ವಕೀಲರ ಸಂಘದ ಅಧ್ಯಕ್ಷ ಅಧ್ಯಕ್ಷರಾಗಿ ನಾಗೇಶ್ ಆಯ್ಕೆ

ಎಚ್.ಡಿ.ಕೋಟೆ ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಆರ್.ನಾಗೇಶ್ ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಎಚ್.ಡಿ.ಕೋಟೆ ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಆರ್.ನಾಗೇಶ್ ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
Published on
ಎಚ್.ಡಿ.ಕೋಟೆ: ತಾಲೂಕು ವಕೀಲರ ಸಂಘದ ನೂತನ ಆಡಳಿತ ಮಂಡಳಿಗೆ ಶನಿವಾರ ನಡೆದ ಚುನಾವಣೆ ಆರ್.ನಾಗೇಶ್ ಅವರು 68 ಮತಗಳನ್ನು ಪಡೆಯುವ ಮೂಲಕ ಪ್ರತಿ ಸ್ಪರ್ಧಿ ಡಿ.ಆರ್.ಮಹೇಶ್ ವಿರುದ್ಧ 2 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.
ತಾಲೂಕು ವಕೀಲರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆರ್.ನಾಗೇಶ್ ಹೆಸರು ಘೋಷಣೆ ಆಗುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಉಪಾಧ್ಯಕ್ಷರಾಗಿ ವಕೀಲ ಚಲುವಪ್ಪ, ಮಹಿಳಾ ಉಪಾಧ್ಯಕ್ಷರಾಗಿ ಪಿ.ನಾಗಶ್ರೀ, ಪ್ರಧಾನ ಕಾರ್ಯದರ್ಶಿಯಾಗಿ ಜಯಶಂಕರ್ .ಕೆ, ಜಂಟಿ ಕಾರ್ಯದರ್ಶಿ ರವಿಕುಮಾರ್, ಮಹಿಳಾ ವಿಭಾಗದ ನಯನಾ, ಖಜಾಂಚಿಯಾಗಿ ಅಭಿಕುಮಾರ್ ಆಯ್ಕೆಯಾದರು.
ಚುನಾವಣಾಧಿಕಾರಿ ಶಿವರಾಜು.ಎಂ, ಸಹ ಚುನಾವಣಾಧಿಕಾರಿಯಾಗಿ ನಾಗೇಂದ್ರ ಸುಹಾಸ್, ತನ್ಮಯಿ ಶ್ರೀನಾಥ್ ಕರ್ತವ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಎಂ.ಎಲ್.ರವಿಶಂಕರ್, ಮಹದೇವಪ್ಪ, ಮೋಹನ್ ಕೆ.ಎಂ, ಲಿಂಗರಾಜು, ಉಮಾಶಂಕರ್, ಎ.ಟಿ.ಕೃಷ್ಣ, ವೇಲುಸ್ವಾಮಿ, ವಕೀಲರಾದ ರಮೇಶ್, ವೆಂಕಟೇಶ್, ಹನುಮೇಶ್, ಸೋಮಶೇಖರ್, ಮಹಾದೇವಸ್ವಾಮಿ, ಸಿದ್ದಪ್ಪಾಜಿ, ಕಂದೇಗಾಲ ಶಿವರಾಜು, ಸದಾಶಿವಪ್ಪ, ಜಯಸ್ವಾಮಿ, ಜೆ.ಸಿ.ಕುಮಾರ್, ಚೌದಲ್ಲಿ ಜವಾರಯ್ಯ, ಪಿ.ಜಿ. ಶಶಿಧರ, ಎಚ್.ಪಿ.ಮಹೇಶ್, ಪ್ರಸನ್ನಕುಮಾರ್. ಬಿ.ವಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net