ಗಣರಾಜ್ಯೋತ್ಸವ ಪೆರೇಡ್‌ಗೆ ಮೈಸೂರಿನ ಸರಸ್ವತಿ ಆಯ್ಕೆ

ಸರಸ್ವತಿ
ಸರಸ್ವತಿ
Published on

ಪ್ರಮುಖ ಮುಖ್ಯಾಂಶಗಳು

  • ಮುದ್ರಾ ಯೋಜನೆಯ ಫಲಾನುಭವಿಗಳು
ಮೈಸೂರು: ದೆಹಲಿಯಲ್ಲಿ ಜ.26ರಂದು ನಡೆಯುವ ಗಣರಾಜ್ಯೋತ್ಸವ ಪೆರೇಡ್ ವೀಕ್ಷಣೆಗೆ ಮುದ್ರಾ ಯೋಜನೆಯ ಫಲಾನುಭವಿ, ರಾಮಕೃಷ್ಣನಗರದ ನಿವಾಸಿ ಸರಸ್ವತಿ ಆಯ್ಕೆಯಾಗಿದ್ದಾರೆ.
ಸರಸ್ವತಿ ಅವರು ಮುದ್ರಾ ಯೋಜನೆಯಡಿ ಸಾಲ ತೆಗೆದುಕೊಂಡು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆಂಬ ಕಾರಣದಿಂದ ಕೇಂದ್ರದ ಹಣಕಾಸು ಇಲಾಖೆಯು ಇವರಿಗೆ ಪರೇಡ್‌ನಲ್ಲಿ ಭಾಗವಹಿಸಲು ಅವಕಾಶ ನೀಡಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಸರಸ್ವತಿ ಅವರು, ಈ ಯೋಜನೆಯಿಂದ ನಮಗೆ ಅನುಕೂಲವಾಗಿದೆ.
 ಸ್ವಾವಲಂಬಿ ಹಾಗೂ ಸದೃಢ ಜೀವನ ನಡೆಸಲು ಸಾಧ್ಯವಾಗಿದೆ. ಮುದ್ರಾ ಯೋಜನೆಯಿಂದ ಮೊದಲ ಬಾರಿಗೆ 2.50 ಲಕ್ಷ ರೂ. ತೆಗೆದುಕೊಂಡು ಸಣ್ಣ ಉದ್ಯಮ ಆರಂಭಿಸಲಾಯಿತು. ಇದೀಗ ಇದು ವಿಸ್ತಾರವಾಗಿ ಬೆಳೆದಿದೆ. ಇಬ್ಬರಿಂದ ಮೂವರಿಗೆ ಕೆಲಸ ಕೊಡಲಾಗಿದೆ ಎಂದು ತಿಳಿಸಿದರು.
ಈ ಯೋಜನೆಯಿಂದ ಮತ್ತೆ ಸಾಲ ಪಡೆದು ನನ್ನ ಉದ್ಯಮವನ್ನು ವಿಸ್ತರಿಸುವ ಕೆಲಸ ಮಾಡುತ್ತಿದ್ದು, ಮುಂದೆ ಇತರರಿಗೂ ಉದ್ಯೋಗ ಕಲ್ಪಿಸಿಕೊಡುವ ಗುರಿ ಹೊಂದಿದ್ದೇನೆ ಎಂದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಸರಸ್ವತಿ ಅವರನ್ನು ಆಯ್ಕೆ ಮಾಡಿರುವುದು ಜಿಲ್ಲೆೆ ಹಾಗೂ ನಗರಕ್ಕೆ ಸಂದ ಗೌರವ. ಕಳೆದ ವರ್ಷ ಚಿನ್ನಸ್ವಾಮಿ ವಡ್ಡಗೆರೆ ಅವರನ್ನು ಗಣರಾಜ್ಯೋತ್ಸವದ ಪೆರೇಡ್‌ಗೆ ಕಳುಹಿಸಿಕೊಡಲಾಗಿತ್ತು. 
ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಡಿ ಮೂರು ಸಾವಿರ ಕೋಟಿ ರೂ. ಸಾಲವನ್ನು 2025ರ ಏ.1ರಿಂದ ಅ.31ರವರೆಗೆ ಜಿಲ್ಲೆಯಲ್ಲಿ ನೀಡಲಾಗಿದೆ. 2019ರಿಂದ 2025ರ ವರೆಗೆ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಕೋಟಿ ರೂ. ಸಾಲ ಕೊಡಲಾಗಿದೆ ಎಂದರು.
ಕಳೆದ ಏ.1ರಿಂದ ಅ.31ರವರೆಗೆ ಜಿಲ್ಲೆಯಲ್ಲಿ ಸುಮಾರು 5.60 ಲಕ್ಷ ಜನರು 3 ಹಂತದ ಮುದ್ರಾ ಯೋಜನೆಯ ಫಲಾನುಭವಿಗಳಾಗಿದ್ದಾರೆ. 
ಸುಮಾರು 50ರಿಂದ 55 ಸಾವಿರ ಫಲಾನುಭವಿಗಳು ಒಂದು ವಿಧಾನಸಭಾ ಕ್ಷೇತ್ರದಿಂದ ಮುದ್ರಾ ಯೋಜನೆಯಿಂದ ಸಾಲ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ನಗರಾಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಎಂಎಲ್‌ಸಿ ಸಿದ್ದರಾಜು, ಮುಖಂಡರಾದ ಎಂ.ಜಿ. ಮಹೇಶ್, ಮಹೇಶ್ ರಾಜೇ ಅರಸ್, ಸೋಮಸುಂದರ್, ಎನ್. ಅರುಣ್‌ಕುಮಾರ್, ಬಿ.ಎಂ.ರಘು, ಕೂರ್ಗಳ್ಳಿ ರೇವಣ್ಣ, ಹಿನಕಲ್ ಗಣೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net