‘ಮೈಸೂರು ಸಾಹಿತ್ಯ ಸಂಭ್ರಮ’ಕ್ಕೆ ಚಾಲನೆ

ಮೈಸೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಆಯೋಜಿಸಿದ್ದ ‘ಮೆಸೂರು ಸಾಹಿತ್ಯ ಸಂಭ್ರಮ’ ಕಾರ್ಯಕ್ರಮದಲ್ಲಿ ಪದ್ಮಶ್ರೀ ಎಂ. ಅಂಕೇಗೌಡ ದಂಪತಿಯನ್ನು ಅಭಿನಂದಿಸಲಾಯಿತು. ಪ್ರಮೋದಾದೇವಿ ಒಡೆಯರ್, ಅಮಿಷ್ ತ್ರಿಪಾಠಿ, ಆರೂನ್ ರಾಮನ್, ಶುಭಾ ಸಂಜಯ್ ಅರಸ್, ತನ್‌ಕಮ್ ಪಣಕಲ್ ಇದ್ದರು.
ಮೈಸೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಆಯೋಜಿಸಿದ್ದ ‘ಮೆಸೂರು ಸಾಹಿತ್ಯ ಸಂಭ್ರಮ’ ಕಾರ್ಯಕ್ರಮದಲ್ಲಿ ಪದ್ಮಶ್ರೀ ಎಂ. ಅಂಕೇಗೌಡ ದಂಪತಿಯನ್ನು ಅಭಿನಂದಿಸಲಾಯಿತು. ಪ್ರಮೋದಾದೇವಿ ಒಡೆಯರ್, ಅಮಿಷ್ ತ್ರಿಪಾಠಿ, ಆರೂನ್ ರಾಮನ್, ಶುಭಾ ಸಂಜಯ್ ಅರಸ್, ತನ್‌ಕಮ್ ಪಣಕಲ್ ಇದ್ದರು.
Published on
ಮೈಸೂರು: ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಹಾಗೂ ಮೈಸೂರು ಬುಕ್ ಕ್ಲಬ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ‘ಮೈಸೂರು ಸಾಹಿತ್ಯ ಸಂಭ್ರಮ’ಕ್ಕೆ ಶನಿವಾರ ಚಾಲನೆ ದೊರೆಯಿತು.
ಲೇಖಕ ಅಮಿಷ್ ತ್ರಿಪಾಠಿ ಮಾತನಾಡಿ, ಮೈಸೂರು ರಾಜರು ಕೇವಲ ತಮ್ಮ ವೈಯಕ್ತಿಕ ಜೀವನಕ್ಕೆ ಮಾತ್ರ ಮಹತ್ವ ನೀಡದೆ ಎಲ್ಲ ಪ್ರಜೆಗಳ ಹಿತ ಕಾಯುತ್ತಿದ್ದರಿಂದ ಇಲ್ಲಿ ವಿಶ್ವವಿದ್ಯಾನಿಲಯಗಳು ಆರಂಭವಾದವು ಹಾಗೂ ಅನೇಕ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿದವು ಎಂದರು.
ಸ್ವಾತಂತ್ರೃ ಪೂರ್ವದಲ್ಲಿಯೇ ಮೈಸೂರಿನಲ್ಲಿ ಶಿಕ್ಷಣ ಮತ್ತು ಸಾಹಿತ್ಯಕ್ಕೆ ನೀಡುತ್ತಿದ್ದ ಆದ್ಯತೆ ಅವಿಸ್ಮರಣೀಯ. ಈ ಕಾರಣಕ್ಕೆ ಇಂದಿಗೂ ಮೆಸೂರು ಶೈಕ್ಷಣಿಕವಾಗಿ ತನ್ನ ಛಾಪು ಮೂಡಿಸಿರುವುದಲ್ಲದೇ, ಸಾಹಿತ್ಯಿಕವಾಗಿಯೂ ಗುರುತು ಹೊಂದಿದೆ ಎಂದು ಹೇಳಿದರು.
ಲೇಖಕ ಆರೂನ್ ರಾಮನ್ ಮಾತನಾಡಿ, ಮೈಸೂರು ಸಾಹಿತ್ಯ ಹಬ್ಬವು ಕೇವಲ ಮೈಸೂರಿನವರನ್ನು ಒಳಗೊಂಡ ಸಾಹಿತ್ಯ ಸಂಭ್ರಮವಾದರೂ ಎಲ್ಲೆಡೆಯಿಂದ ಸಾಹಿತ್ಯಾಸಕ್ತರನ್ನು ತನ್ನತ್ತ ಸೆಳೆಯುತ್ತಿದೆ ಎಂದರು.
ಸಾಹಿತ್ಯ ಸಂಭ್ರಮಕ್ಕೆ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಿ ಶುಭ ಹಾರೈಸಿದರು. ಈ ಸಂದರ್ಭ ಪಾಂಡವಪುರ ತಾಲೂಕು ಹರಳಹಳ್ಳಿಯ ಪುಸ್ತಕ ಮನೆ ನಿರ್ಮಾತೃ ಪದ್ಮಶ್ರೀ ಎಂ. ಅಂಕೇಗೌಡ ದಂಪತಿಯನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷೆ ಶುಭಾ ಸಂಜಯ್ ಅರಸ್, ಕಾರ್ಯದರ್ಶಿ ತನ್‌ಕಮ್ ಪಣಕಲ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net