ನಂಜನಗೂಡು ಸರ್ವೇಯರ್ ಜಯಪ್ರಕಾಶ್ ಲೋಕಾಯುಕ್ತ ಬಲೆಗೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮೈಸೂರು: ಜಮೀನಿಗೆ ತತ್ಕಾಲ್ ಪೋಡಿ ಮಾಡಿಕೊಡಲು ನಂಜನಗೂಡು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೇಯರ್ ಜಯಪ್ರಕಾಶ್ ರೈತರೊಬ್ಬರಿಂದ ಗುರುವಾರ ಲಂಚ ಪಡೆಯುತ್ತಿದ್ದ ಸಂದರ್ಭ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸರ್ವೇಯರ್ ಜಯಪ್ರಕಾಶ್ ಪೋಡಿ ಮಾಡಿಕೊಡಲು 1.20 ಲಕ್ಷ ರೂ. ಲಂಚ ಕೇಳಿದ್ದರು. ಈ ಕುರಿತು ರೈತ ಲೋಕಾಯುಕ್ತಗೆ ದೂರು ನೀಡಿದ್ದರು. ಜಯಪ್ರಕಾಶ್ ಲಂಚ ಪಡೆಯುತ್ತಿದ್ದ ಸಂದರ್ಭ ಲೋಕಾಯುಕ್ತ ಅಧಿಕಾರಿಗಳು ನಡೆಸಿ ಆರೋಪಿಯನ್ನು ವಶಕ್ಕೆ ಪಡೆದರು.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಟಿ.ಜೆ. ಉದೇಶ, ಪೊಲೀಸ್ ಉಪ ಅಧೀಕ್ಷಕ ಶೈಲೇಂದ್ರ, ಪೊಲೀಸ್ ನಿರೀಕ್ಷಕ ವಿಜಯ್ ಕುಮಾರ್, ಸಿಬ್ಬಂದಿ ಪ್ರಕಾಶ್, ಎಚ್.ಎನ್. ಗೋಪಿ, ಲೋಕೇಶ್ ರಾಜೇ ಅರಸ್, ಮೋಹನ್‌ಗೌಡ, ಕೆಂಪರಾಜು, ತ್ರಿವೇಣಿ, ಸುಮ, ಪ್ರದೀಪ್, ದಿನೇಶ್ ಪಾಲ್ಗೊಂಡಿದ್ದರು.
ಮದ್ಯ ನಾಶ: ನಗರದ ಕೂರ್ಗಳ್ಳಿಯ ಕೆಎಸ್‌ಬಿಸಿಎಲ್ ಲಿಕ್ಕರ್ ಡಿಪೋದಲ್ಲಿ ಅವಧಿ ಮೀರಿದ 24 ಲಕ್ಷ ರೂ.ಮೌಲ್ಯದ ಬಿಯರ್ ಹಾಗೂ ವೈನ್‌ಗಳನ್ನು ಗುರುವಾರ ನಾಶ ಪಡಿಸಲಾಯಿತು. ಅಬಕಾರಿ ಉಪ ಆಯುಕ್ತ ಜಿ.ವಿವೇಕ್ ಆದೇಶದ ಮೇರೆಗೆ ಅಬಕಾರಿ ಉಪ ಅಧೀಕ್ಷಕ ಎಲ್.ಬಿ. ವಿಕ್ರಮ್ ನೇತೃತ್ವದಲ್ಲಿ ಮದ್ಯವನ್ನು ನಾಶ ಪಡಿಸಲಾಯಿತು. ಅವಧಿ ಮೀರಿದ ವಿವಿಧ ಬ್ರಾಂಡಿನ 8870 ಲೀಟರ್, 1216 ಲೀಟರ್ ವೈನ್ ಇತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net