ಕಾಂಗ್ರೆಸ್ ಕುಶಲಕರ್ಮಿಗಳ ವಿಭಾಗದ ಜಿಲ್ಲಾ ಅಧ್ಯಕ್ಷ ನಾಗರಾಜಚಾರ್

ಬನ್ನೂರಿನ ವಿಶ್ವಕರ್ಮ ಮುಖಂಡ ಎನ್.ನಾಗರಾಜಚಾರ್ ಅವರನ್ನು ಕಾಂಗ್ರೆಸ್ ಕುಶಲಕರ್ಮಿಗಳ ವಿಭಾಗದ ಮೈಸೂರು ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಆದೇಶ ಪತ್ರ ವಿತರಿಸಲಾಯಿತು. ಡಾ.ಬಿ.ಜೆ. ವಿಜಯ್‌ಕುಮಾರ್, ರಿಷಿ ವಿಶ್ವಕರ್ಮ ಮೈಸೂರು , ಪ್ರಎ.ಎನ್.ಸ್ವಾಮಿ, ಟಿಂಬರ್ ನಾಗರಾಜು, ಮೊಗಣ್ಣಚಾರ್, ನರಸಿಂಹಮೂರ್ತಿ ಇದ್ದರು.
ಬನ್ನೂರಿನ ವಿಶ್ವಕರ್ಮ ಮುಖಂಡ ಎನ್.ನಾಗರಾಜಚಾರ್ ಅವರನ್ನು ಕಾಂಗ್ರೆಸ್ ಕುಶಲಕರ್ಮಿಗಳ ವಿಭಾಗದ ಮೈಸೂರು ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಆದೇಶ ಪತ್ರ ವಿತರಿಸಲಾಯಿತು. ಡಾ.ಬಿ.ಜೆ. ವಿಜಯ್‌ಕುಮಾರ್, ರಿಷಿ ವಿಶ್ವಕರ್ಮ ಮೈಸೂರು , ಪ್ರಎ.ಎನ್.ಸ್ವಾಮಿ, ಟಿಂಬರ್ ನಾಗರಾಜು, ಮೊಗಣ್ಣಚಾರ್, ನರಸಿಂಹಮೂರ್ತಿ ಇದ್ದರು.
Published on
ಬನ್ನೂರು: ಪಟ್ಟಣದ ವಿಶ್ವಕರ್ಮ ಮುಖಂಡ ಎನ್.ನಾಗರಾಜಚಾರ್ ಅವರನ್ನು ಕಾಂಗ್ರೆಸ್ ಕುಶಲಕರ್ಮಿಗಳ ವಿಭಾಗದ ಮೈಸೂರು ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಆದೇಶ ಪತ್ರವನ್ನು ಮಂಗಳವಾರ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್ ವಿತರಣೆ ಮಾಡಿದರು.
ಪಟ್ಟಣದ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕುಶಲಕರ್ಮಿಗಳ ಬೆಂಗಳೂರು ವಿಭಾಗ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಆದೇಶದಂತೆ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್ ಆದೇಶಪತ್ರ ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು, ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸಿ, ರಾಜ್ಯ ಕುಶಲಕರ್ಮಿಗಳ ವಿಭಾಗದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಪಕ್ಷವನ್ನು ಮುನ್ನಡೆಸುವಂತೆ ಸಲಹೆ ನೀಡಿದರು.
ಕಾಂಗ್ರೆಸ್ ಕುಶಲಕರ್ಮಿಗಳ ವಿಭಾಗದ ಮೈಸೂರು ಜಿಲ್ಲಾ ಅಧ್ಯಕ್ಷ ಎನ್.ನಾಗರಾಜಚಾರ್ ಮಾತನಾಡಿ, ಈ ಬೆಳವಣಿಗೆಗೆ ಕಾರಣರಾದ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಸುನಿಲ್‌ಬೋಸ್, ಮುನಾವರ್‌ಪಾಷ, ಪ್ರಥಮ ದರ್ಜೆ ಗುತ್ತಿಗೆದಾರ ಎ.ಎನ್.ಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಲ್ಲುವುದಾಗಿ ತಿಳಿಸಿದರು.
ವಿಶ್ವಕರ್ಮ ಅಧ್ಯಕ್ಷ ಕೆ.ಪಿ.ನಂಜುಂಡಿ, ಮಾಜಿ ವಿಧಾನ ಪರಿಷತ್ ಸದಸ್ಯ ರಿಷಿ ಮೈಸೂರು, ಕೇಶವಮೂರ್ತಿ, ರಾಮಲಿಂಗು, ಟಿಂಬರ್ ನಾಗರಾಜು, ಗೀತಾ ವಿಶ್ವಕರ್ಮ, ಕೇಶವಮೂರ್ತಿ, ರಾಮಲಿಂಗು, ಮೊಗಣ್ಣಚಾರ್, ಜಯರಾಮಚಾರ್, ಚಲುವರಾಜು, ಮಹದೇವು, ಎಚ್.ಎನ್.ರಾಜು, ರಮೇಶ್, ಪುರಸಭಾ ಸದಸ್ಯ ಶಿವಣ್ಣ, ಹರ್ಷಾದ್, ಪುರಸಭಾ ನಾಮ ನಿರ್ದೇಶಿತ ಸದಸ್ಯ ಮಹೇಶ್, ಶಿವಮೂರ್ತಿ, ಲಾಯರ್ ಮಲಿಯೂರು ಡಿ.ಶಂಕರ್, ನರಸಿಂಹಮೂರ್ತಿ, ಬಿ.ಎನ್.ಸಿದ್ದಪ್ಪಾಜಿ, ದೇವರಾಜಅರಸ್, ಭಾಸ್ಕರ್, ಮಂಜ, ನಾರಾಯಣಪಪ್ , ರಾಕಿ, ಮಂಜಣ್ಣ , ಸಿದ್ದರಾಜು, ಮಹದೇವು, ಜಯರಾಮು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net