ಗ್ರಂಥಾಲಯ, ಡಿಜಿಟಲ್ ಸೌಲಭ್ಯಕ್ಕಾಗಿ ಮೈಸೂರು ವಕೀಲರ ಸಂಘದಿಂದ ಸಿಎಂಗೆ ಮನವಿ

ಮೈಸೂರು ವಕೀಲರ ಸಂಘದ ಕಟ್ಟಡ ಮೇಲ್ದರ್ಜೆಗೇರಿಸಲು, ಗ್ರಂಥಾಲಯ ಆಧುನೀಕರಿಸಿ ಡಿಜಿಟಲ್ ಸೌಲಭ್ಯ ಒದಗಿಸಿ ಮೂಲ ಸೌಕರ್ಯಕ್ಕಾಗಿ ಹೆಚ್ಚುವರಿ 10 ಕೋಟಿ ರೂ.ಅನುದಾನ ನೀಡುವಂತೆ ಮೈಸೂರು ವಕೀಲರ ಸಂಘದಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಎಸ್.ಲೋಕೇಶ್, ಎ.ಜಿ.ಸುಧೀರ್, ಜಿ.ಎಸ್.ಶಿವಸ್ವಾಮಿ, ಎಚ್.ಅರವಿಂದ್, ಸುರೇಶ್ ಪಡುವಾರಹಳ್ಳಿ, ವೆಂಕಟೇಶ್ ದಾಸನಕೊಪ್ಪಲು ಇತರರು ಇದ್ದರು.
ಮೈಸೂರು ವಕೀಲರ ಸಂಘದ ಕಟ್ಟಡ ಮೇಲ್ದರ್ಜೆಗೇರಿಸಲು, ಗ್ರಂಥಾಲಯ ಆಧುನೀಕರಿಸಿ ಡಿಜಿಟಲ್ ಸೌಲಭ್ಯ ಒದಗಿಸಿ ಮೂಲ ಸೌಕರ್ಯಕ್ಕಾಗಿ ಹೆಚ್ಚುವರಿ 10 ಕೋಟಿ ರೂ.ಅನುದಾನ ನೀಡುವಂತೆ ಮೈಸೂರು ವಕೀಲರ ಸಂಘದಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಎಸ್.ಲೋಕೇಶ್, ಎ.ಜಿ.ಸುಧೀರ್, ಜಿ.ಎಸ್.ಶಿವಸ್ವಾಮಿ, ಎಚ್.ಅರವಿಂದ್, ಸುರೇಶ್ ಪಡುವಾರಹಳ್ಳಿ, ವೆಂಕಟೇಶ್ ದಾಸನಕೊಪ್ಪಲು ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಶೇಷ ಅನುದಾನದಡಿಯಲ್ಲಿ ವಕೀಲರ ಸಂಘಕ್ಕೆ ಹೆಚ್ಚುವರಿ 10 ಕೋಟಿ ರೂ. ಮಂಜೂರಿಗೆ ಮನವಿ
  • ಪ್ರಸ್ತುತ ಗ್ರಂಥಾಲಯ ಆಧುನೀಕರಿಸುವುದು, ಡಿಜಿಟಲ್ ಸೌಲಭ್ಯ, ಮೂಲಸೌಕರ್ಯ ಅಭಿವೃದ್ಧಿಗೆ ಕೋರಿಕೆ
ಮೈಸೂರು:ಮೈಸೂರು ವಕೀಲರ ಸಂಘದ ನವೀಕರಣ, ಗ್ರಂಥಾಲಯ ಆಧುನೀಕರಿಸಿ ಡಿಜಿಟಲ್ ಸೌಲಭ್ಯ ಒದಗಿಸಿ ಮೂಲಸೌಕರ್ಯದೊಂದಿಗೆ ಮೇಲ್ದರ್ಜೆಗೇರಿಸಲು ಹೆಚ್ಚುವರಿ 10 ಕೋಟಿ ರೂ.ಅನುದಾನ ನೀಡುವಂತೆ ಮೈಸೂರು ವಕೀಲರ ಸಂಘದಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಬೆಂಗಳೂರಿನ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಭೇಟಿಯಾದ ಸಂಘದ ಪದಾಧಿಕಾರಿಗಳು, ಹಿರಿಯ ವಕೀಲರ ತಂಡದಿಂದ ಸ್ವತಂತ್ರ ವಕೀಲರ ಭವನ ನಿರ್ಮಾಣ ಕಾಮಗಾರಿಗೆ 10 