ಹೋರಾಟದ ಫಲವಾಗಿ ಕನ್ನಡಿಗರು ನಾಡಿನಲ್ಲಿ ಉಳಿದಿದ್ದೇವೆ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ನಾಡಗೀತೆಯ ಶತಮಾನ ಸಂಭ್ರಮ ಕಾರ್ಯಕ್ರಮವನ್ನು ನಟಿ ಉಮಾಶ್ರೀ ಉದ್ಘಾಸಿದರು. ಡಾ.ಎನ್.ಆರ್. ಚಂದ್ರೇಗೌಡ, ಪ್ರೊ.ಎಂ. ರಾಮನಾಥಂ ನಾಯ್ಡು, ಪ್ರೊ.ಎಸ್.ಕೆ.ನವೀನ್‌ಕುಮಾರ್ ಹಾಗೂ ಇತರರು ಇದ್ದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ನಾಡಗೀತೆಯ ಶತಮಾನ ಸಂಭ್ರಮ ಕಾರ್ಯಕ್ರಮವನ್ನು ನಟಿ ಉಮಾಶ್ರೀ ಉದ್ಘಾಸಿದರು. ಡಾ.ಎನ್.ಆರ್. ಚಂದ್ರೇಗೌಡ, ಪ್ರೊ.ಎಂ. ರಾಮನಾಥಂ ನಾಯ್ಡು, ಪ್ರೊ.ಎಸ್.ಕೆ.ನವೀನ್‌ಕುಮಾರ್ ಹಾಗೂ ಇತರರು ಇದ್ದರು.
Published on
ಮೈಸೂರು: ಕನ್ನಡ ಭಾಷೆ, ನಾಡಿಗೆ ಸಂಬಂಧಿಸಿದಂತೆ ಬಹಳಷ್ಟು ಹೋರಾಟ ನಡೆಸಿ ಕನ್ನಡಿಗರು ಈ ನಾಡಿನಲ್ಲಿ ಉಳಿದಿದ್ದೇವೆ ಎಂದು ನಟಿ ಉಮಾಶ್ರೀ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ವತಿಯಿಂದ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವ ಹಾಗೂ ನಾಡಗೀತೆಯ ಶತಮಾನ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡಿಗರು ಹಲವಾರು ಕ್ಷೇತ್ರಗಳಲ್ಲಿ ತಮ್ಮ ಸಾಧನೆಯನ್ನು ತೋರಿದ್ದಾರೆ. ನಮ್ಮ ಹಿರಿಯರು ತೋರಿದ ಸಾಧನೆಯು ಹೆಮ್ಮೆ ಮೂಡಿಸುತ್ತದೆ. ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ನಮ್ಮ ಕನ್ನಡ ಭಾಷೆ ಪಡೆದಿದೆ ಎಂದರು.
ಉನ್ನತ ಶಿಕ್ಷಣ ಎಲ್ಲರಿಗೂ ಸಿಗಬೇಕು, ಎಲ್ಲೆಡೆಯೂ ಸಿಗಬೇಕು ಎಂಬ ಉದ್ದೇಶದಿಂದ ಮುಕ್ತ ವಿಶ್ವವಿದ್ಯಾಲಯ ಪ್ರಾರಂಭಗೊಂಡಿತು. ವಿವಿಧ ಕಾರಣಗಳಿಂದ ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದವರಿಗೆ ಉನ್ನತ ಶಿಕ್ಷಣ ಪಡೆಯಲು ಮುಕ್ತ ವಿವಿ ಅವಕಾಶ ಮಾಡಿಕೊಡುತ್ತಿರುವುದು ಸಂತಸದ ವಿಚಾರ. ನಾನು ಸಹ ಮುಕ್ತ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಎಂದು ಹೇಳಿದರು.
ವಯಸ್ಸಿನ ಕಾರಣಕ್ಕೆ ವಿದ್ಯಾಭ್ಯಾಸ ಮೊಟಕುಗೊಳ್ಳಬಾರದು. ಸಾಯುವವರೆಗೂ ನಿರಂತರವಾಗಿ ಕಲಿಯಬೇಕು. ನಾನು ಮುಕ್ತ ವಿವಿಯಲ್ಲಿ ಮತ್ತೊಂದು ಪದವಿ ಪಡೆಯಲು ಆಸಕ್ತಿ ಹೊಂದಿದ್ದೇನೆ. ವಿದ್ಯೆ ಹಾಗೂ ಕಲಿಕೆಗೆ ವಯಸ್ಸಿನ ಮಿತಿ ಇಲ್ಲ. ಮುಕ್ತ ವಿವಿಯಲ್ಲಿ ಓದುವುದು ಎಂದರೆ ಹೆಮ್ಮೆಯ ವಿಚಾರ ಎಂದು ಹೇಳಿದರು.
ಮೈಸೂರು ಮಹಾರಾಜರು ಸಂಗೀತ, ನೃತ್ಯ, ನಾಟಕ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಹೆಚ್ಚಿನ ಒತ್ತು ನೀಡಿದರು. ಇಂದಿಗೂ ಸಹ ಬಹಳಷ್ಟು ಜನರಿಗೆ ಇಷ್ಟವಾಗುವ ನಗರ ಮೈಸೂರು. ನಾವು ಸದಾ ಕಾಲ ಮಹಾರಾಜರಿಗೆ ಕೃತಜ್ಞರಾಗಿರಬೇಕು ಎಂದು ಹೇಳಿದರು.
ಮುಕ್ತ ವಿವಿಯ ಕುಲಸಚಿವ ಪ್ರೊ.ಎಸ್.ಕೆ.ನವೀನ್‌ಕುಮಾರ್, ಪರೀಕ್ಷಾಂಗ ಕುಲಸಚಿವ ಸಿ.ಎಸ್. ಆನಂದ್‌ಕುಮಾರ್, ಹಣಕಾಸು ಅಧಿಕಾರಿ ಎಸ್.ನಿರಂಜನ್, ಅಧ್ಯಯನ ಕೇಂದ್ರದ ಡೀನ್ ಡಾ.ಎನ್.ಆರ್. ಚಂದ್ರೇಗೌಡ, ಶೈಕ್ಷಣಿಕ ಡೀನ್ ಪ್ರೊ.ಎಂ.ರಾಮನಾಥಂ ನಾಯ್ಡು, ಜಾನಪದ ವಿದ್ವಾಂಸ ಪ್ರೊ.ಪಿ.ಕೆ.ರಾಜಶೇಖರ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net