7ರಂದು ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಇದರೊಂದಿಗೆ ಮೂರು ದಿನಗಳೂ 100ಕ್ಕೂ ಹೆಚ್ಚು ಮಳಿಗೆಗಳು (ಸ್ಟಾಲ್‌ಗಳು) ಬೆಳಗ್ಗೆ 10ರಿಂದ ಸಂಜೆ 8ರವರೆಗೂ ತೆರೆದಿರುತ್ತವೆ. ಮೈಸೂರು ಅಲ್ಲದೆ ಕೊಡಗು, ಜೈಪುರ, ರಾಜಸ್ಥಾನ, ಕೇರಳ, ಭುವನೇಶ್ವರ್, ಗುಜರಾತ್, ಜಮ್ಮು-ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಿಂದ ಪ್ರವಾಸೋದ್ಯಮಿಗಳು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.