ಮೈಸೂರು: ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಯುಗಾದಿ ಆಚರಣೆ

 ಯುಗಾದಿ ಅಂಗವಾಗಿ ದೇವಾಲಯದಲ್ಲಿ ವಿಜಯನಗರದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.
ಯುಗಾದಿ ಅಂಗವಾಗಿ ದೇವಾಲಯದಲ್ಲಿ ವಿಜಯನಗರದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.
Published on
ಮೈಸೂರು: ಸಂವತ್ಸರಾದಿ ಎಂದೂ ಕರೆಯಲ್ಪಡುವ ಯುಗಾದಿ ಹಬ್ಬವು ಹಿಂದೂ ಕ್ಯಾಲೆಂಡರ್‌ನಲ್ಲಿ ವರ್ಷದ ಮೊದಲ ದಿನವಾಗಿದೆ ಎಂದು ವಿಜಯನಗರದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸ್ ಹೇಳಿದರು.
ಯುಗಾದಿ ಅಂಗವಾಗಿ ವಿಜಯನಗರದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಶ್ರೀ ಸ್ವಾಮಿಗೆ ಗುರುವಾರ ನಡೆದ ವಿಶೇಷ ಪೂಜಾ ಕೈಂಕರ್ಯದ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಿಸಿ ಅವರು ಮಾತನಾಡಿ, ವರ್ಷದ ಮೊದಲ ದಿನವೇ ಯುಗಾದಿ ಎಂಬುದು ಹಿಂದೂ ಧರ್ಮದ ಪ್ರತೀತಿಯಾಗಿದೆ. ಬೇವು- ಬೆಲ್ಲದ ಸಮಾಗಮದ ಈ ದಿನದಂದು ಆ ಭಗವಂತನು ಎಲ್ಲರಿಗೂ ಸರ್ವಮಂಗಳವನ್ನುಂಟು ಮಾಡಲಿ ಎಂದು ಆಶಿಸಿದರು.
ಈ ಯುಗಾದಿಯಿಂದ ಮುಂದಿನ ಸಾಲಿನ ಯುಗಾದಿವರೆಗಿನ ಧಾರ್ಮಿಕ ಕಾರ್ಯಗಳು, ದೇವಾಲಯದ ಎಲ್ಲ ಉತ್ಸವಗಳು ಸೇರಿದಂತೆ ಇನ್ನಿತರ ಅಗತ್ಯ ಮಾಹಿತಿಗಳು ಈ ದಿನಚರಿಯಲ್ಲಿ ಇರುವುದು ವಿಶೇಷವಾಗಿದೆ ಎಂದರು.
ಯೋಗಾನರಸಿಂಹ ಸ್ವಾಮಿ ದೇವಾಲಯದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ನೂತನ ದಿನಚರಿ ಅನ್ನು ದೇವಾಲಯದ ಸಂಸ್ಥಾಪಕರಾದ ನಾಡೋಜ ಪ್ರೊ.ಭಾಷ್ಯಂ ಸ್ವಾಮೀಜಿ ಬಿಡುಗಡೆ ಮಾಡಿದರು.
ಈ ಸಂದರ್ಭ ನಯನ ಕುಮಾರ್ಸ್‌ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಕೆ.ಬಿ ಕುಮಾರ್, ರಘುಲಾಲ್ ಕಂಪನಿಯ ಮುಖ್ಯಸ್ಥ ರಾಘವ್, ಅಸ್ಕರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸೂರ್ಯ ನಾರಾಯಣ ರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net