ಕೋಟಿ ರೂ. ಅನುದಾನ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ಅಲ್ಲದೆ ಇದೇ ಸಂದರ್ಭದಲ್ಲಿ ಪ್ರಸ್ತುತ ಗ್ರಂಥಾಲಯ ಆಧುನೀಕರಿಸುವುದು, ಡಿಜಿಟಲ್ ಸೌಲಭ್ಯ, ಮೂಲಸೌಕರ್ಯ ಅಭಿವೃದ್ಧಿಪಡಿಸಿ ಸಂಘದ ಕಟ್ಟಡ ಮೇಲ್ದರ್ಜೆಗೇರಿಸುವುದು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ವಕೀಲರ ಸಂಘಕ್ಕೆ ಹೆಚ್ಚುವರಿ 10 ಕೋಟಿ ರೂ. ಮಂಜೂರು ಮಾಡುವಂತೆ ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್ ಮನವಿ ಮಾಡಿದರು.
ಸಿವಿಲ್ ಪ್ರಕರಣಗಳನ್ನು ಆಯಾ ಜಿಲ್ಲಾ ವ್ಯಾಪ್ತಿಯ ಜಿಲ್ಲಾ ನ್ಯಾಯಾಲಯಗಳಲ್ಲಿಯೇ ಇತ್ಯರ್ಥ ಪಡಿಸಿಕೊಳ್ಳುವಂತೆ ಹೈಕೋರ್ಟ್ ತಿಳಿಸಿದೆ. ಆದರೆ ಹೈಕೋರ್ಟ್‌ನ ಈ ತೀರ್ಮಾನದ ವಿರುದ್ಧ ಕೆಲವರು ಮೇಲ್ಮನವಿ ಸಲ್ಲಿಸಿದ್ದಾರೆ. ಆದ್ದರಿಂದ ಸರ್ಕಾರ ಮಧ್ಯೆ ಪ್ರವೇಶಿಸಿ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬೇಕು ಎನ್ನುವ ಆದೇಶವನ್ನು ಜಾರಿಗೊಳಿಸಲು ಮುಂದಾಗಬೇಕು ಎಂದು ಕೋರಲಾಯಿತು.
ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡುವ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗುವುದು. ಸಿವಿಲ್ ಪ್ರಕರಣಗಳ ವಿಷಯದಲ್ಲಿ ಹೈಕೋರ್ಟ್ ನಿಲುವನ್ನು ಸರ್ಕಾರ ಸಮರ್ಥಿಸಿಕೊಂಡಿದೆ. ಒಂದು ವೇಳೆ ಈ ವಿಷಯ ಸುಪ್ರೀಂ ಕೋರ್ಟ್‌ಗೆ ಹೋದರೆ, ಸರ್ಕಾರದ ವತಿಯಿಂದ ಸಮರ್ಥ ಹಾಗೂ ಹಿರಿಯ ವಕೀಲರನ್ನು ನೇಮಿಸಿ, ನ್ಯಾಯ ದೊರಕುವಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು.
ಮೈಸೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ.ಸುಧೀರ್, ಹಿರಿಯ ಸಮಿತಿ ಸದಸ್ಯ ಜಿ.ಎಸ್.ಶಿವಸ್ವಾಮಿ, ಹಿರಿಯ ವಕೀಲರಾದ ಎಚ್.ಅರವಿಂದ್, ಸುರೇಶ್ ಪಡುವಾರಹಳ್ಳಿ, ವೆಂಕಟೇಶ್ ದಾಸನಕೊಪ್ಪಲು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net