ಅಪ್ಪಚೆಟ್ಟೋಳಂಡ ಅಯ್ಯಪ್ಪ ಹಾಕಿ ತೀರ್ಪುಗಾರ

 ಅಪ್ಪಚೆಟ್ಟೋಳ0ಡ ಅಯ್ಯಪ್ಪ.
ಅಪ್ಪಚೆಟ್ಟೋಳ0ಡ ಅಯ್ಯಪ್ಪ.
Published on
ನಾಪೋಕ್ಲು: ಶ್ರೀಲಂಕಾ ಪ್ರೀಮಿಯರ್ ಲೀಗ್ ಹಾಕಿ ಪಂದ್ಯಾವಳಿಯಲ್ಲಿ ತೀರ್ಪುಗಾರರಾಗಿ ಕೊಡಗಿನ ಅಪ್ಪಚೆಟ್ಟೋಳಂಡ ಅಯ್ಯಪ್ಪ ಆಯ್ಕೆಯಾಗಿದ್ದಾರೆ.
ಶ್ರೀಲಂಕಾದ ಕೊಲಂಬಿಯಾ ಸ್ಟೇಡಿಯಂನಲ್ಲಿ ನ.8ರಿಂದ 29ರವರೆಗೆ ಶ್ರೀಲಂಕಾ ಪ್ರೀಮಿಯರ್ ಲೀಗ್ ಹಾಕಿ ಪಂದ್ಯಾವಳಿಯಲ್ಲಿ ತೀರ್ಪುಗಾರರಾಗಿ ಹಾಕಿ ಕೂರ್ಗ್‌ನ ತೀರ್ಪುಗಾರ, ಪ್ರಸ್ತುತ ಹಾಕಿ ಇಂಡಿಯಾದ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತಿರುವ ಅಪ್ಪಚೆಟ್ಟೋಳಂಡ ಅಯ್ಯಪ್ಪ ಆಯ್ಕೆಯಾಗಿದ್ದಾರೆ.
ಇವರು ಮಡಿಕೇರಿ ತಾಲೂಕಿನ ನಾಪೋಕ್ಲು ನಾಡು ಬಲ್ಲಮಾವಟ್ಟಿ ಗ್ರಾಮದ ಅಪ್ಪಚೆಟ್ಟೋಳಂಡ ಬೋಪಯ್ಯ ಬೋಜಮ್ಮ ದಂಪತಿ ಪುತ್ರ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net