ಶೋಷಿತರ ಏಳಿಗೆಗೆ ದುಡಿದವರು ಎನ್.ರಾಚಯ್ಯ

ಮಾನಸಗಂಗೋತ್ರಿಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎನ್.ರಾಚಯ್ಯ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ರವಿಕುಮಾರ್ ಮರಡಿಪುರ, ಸಿ.ರಾಮಸ್ವಾಮಿ, ಪ್ರೊ.ಕೃಷ್ಣ ಹೊಂಬಳ್ ಇದ್ದರು.
ಮಾನಸಗಂಗೋತ್ರಿಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎನ್.ರಾಚಯ್ಯ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ರವಿಕುಮಾರ್ ಮರಡಿಪುರ, ಸಿ.ರಾಮಸ್ವಾಮಿ, ಪ್ರೊ.ಕೃಷ್ಣ ಹೊಂಬಳ್ ಇದ್ದರು.
Published on
ಎನ್.ರಾಚಯ್ಯ ಅವರು ಬಡವರು, ಶೋಷಿತರು, ಹಿಂದುಳಿದವರ ಏಳಿಗೆಗೆ ನಿರಂತರವಾಗಿ ದುಡಿದರು ಎಂದು ಸಾಮಾಜಿಕ ನ್ಯಾಯಪರ ವೇದಿಕೆ ಅಧ್ಯಕ್ಷ ರವಿಕುಮಾರ್ ಮರಡಿಪುರ ಹೇಳಿದರು.
ಮಾನಸಗಂಗೋತ್ರಿಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಬುಧವಾರ ಆಯೋಜಿಸಿದ್ದ ಎನ್.ರಾಚಯ್ಯ ಪುಣ್ಯ ಸ್ಮರಣೆಯಲ್ಲಿ ರಾಚಯ್ಯ ಅವರ ಮಾದರಿ ನಾಯಕತ್ವ ಕುರಿತು ಉಪನ್ಯಾಸ ನೀಡಿದರು.
ಸಮ ನಿರ್ಮಾಣದ ಕನಸು ಹೊತ್ತಿದ್ದ ಎನ್.ರಾಚಯ್ಯ ಅವರು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಆಡಳಿತವೈಖರಿ ಮೂಲಕವೇ ವಿಶಿಷ್ಟ ಛಾಪು ಮೂಡಿಸಿದರು. ಬಿ.ಡಿ.ಜತ್ತಿ ಮತ್ತು ಡಿ.ದೇವರಾಜ ಅರಸು ಸಂಪುಟದಲ್ಲಿ ಸಚಿವರಾಗಿದ್ದಾಗ ನೀಡಿದ ಎಲ್ಲ ಖಾತೆಗಳಲ್ಲಿಯೂ ಗುರುತುಗಳನ್ನು ಬಿಟ್ಟುಹೋಗಿದ್ದಾರೆ ಎಂದರು.
ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಅಂಗನವಾಡಿಗಳು, ಶಿಶುವಿಹಾರ, ಅನಾಥಾಶ್ರಮ, ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿದರು. ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ ಹೊಲಿಗೆ ತರಬೇತಿ ಕೇಂದ್ರಗಳನ್ನು ಆರಂಭಿಸಿದರು ಎಂದು ತಿಳಿಸಿದರು.
ಗೌತಮ ಬುದ್ಧರ ತತ್ವಾದರ್ಶಗಳನ್ನು ಪಾಲಿಸಿದ ಅವರು ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಜವಾಹರಲಾಲ್ ನೆಹರು, ಬಾಬು ಜಗಜೀವನರಾಮ್ ಅವರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು ಎಂದು ಹೇಳಿದರು. ರಾಚಯ್ಯ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಸಿ.ರಾಮಸ್ವಾಮಿ, ವಿಭಾಗದ ಮುಖ್ಯಸ್ಥ ಪ್ರೊ.ಕೃಷ್ಣ ಹೊಂಬಳ್ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net