ಮೈಸೂರಿನಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ

ಮೈಸೂರಿನಲ್ಲಿ ಬುಧವಾರ ಭಾರಿ ಮಳೆ ಸುರಿಯಿತು
ಮೈಸೂರಿನಲ್ಲಿ ಬುಧವಾರ ಭಾರಿ ಮಳೆ ಸುರಿಯಿತು
Published on
ಮೈಸೂರು: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಜ.1 ರಿಂದ ಮಾ.18ರವರೆಗೆ 15.1 ಮಿ.ಮೀ. ವಾಡಿಕೆ ಮಳೆ ಸುರಿಯಬೇಕಾಗಿತ್ತು. ಆದರೆ, 23.3 ಮಿ.ಮೀ. ಮಳೆ ಸುರಿಯುವ ಮೂಲಕ ಶೇ.54 ರಷ್ಟು ಹೆಚ್ಚುವರಿ ಮಳೆಯಾಗಿದೆ.
ಜಿಲ್ಲೆಯಲ್ಲಿ ಅತಿಹೆಚ್ಚು ಮಳೆ ಸುರಿಯುವ ಎಚ್.ಡಿ. ಕೋಟೆ ತಾಲೂಕಿನಲ್ಲಿ ಪ್ರಸಕ್ತ ವರ್ಷ ಮಳೆಯ ಕೊರತೆ ಕಂಡು ಬಂದಿದೆ. ಅದೇ ರೀತಿ ಹುಣಸೂರು ಹಾಗೂ ಸರಗೂರು ತಾಲೂಕುಗಳು ಸಹ ಮಳೆಯ ಕೊರತೆಯನ್ನು ಎದುರಿಸುತ್ತಿದೆ. ಉಳಿದ ಎಲ್ಲ ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ.
ತಾಲೂಕುವಾರು ವಿವರ: ಎಚ್.ಡಿ. ಕೋಟೆ ತಾಲೂಕಿನಲ್ಲಿ ಜ.1 ರಿಂದ ಮಾ.18ರ ಅವಧಿಯಲ್ಲಿ 8.9 ಮಿ.ಮೀ (20.1 ಮಿ.ಮೀ. ವಾಡಿಕೆ ಮಳೆ) ಸುರಿದಿದ್ದು, ಶೇ.56 ರಷ್ಟು ಮಳೆಯ ಕೊರತೆ ಕಂಡು ಬಂದಿದೆ. ಹುಣಸೂರು ತಾಲೂಕಿನಲ್ಲಿ ಶೇ.32 ರಷ್ಟು ಮಳೆಯ ಕೊರತೆ ಎದುರಾ ಗಿದ್ದು, 8.9 ಮಿ.ಮೀ. (13.1 ಮಿ.ಮೀ.) ಮಳೆಯಾಗಿದೆ. ಅದೇ ರೀತಿ ಸರಗೂರು ತಾಲೂಕಿನಲ್ಲಿ ಶೇ.14 ರಷ್ಟು ಮಳೆಯ ಕೊರತೆ ಕಂಡು ಬಂದಿದ್ದು, 13.1 ಮಿ.ಮೀ. (15.3 ಮಿ.ಮೀ.) ಮಳೆ ಸುರಿದಿದೆ.
ಎಚ್.ಡಿ. ಕೋಟೆ ತಾಲೂಕಿಗೆ ಹೋಲಿಕೆ ಮಾಡಿದರೆ ತಿ.ನರಸೀಪುರ, ಮೈಸೂರು ಹಾಗೂ ನಂಜನಗೂಡು ತಾಲೂಕಿನಲ್ಲಿ ಕಡಿಮೆ ಮಳೆ ಸುರಿಯುತ್ತದೆ. ಆದರೆ, ಪ್ರಸಕ್ತ ವರ್ಷ ಈ ಮೂರು ತಾಲೂಕುಗಳಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. ತಿ.ನರಸೀಪುರ ತಾಲೂಕಿನಲ್ಲಿ ಜಿಲ್ಲೆಯಲ್ಲಿಯೇ ಅತಿಹೆಚ್ಚು ಮಳೆ ದಾಖಲಾಗಿದ್ದು, ಶೇ.277 ರಷ್ಟು ಹೆಚ್ಚುವರಿ ಮಳೆ ಸುರಿದಿದೆ. ತಾಲೂಕಿನಲ್ಲಿ 12.8 ಮಿ.ಮೀ. ಮಳೆ ವಾಡಿಕೆ ಮಳೆ ಸುರಿಯಬೇಕಿತ್ತು. ಆದರೆ, 48.2 ಮಿ.ಮೀ. ಮಳೆಯಾಗಿದೆ.
ಅದೇ ರೀತಿ ಮೈಸೂರು ತಾಲೂಕಿನಲ್ಲಿ ಶೇ.130 ರಷ್ಟು ಹೆಚ್ಚುವರಿ ಮಳೆಯಾಗಿದ್ದು, 41 ಮಿ.ಮೀ. (17.8 ಮಿ.ಮೀ. ವಾಡಿಕೆ ಮಳೆ)ಯಾಗಿದೆ. ನಂಜನಗೂಡು ತಾಲೂಕಿನಲ್ಲಿ ಶೇ.125 ರಷ್ಟು ಹೆಚ್ಚುವರಿ ಮಳೆ ಸುರಿದಿದ್ದು, 35.5 ಮಿ.ಮೀ. (15.8 ಮಿ.ಮೀ.) ಮಳೆ ದಾಖಲಾಗಿದೆ. ಕೆ.ಆರ್. ನಗರ ತಾಲೂಕಿನಲ್ಲಿ ಶೇ.44 ರಷ್ಟು ಹೆಚ್ಚುವರಿ ಮಳೆಯಾಗಿದ್ದು, 18.3 ಮಿ.ಮೀ. (12.7 ಮಿ.ಮೀ.)ಮಳೆ ಸುರಿದಿದೆ. ಪಿರಿಯಾಪಟ್ಟಣ ತಾಲೂಕಿನಲ್ಲಿ ಶೇ.19 ರಷ್ಟು ಹೆಚ್ಚುವರಿ ಮಳೆಯಾಗಿದೆ. ತಾಲೂಕಿನಲ್ಲಿ ವಾಡಿಕೆ ಮಳೆ 15 ಮಿ.ಮೀ.ಇದ್ದು, 17.8 ಮೀ.ಮೀ. ಮಳೆ ಸುರಿದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net