತಿ, ಜಿ.ಶಿವಮಲ್ಲು, ಮ.ಗು. ಬಸವಣ್ಣ, ಜಿ.ಎಂ.ಷಡಕ್ಷರಿ, ಶಿವಸ್ವಾಮಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net