ಹಬ್ಬಗಳು, ಜಾತ್ರೆಗಳು ಪ್ರವಾಸಿ ಸ್ಥಳಗಳು, ಸಾರ್ವಜನಿಕ ಸಮಾರಂಭಗಳು ಮತ್ತು ಜನಸಂದಣಿ ಇರುವ ಸ್ಥಳಗಳಲ್ಲಿ ಹೀಲಿಯಂ ಅನಿಲ ಬಳಕೆಯು ಸಾರ್ವಜನಿಕ ಜೀವನಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಆದ್ದರಿಂದ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆಯಡಿ ನಗರದ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ ಸಮಾರಂಭಗಳು ಮುಂತಾದವುಗಳು ನಡೆಯುವ ಸ್ಥಳಗಳಲ್ಲಿ ಹೀಲಿಯಂ ಅನಿಲ ವನ್ನು ಬಳಸಿ ಬಲೂನ್‌ಗಳು ತುಂಬುವುದು, ಹೀಲಿಯಂ ಅನಿಲವನ್ನು ನಿರ್ದಿಷ್ಟಗೊಂಡ ಪ್ರಮಾಣಿತ ಸುರಕ್ಷತಾ ವಿಧಾನಗಳನ್ನು ಅನುಸರಿಸದೆ ಬಲೂನ್ ಮಾರಾಟಗಾರರು, ಕಾರ್ಯಕ್ರಮ ಆಯೋಜಕರು, ವ್ಯಾಪಾರಿಗಳು ಇತರೆ ಸಾರ್ವಜನಿಕರು ಇದನ್ನು ಸಂಗ್ರಹಿ ಸುವುದು ಮತ್ತು ಬಳಕೆ ಹಾಗೂ ಸಾಗಣೆ ಮಾಡುವುದು ಹಾಗೂ ಮಾರಾಟ ಮಾಡುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ.