ಮೈಸೂರು- ಟ್ಯುಟಿಕೋರಿನ್ ಎಕ್ಸ್ ಪ್ರೆಸ್ : ಕಡಂಬೂರ್ ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಅವಕಾಶ

ರೈಲು
ರೈಲು
Published on

ಪ್ರಮುಖ ಮುಖ್ಯಾಂಶಗಳು

  • ಕಡಂಬೂರ್ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ನಿಲುಗಡೆ
ಮೈಸೂರು:  ಮೈಸೂರು- ಟ್ಯುಟಿಕೋರಿನ್-  ಮೈಸೂರು ಎಕ್ಸ್ ಪ್ರೆಸ್ ರೈಲಿಗೆ ಕಡಂಬೂರ್ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ನಿಲುಗಡೆಯನ್ನು ನೀಡಲು ದಕ್ಷಿಣ ರೈಲ್ವೆಯು ನಿರ್ಧರಿಸಿದೆ. 
ಮೈಸೂರು -ಟ್ಯುಟಿಕೋರಿನ್‌ಗೆ ತೆರಳುವ ರೈಲು (ಸಂಖ್ಯೆ 16236) ಬೆಳಗ್ಗೆ 9.13ಕ್ಕೆ ಕಡಂಬೂರ್ ನಿಲ್ದಾಣಕ್ಕೆ ಬರಲಿದ್ದು, 9.15ಕ್ಕೆ ಪ್ರಯಾಣ ಮುಂದುವರಿಸಲಿದೆ. 
ಅದೇ ರೀತಿ ಟ್ಯುಟಿಕೋರಿನ್- ಮೈಸೂರಿಗೆ ಮರಳುವ ರೈಲು (ಸಂಖ್ಯೆ 16235) ಸಂಜೆ 6.14ಕ್ಕೆ ಕಡಂಬೂರ್ ನಿಲ್ದಾಣಕ್ಕೆ ಆಗಮಿಸಿ, 6.16ಕ್ಕೆ ಅಲ್ಲಿಂದ ಹೊರಡಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net