ಎನ್.ರಾಚಯ್ಯ ಸಾಮಾಜಿಕ ಬದ್ಧತೆ ಅನನ್ಯ: ಪ್ರೊ.ಕಾಳೇಗೌಡ ನಾಗವಾರ ಬಣ್ಣನೆ

ಎನ್.ರಾಚಯ್ಯ ಅಧ್ಯಯನ ಪೀಠ, ರಾಜ್ಯಶಾಸ್ತ್ರ ಅಧ್ಯಯನ ವಿಭಾಗದಿಂದ ಆಯೋಜಿಸಿದ್ದ ಎನ್.ರಾಚಯ್ಯ ಜನ್ಮೋತ್ಸವ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ.ಕಾಳೇಗೌಡ ನಾಗವಾರ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ಪ್ರೊ.ಎನ್. ನಾಗರಾಜು, ಪ್ರೊ.ಸಿ.ರಾಮಸ್ವಾಮಿ, ಪ್ರೊ.ಕೃಷ್ಣ ಹೊಂಬಾಳ್ ಇದ್ದರು.
ಎನ್.ರಾಚಯ್ಯ ಅಧ್ಯಯನ ಪೀಠ, ರಾಜ್ಯಶಾಸ್ತ್ರ ಅಧ್ಯಯನ ವಿಭಾಗದಿಂದ ಆಯೋಜಿಸಿದ್ದ ಎನ್.ರಾಚಯ್ಯ ಜನ್ಮೋತ್ಸವ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ.ಕಾಳೇಗೌಡ ನಾಗವಾರ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ಪ್ರೊ.ಎನ್. ನಾಗರಾಜು, ಪ್ರೊ.ಸಿ.ರಾಮಸ್ವಾಮಿ, ಪ್ರೊ.ಕೃಷ್ಣ ಹೊಂಬಾಳ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ಬದ್ಧತೆ, ಸಾಧನೆ ಹಾಗೂ ಕೊಡುಗೆಗಳನ್ನು ಯುವ ಪೀಳಿಗೆಗೆ ತಿಳಿಸಿಕೊಡುವ ಅಗತ್ಯವಿದೆ
  • ಐದು ದಶಕಗಳ ಅವರ ಇಡೀ ಸಾರ್ವಜನಿಕ ಮತ್ತು ರಾಜಕೀಯ ಜೀವನವು ಸದಾ ಸಮಾಜದ ಅಂಚಿನವರ ಪರವಾಗಿ ಮುಡಿಪಾಗಿತ್ತು
ಮೈಸೂರು:ಬುದ್ಧನಿಂದ ಪ್ರಭಾವಿತರಾದವರು ದುಃಖದಿಂದ ಹೊರಬಂದು ಮಾನವೀಯತೆಯುಳ್ಳ ವ್ಯಕ್ತಿಯಾಗಿರುತ್ತಾರೆ ಎಂಬುದಕ್ಕೆ ಎನ್.ರಾಚಯ್ಯ ಅವರೇ ಸಾಕ್ಷಿಯಾಗಿದ್ದಾರೆ ಎಂದು ಪ್ರಗತಿಪರ ಚಿಂತಕ ಪ್ರೊ.ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು.
ಮಾನಸ ಗಂಗೋತ್ರಿಯ ಬಿಂಎಂಶ್ರೀ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಎನ್.ರಾಚಯ್ಯ ಅಧ್ಯಯನ ಪೀಠ, ರಾಜ್ಯಶಾಸ್ತ್ರ ಅಧ್ಯಯನ ವಿಭಾಗಗಳ ಸಹಯೋಗದಲ್ಲಿ ಎನ್.ರಾಚಯ್ಯ ಅವರ 107ನೇ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಐದು ದಶಕಗಳ ಅವರ ಇಡೀ ಸಾರ್ವಜನಿಕ ಮತ್ತು ರಾಜಕೀಯ ಜೀವನವು ಸದಾ ಸಮಾಜದ ಅಂಚಿನವರ ಪರವಾಗಿ ಮುಡಿಪಾಗಿತ್ತು. ಈ ರೀತಿಯ ವಿಭಿನ್ನ ಜೀವನದ ಬದ್ಧತೆೆಯೇ ಎನ್.ರಾಚಯ್ಯ ಅವರನ್ನು ಇತರ ರಾಜಕೀಯ ನಾಯಕರಿಗಿಂತ ಭಿನ್ನವಾದ ನೆಲೆಗಟ್ಟಿನಲ್ಲಿ ನಿಲ್ಲಿಸುತ್ತದೆ ಎಂದರು.
ನಾವೆಲ್ಲ ಬುದ್ಧನ ಧ್ಯಾನದಲ್ಲಿ ತೊಡಗಬೇಕು. ಆಗ ಸಮಾಜಕ್ಕೆ ಬಹಳ ಒಳ್ಳೆಯದಾಗುತ್ತದೆ. ಬಸವಲಿಂಗಯ್ಯ, ರಾಚಯ್ಯ ಅವರಂತಹ ಅಸಾಮಾನ್ಯ ವ್ಯಕ್ತಿಗಳು ಆದರ್ಶರಾಗಿದ್ದಾರೆ. ಸರ್ಕಾರ ಅವರನ್ನು ನೆನೆಯುವ ಕೆಲಸ ಮಾಡುತ್ತಿಲ್ಲ ಎಂದರು.
ಕೃಷಿ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಮಾಜಿ ರಾಜ್ಯಪಾಲ ರಾಚಯ್ಯ ಅವರು ಪ್ರಮುಖವಾಗಿ ಸಾಮಾಜಿಕ ನ್ಯಾಯ ಮತ್ತು ಭೂ ಸುಧಾರಣೆ ಕಾರ್ಯಕ್ರಮಗಳಿಗೆ ಉತ್ತೇಜನ ಕೊಡುವ ಸಲುವಾಗಿ ಉಳುವವನೇ ಭೂಮಿಯ ಒಡೆಯ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರ ಸಾಮಾಜಿಕ ಬದ್ಧತೆ, ಸಾಧನೆ ಹಾಗೂ ಕೊಡುಗೆಗಳನ್ನು ಯುವ ಪೀಳಿಗೆಗೆ ತಿಳಿಸಿಕೊಡುವ ಅಗತ್ಯವಿದೆ ಎಂದು ಹೇಳಿದರು.
ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜು ಮಾತನಾಡಿದರು. ಎನ್.ರಾಚಯ್ಯ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಸಿ.ರಾಮಸ್ವಾಮಿ, ಪ್ರಾಧ್ಯಾಪಕ ಪ್ರೊ.ಕೃಷ್ಣ ಹೊಂಬಾಳ್ ಇತರರು ಇದ್ದರು.
ಎನ್. ರಾಚಯ್ಯ ಅವರ ಜನ್ಮದಿನೋತ್ಸವದ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net