ಬಾರ್ ತೆರೆಯಲು ಅವಕಾಶ ಆಗ್ರಹ

ಹುಣಸೂರು ತಾಲೂಕು ಬೋಳನಹಳ್ಳಿಯಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಗ್ರಾಮದ ಮುಖಂಡರು ಪಿಡಿಒರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಮಾದನಾಯ್ಕ, ಮಹಡಿಮನೆ ಶಿವಣ್ಣ, ಎಚ್.ಡಿ.ಮಹದೇವ್, ಕೃಷ್ಣ, ವೀರಣ್ಣನಾಯಕ ಇತರರು ಇದ್ದರು.
ಹುಣಸೂರು ತಾಲೂಕು ಬೋಳನಹಳ್ಳಿಯಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಗ್ರಾಮದ ಮುಖಂಡರು ಪಿಡಿಒರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಮಾದನಾಯ್ಕ, ಮಹಡಿಮನೆ ಶಿವಣ್ಣ, ಎಚ್.ಡಿ.ಮಹದೇವ್, ಕೃಷ್ಣ, ವೀರಣ್ಣನಾಯಕ ಇತರರು ಇದ್ದರು.
Published on
ಹುಣಸೂರು : ತಾಲೂಕಿನ ಬಿಳಿಕೆರೆ- ಕೆ.ಆರ್.ನಗರ ಮುಖ್ಯರಸ್ತೆಯ ಬೋಳನಹಳ್ಳಿ ಗ್ರಾಮ ಸಮೀಪ ಬಾರ್ ತೆರೆಯಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಗ್ರಾಮದ ರೈತ ಸಂಘ, ಸ್ತ್ರೀಶಕ್ತಿ ಸಂಘಗಳು ಸೇರಿದಂತೆ ವಿವಿಧ ಸಂಘಟನೆಗಳು ಬೋಳನಹಳ್ಳಿ ಗ್ರಾ.ಪಂ. ಪಿಡಿಒಗೆ ಮನವಿ ಸಲ್ಲಿಸಿದರು.
ಮಂಗಳವಾರ ಮನವಿ ಸಲ್ಲಿಸಿ ಮಾತನಾಡಿದ ಗ್ರಾಮದ ಮುಖಂಡರಾದ ಮಾದನಾಯ್ಕ, ಮಹಡಿಮನೆ ಶಿವಣ್ಣ ಮುಂತಾದವರು. ಬೋಳನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸರಾಮನಹಳ್ಳಿ ಗ್ರಾಮ ಹಾಗೂ ಬೋಳನಹಳ್ಳಿ ಅವಳಿ ಗ್ರಾಮಗಳಂತಿವೆ. ಬೋಳನಹಳ್ಳಿಯಲ್ಲಿ ಬ್ಯಾಂಕ್, ದೇವಾಲಯ, ಶಾಲೆ, ಆಸ್ಪತ್ರೆ ಸಮೀಪವೇ ಹೊಸರಾಮನಹಳ್ಳಿ ವ್ಯಾಪ್ತಿಯ ಬಾರ್ ತೆರೆಯಲು ಪಂಚಾಯ್ತಿಗೆ ಎನ್‌ಒಸಿಗಾಗಿ ಅರ್ಜಿ ಸಲ್ಲಿಸಿದ್ದು, ಇಲ್ಲಿ ಬಾರ್‌ಗೆ ಎನ್‌ಒಸಿ ನೀಡಲು ಜನರಿಂದ ವಿರೋಧವಿದೆ. ಗ್ರಾಮಸ್ಥರ ವಿರೋಧದ ನಡುವೆಯೂ ಎನ್‌ಒಸಿ ನೀಡಿದರೆ, ರೈತಸಂಘ, ಸ್ತ್ರೀಶಕ್ತಿ ಸಂಘಗಳು ಸೇರಿ ವಿವಿಧ ಸಂಘಟನೆಗಳು ಮತ್ತು ಗ್ರಾಮಸ್ಥರು ಒಗ್ಗ್ಗೂಡಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪಿಡಿಒ ಪರಶುರಾಂ ಅಗಸನಹಳ್ಳಿ ಮನವಿ ಸ್ವೀಕರಿಸಿದರು. ಈ ವೇಳೆ ಗ್ರಾಮದ ಯಜಮಾನರಾದ ರಾಮನಾಯ್ಕ, ಶಿವಪ್ಪನಾಯ್ಕ, ಜೆ.ಮಾದನಾಯ್ಕ, ಚಂದ್ರನಾಯ್ಕ, ಪ್ರದೀಪ್‌ಕುಮಾರ್, ಡಿ.ಮಂಜುನಾಥ್, ಎಚ್.ರಮೇಶ್, ಮಹದೇವ್, ಜಯರಾಮ್, ರೈತ ಸಂಘದ ತಾಲೂಕು ಅಧ್ಯಕ್ಷ ದೇವರಾಜನಾಯ್ಕ, ಎಚ್.ಡಿ.ಮಹದೇವ್, ಕೃಷ್ಣ, ವೀರಣ್ಣನಾಯಕ, ಪ್ರಶಾಂತ್‌ಕುಮಾರ್ ಇತರರು ಇದ್ದರು.
ಇಲಾಖೆ ಗಮನಕ್ಕೆ ಬಂದಿಲ್ಲ: ಹೊಸರಾಮನಹಳ್ಳಿ ಮತ್ತು ಹುಣಸೇಗಾಲ ಗ್ರಾಮದಲ್ಲಿ ಬಾರ್ ತೆರೆಯಲು ಅಬಕಾರಿ ಇಲಾಖೆಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ. ಎನ್‌ಒಸಿ ಪಡೆಯಲು ಮುಂದಾಗಿರುವುದು ಸಹ ಇಲಾಖೆ ಗಮನಕ್ಕೆ ಬಂದಿಲ್ಲ ಎಂದು ಅಬಕಾರಿ ಇನ್‌ಸ್ಪೆಕ್ಟರ್ ಧರ್ಮರಾಜ್ ವಿಜಯವಾಣಿಗೆ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net