ಕಂದೇಗಾಲ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ಕೊಂಡೋತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ಸರತಿಯಲ್ಲಿ ಸಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸರಗೂರು ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಮಾಡಲಾಗಿತ್ತು. ಭಕ್ತರಿಗೆ ಅನ್ನ ಸಂರ್ತಪಣೆ ಮಾಡಲಾಯಿತು. ಜಿಪಂ ಮಾಜಿ ಸದಸ್ಯರಾದ ಕೆ.ಚಿಕ್ಕವೀರ ನಾಯಕ, ರೂಪಾ ಲೋಕೇಶ್, ಮಾಜಿ ಶಾಸಕ ಎಂ.ಪಿ.ವೆಂಕಟೇಶ್ ಅವರ ಪುತ್ರ ಎಂ.ಪಿ.ಶಂಕರ್, ಎಂ.ಎಸ್.ಚರಣ್ ಮುಖಂಡರಾದ ಪಟೇಲ್ ರಾಜಪ್ಪ, ಸೋಮಣ್ಣ, ರವೀಶ್, ಕೆ.ವಿ.ರುದ್ರಯ್ಯ, ಮಾದಪ್ಪ, ಮಲ್ಲೇಶ್, ಶ್ರೀಕಂಠಸ್ವಾಮಿ, ಬಸವರಾಜು, ಚಲುವಯ್ಯ, ಲಕ್ಷ್ಮಣ್, ರವಿ ಆರಸ್, ಕಾಳಸ್ವಾಮಿ, ಮಹೇಶ್ ಇತರರು ಇದ್ದರು.