ಮೈಸೂರು: ನಗ್ನ ವಿಡಿಯೋ ಕಾಲ್ ಮಾಡಿ ಹಣ ದೋಚಿದ ಮಹಿಳೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮೈಸೂರು: ವ್ಯಕ್ತಿಯೊಬ್ಬರಿಗೆ ಮಹಿಳೆಯೊಬ್ಬರು ನಗ್ನ ವಿಡಿಯೋ ಕಾಲ್ ಮಾಡಿ 9.45 ಲಕ್ಷ ರೂ. ಕಸಿದುಕೊಂಡಿದ್ದಾರೆ.
ನಗರದ ನಿವಾಸಿಯೊಬ್ಬರಿಗೆ ವೀಣಾ ರಾವ್ ಎಂಬ ಮಹಿಳೆಯು ಫೇಸ್‌ಬುಕ್ ಮೂಲಕ ಪರಿಚಯವಾದರು. ನಂತರ ನಗ್ನವಾಗಿ ವಾಟ್ಸ್‌ಆ್ಯಪ್ ನಿಂದ ಕರೆ ಮಾಡಿದ ವೀಣಾ ರಾವ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗುವುದು ಎಂದು ಬೆದರಿಸಿ ಪ್ರಾರಂಭದಲ್ಲಿ 10 ಸಾವಿರ ರೂ. ಪಡೆದುಕೊಂಡರು. ನಂತರ ಹಂತ ಹಂತವಾಗಿ ಒಟ್ಟು 9.45 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದಾರೆ. ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃದ್ಧರೊಬ್ಬರಿಗೆ ವಂಚನೆ: ವಕನೊಬ್ಬನ ಮಾತು ನಂಬಿ ವಯೋವೃದ್ಧರೊಬ್ಬರು 2.30 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.
ದಟ್ಟಗಳ್ಳಿಯ ಕೆ.ಎಸ್. ರಾಧಾಕೃಷ್ಣ ಎಂಬವರೇ ಹಣ ಕಳೆದುಕೊಂಡವರು. ‘ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗಿದ್ದು, ಸರಿ ಮಾಡಲು ನಾವು ಕಳುಹಿಸಿದ ಲಿಂಕ್ ಓಪನ್ ಮಾಡಿ’ ಎಂದು ಎಪಿಕೆ ಫೈಲ್ ಕಳುಹಿಸಿದರು. ಅವರು ಕಳುಹಿಸಿದ ಫೈಲ್ ಓಪನ್ ಮಾಡಿದಾಗ ರಾಧಾಕೃಷ್ಣ ಅವರ ಖಾತೆಯಿಂದ 2.30 ಲಕ್ಷ ರೂ. ಕಡಿತವಾಗಿದೆ. ಈ ಕುರಿತು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net