13 ರಂದು ಕದಂಬ ಕನ್ನಡ ಸೈನ್ಯದಿಂದ ಪ್ರತಿಭಟನೆ

kadamba kannda sene
Published on
ಮೈಸೂರು: ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಪುಂಡಾಟ ನಡೆಸಿದ ಕನ್ನಡ ವಿರೋಧಿ ಸಂಘಟನೆಗಳನ್ನು ನಿಷೇಧಿಸಬೇಕು, ರಾಷ್ಟ್ರ ದ್ರೋಹಿ ಕಾಯ್ದೆ ಮಾದರಿ ನಾಡ ದ್ರೋಹಿ ಕಾಯ್ದೆ ಜಾರಿಗೆ ತರಬೇಕೆಂದು ಒತ್ತಾಹಿಸಿ ಕದಂಬ ಸೈನ್ಯ ಕನ್ನಡ ಸಂಘಟನೆ ವತಿಯಿಂದ ನ.13ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ಮಧ್ಯಾಹ್ನ 3ಕ್ಕೆ ಮೌನ ಪ್ರತಿಭಟನೆ ನಡೆಸಿ, ಡಿಸಿ ಮೂಲಕ ಸಿಎಂಗೆ ಮನವಿಪತ್ರ ಸಲ್ಲಿಸಲಾಗುವುದು ಎಂದು ಅಧ್ಯಕ್ಷ ಬೇಕ್ರಿ ರಮೇಶ್ ತಿಳಿಸಿದರು.
 ಕನ್ನಡ, ಕನ್ನಡಿಗರನ್ನು ಅತ್ಯಂತ ತುಚ್ಛವಾಗಿ ಅಪಮಾನಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ವಿಡಿಯೋ ಭಿತ್ತರಿಸಿ ಪರಭಾಷಾ ದ್ವೇಷಿಗಳು, ದೌರ್ಜನ್ಯ ನಡೆಸುವವರೆಂದು ಬಿಂಬಿಸಲಾಗುತ್ತಿದೆ. ಆದರೂ ಇವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲವೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಬೇಸರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net