ನಾಳೆಯಿಂದ ಅಯ್ಯಪ್ಪಸ್ವಾಮಿ ಬ್ರಹ್ಮೋತ್ಸವ

ನಂಜನಗೂಡು: ನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದ 28ನೇ ವರ್ಷದ ಬ್ರಹ್ಮೋತ್ಸವ ಡಿ. 16ರಿಂದ 26ರವರೆಗೆ ಅತ್ಯಂತ ಸಡಗರ ಸಂಭ್ರಮದಿಂದ ನಡೆಯಲಿದೆ.  16ರ ಬೆಳಗ್ಗೆ 9.30ರಿಂದ 10.15ರೊಳಗೆ ಧ್ವಜಾರೋಹಣ ನೆರವೇರಿಸುವ ಮೂಲಕ ಬ್ರಹ್ಮೋತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ಗುರುಸ್ವಾಮಿ ಪಿ. ದೇವರಾಜು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ನಂಜನಗೂಡು: ನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದ 28ನೇ ವರ್ಷದ ಬ್ರಹ್ಮೋತ್ಸವ ಡಿ. 16ರಿಂದ 26ರವರೆಗೆ ಅತ್ಯಂತ ಸಡಗರ ಸಂಭ್ರಮದಿಂದ ನಡೆಯಲಿದೆ. 16ರ ಬೆಳಗ್ಗೆ 9.30ರಿಂದ 10.15ರೊಳಗೆ ಧ್ವಜಾರೋಹಣ ನೆರವೇರಿಸುವ ಮೂಲಕ ಬ್ರಹ್ಮೋತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ಗುರುಸ್ವಾಮಿ ಪಿ. ದೇವರಾಜು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
Published on
ನಂಜನಗೂಡು: ನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದ 28ನೇ ವರ್ಷದ ಬ್ರಹ್ಮೋತ್ಸವ ಡಿ. 16ರಿಂದ 26ರವರೆಗೆ ಅತ್ಯಂತ ಸಡಗರ ಸಂಭ್ರಮದಿಂದ ನಡೆಯಲಿದೆ.
16ರ ಬೆಳಗ್ಗೆ 9.30ರಿಂದ 10.15ರೊಳಗೆ ಧ್ವಜಾರೋಹಣ ನೆರವೇರಿಸುವ ಮೂಲಕ ಬ್ರಹ್ಮೋತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ಗುರುಸ್ವಾಮಿ ಪಿ. ದೇವರಾಜು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
17ರಂದು ಸಂಜೆ 6ಕ್ಕೆ ವಿಶೇಷ ಪಡಿಪೂಜೆ, ಡಿ. 20ರ ಬೆಳಗ್ಗೆ 20 ಸಾವಿರ ಭಕ್ತರಿಗೆ ಅನ್ನಸಂತರ್ಪಣೆ, ಮಧ್ಯಹ್ನ 2ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ಅಯ್ಯಪ್ಪಸ್ವಾಮಿ ಉತ್ಸವ, ಸಂಜೆ 7ಕ್ಕೆ ಕಪಿಲಾ ನದಿಯಲ್ಲಿ ಆರಾಟ್ಟು ಹಾಗೂ ಬಾಣಬಿರುಸುಗಳೊಂದಿಗೆ ತೇಲುವ ದೇವಾಲಯದಲ್ಲಿ ತೆಪ್ಪೋತ್ಸವ ನಡೆಯಲಿದೆ ಎಂದರು.
25ರಂದು ಮೈಸೂರಿನ ದತ್ತ ವೆಂಕಟೇಶ್ವರಸ್ವಾಮಿ ದೇವಸ್ಥಾನದಿಂದ ನಂಜನಗೂಡಿನ ಅಯ್ಯಪ್ಪಸ್ವಾಮಿ ಸನ್ನಿಧಿಗೆ ಇರುಮುಡಿ ಹೊತ್ತ ಅಯ್ಯಪ್ಪ ಭಕ್ತರ ಬೃಹತ್ ಪಾದಯಾತ್ರೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಉಚಿತ ವೃದ್ಧಾಶ್ರಮ ಸೇವೆ: ಕಪಿಲಾ ತೀರದಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ವತಿಯಿಂದ ನಂಜನಗೂಡಿನಲ್ಲಿ ಶೀಘ್ರದಲ್ಲೇ ಉಚಿತ ವೃದ್ಧಾಶ್ರಮ ಸೇವೆ ಆರಂಭಿಸಲಾಗುವುದು ಎಂದು ಗುರುಸ್ವಾಮಿ ಪಿ. ದೇವರಾಜು ತಿಳಿಸಿದರು.
ಸ್ವಾಮಿಯ 28ನೇ ವರ್ಷದ ಬ್ರಹ್ಮೋತ್ಸವದ ಸಂದರ್ಭದಲ್ಲಿ ದೇವಸ್ಥಾನದ ಸಂಸ್ಥಾಪಕ ಕಾಂತರಾಜ ಸ್ವಾಮಿಗಳ ಆಶಯದಂತೆ ವೃದ್ಧಾಶ್ರಮವನ್ನು ಪ್ರಾರಂಭಿಸಲಾಗುತ್ತಿದೆ. ಇದಕ್ಕಾಗಿ ನಗರದ ಹೊರವಲಯದ ಪರಶುರಾಮ ದೇವಸ್ಥಾನದ ಎದುರು ಹಾಗೂ ಚಾಮರಾಜನಗರ ರಸ್ತೆಯಲ್ಲಿರುವ ವಿದ್ಯಾಪೀಠದ ಬಳಿ ಜಾಗ ಗುರುತಿಸಲಾಗಿದೆ ಎಂದರು. ದೇವಾಲಯದಿಂದ ಈ ವೃದ್ಧಾಶ್ರಮದ ನಿರ್ಮಾಣಕ್ಕೆ 1 ಕೋಟಿ ರೂ.ಗಳನ್ನು ಮೂಲಧನವಾಗಿ ಇಡಲು ನಿರ್ಧರಿಸಲಾಗಿದೆ. ನಿವಾಸಿಗಳಿಗೆ ಉಚಿತ ಸೇವೆ ಒದಗಿಸಲಾಗುತ್ತದೆ ಎಂದು ಅವರು ವಿವರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net