ಮತದಾನದ ಹಕ್ಕು ಚಲಾಯಿಸಿದ ವಿದ್ಯಾರ್ಥಿಗಳು

ಲಯನ್ಸ್ ವಿದ್ಯಾಸಂಸ್ಥೆಯಲ್ಲಿ ಶಾಲಾ ಮಂತ್ರಿಯ ಮಂಡಲ ರಚನೆ ಬಳಿಕ ವಿದ್ಯಾರ್ಥಿಗಳಿಗೆ ಮುಖ್ಯಶಿಕ್ಷಕ ಕೆ.ಎಸ್.ಮಹೇಶ್ ಪ್ರಮಾಣ ವಚನ ಬೋಧಿಸಿದರು.
ಲಯನ್ಸ್ ವಿದ್ಯಾಸಂಸ್ಥೆಯಲ್ಲಿ ಶಾಲಾ ಮಂತ್ರಿಯ ಮಂಡಲ ರಚನೆ ಬಳಿಕ ವಿದ್ಯಾರ್ಥಿಗಳಿಗೆ ಮುಖ್ಯಶಿಕ್ಷಕ ಕೆ.ಎಸ್.ಮಹೇಶ್ ಪ್ರಮಾಣ ವಚನ ಬೋಧಿಸಿದರು.
Published on
ನಂಜನಗೂಡು: 1ರಿಂದ 10ನೇ ತರಗತಿ ಮಕ್ಕಳಿಗೆ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿಯೇ ಚುನಾವಣೆ ನಡೆಸಿ ಮಂತ್ರಿಮಂಡಲ ರಚನೆ ಮಾಡಲಾಯಿತು.
ಗುರುವಾರ ಬೆಳಗ್ಗೆ 9 ಗಂಟೆಯಿಂದ ನಡೆದ ಮತದಾನ ಪ್ರಕ್ರಿಯೆಯಲ್ಲಿ 5ನೇ ತರಗತಿಯಿಂದ 10ನೇ ತರಗತಿಯವರೆಗೆ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಮತ ಚಲಾಯಿಸಿದರು.
ಸಾರ್ವತ್ರಿಕ ಮತದಾನದ ಮಾದರಿಯಲ್ಲಿಯೇ ಶಾಲಾ ಕೊಠಡಿಯಲ್ಲಿ ಬೂತ್ ನಿರ್ಮಿಸಿ, ತೋರು ಬೆರಳಿಗೆ ಶಾಯಿ ಹಚ್ಚಿ ಗೌಪ್ಯ ಮತದಾನ ಮಾಡಿಸಲಾಯಿತು.
ಮುಖ್ಯಮಂತ್ರಿಯಾಗಿ ರಶ್ಮಿ, ಉಪ ಮುಖ್ಯಮಂತ್ರಿಯಾಗಿ ಪ್ರಥಮ್, ಶಿಕ್ಷಣ ಮಂತ್ರಿಯಾಗಿ ಎಂ.ಸೃಜನ್, ಚೈತನ್ಯ, ಸಾಂಸ್ಕೃತಿಕ ಮಂತ್ರಿಯಾಗಿ ಆರ್.ಯುಕ್ತ, ವಿ.ಖುಷಿ, ಕ್ರೀಡಾ ಮಂತ್ರಿಯಾಗಿ ಸುಪ್ರೀತಾ, ಸಮರ್ಥ್, ಪರಿಸರ ಮಂತ್ರಿಯಾಗಿ ಅನುಷ್, ಸಮೀಕ್ಷಾ ಕುಮಾರಿ ಅವರು ಶಾಲಾ ಮಂತ್ರಿ ಮಂಡಲಕ್ಕೆ ಆಯ್ಕೆಯಾದರು.
ಆಯ್ಕೆಯಾದ 32 ಇಲಾಖೆ ಮಂತ್ರಿಗಳಿಗೆ ಮುಖ್ಯಶಿಕ್ಷಕ ಕೆ.ಎಸ್.ಮಹೇಶ್ ಪ್ರಮಾಣವಚನ ಬೋಧಿಸಿದರು.
ಮುಖ್ಯಶಿಕ್ಷಕ ಕೆ.ಎಸ್.ಮಹೇಶ್ ಮಾತನಾಡಿ, ನಮ್ಮ ಶಾಲೆಯಲ್ಲಿ ನಡೆದ ಮತದಾನದ ಮಾದರಿಯಲ್ಲಿಯೇ ರಾಜ್ಯದಲ್ಲಿ ವಿಧಾನಸಭೆ, ಲೋಕಸಭೆ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಚುನಾವಣೆಗಳು ನಡೆಯುತ್ತವೆ. ನಾವು ಮತದಾನ ಮಾಡುವ ಮೂಲಕ ನಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತೇವೆ. ಆಯ್ಕೆ ಮಾಡುವ ಮೊದಲು ನಾವು ಜನಪ್ರತಿನಿಧಿಗಳ ಬಗ್ಗೆ ತಿಳಿದು ಕೊಳಬೇಕು ಎಂದರು.
ಮತದಾನ ನಮ್ಮ ಜೀವನದ ಬಹಳ ಪ್ರಮುಖ ಘಟ್ಟ. ಪ್ರತಿಯೊಬ್ಬ ಅರ್ಹ ಪ್ರಜೆಯೂ ತಪ್ಪದೆ ಮತದಾನ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಬೋಧಿಸಿದರು.
ಶಾಲಾ ಶಿಕ್ಷಕರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net