ನಿಲ್ದಾಣದಲ್ಲಿ ದಿನಕ್ಕೆ ಸರಾಸರಿ 60 ಸಾವಿರ ಪ್ರಯಾಣಿಕರ ಸಂಚಾರವಿದ್ದು, ದಿನನಿತ್ಯ ಸುಮಾರು 21-25 ಲಕ್ಷಗಳಷ್ಟು ರೂ. ಆದಾಯವನ್ನು ಗಳಿಸುತ್ತದೆ. ಎಸ್ಕಲೆಟರ್‌ಗಳು, ಅಂಡರ್‌ಪಾಸ್, ಪಾದಚಾರಿ ಮೇಲ್ಸೇತುವೆ, ಕೋಚ್ ಸೂಚನಾ ಲಕಗಳು, ಸಾರ್ವಜನಿಕ ಘೋಷಣೆ ವ್ಯವಸ್ಥೆ, ಆಹಾರ ಮಳಿಗೆಗಳು, ನಿರೀಕ್ಷಣಾ ಮಂದಿರಗಳು, ಬ್ಯಾಟರಿ ಚಾಲಿತ ವಾಹನಗಳು, ಎಟಿಎಂಗಳಂತಹ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ನಿಲ್ದಾಣವು ದಿವ್ಯಾಂಗ ಜನಸ್ನೇಹಿ ಕೂಡ ಆಗಿದೆ ಎಂದು ಹೇಳಿದರು.