ಉತ್ತಮ ಜೀವನ ರೂಪಿಸಿಕೊಳ್ಳಲು ಶಿಕ್ಷಣ ಅಗತ್ಯ

ಸರಗೂರು ಸಮೀಪದ ತುಂಬಸೋಗೆ ಎಂಎಂಕೆ ಸ್ವತಂತ್ರ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾಯಕ್ರಮ ಆಯೋಜಿಸಲಾಗಿತ್ತು. ರಮಾನಂದ, ರಾಮೇಗೌಡ, ಅಮ್ಮರಾಮಚಂದ್ರ, ಎಂ.ಎನ್.ರವಿಶಂಕರ್ ಇತರರು ಇದ್ದರು.
ಸರಗೂರು ಸಮೀಪದ ತುಂಬಸೋಗೆ ಎಂಎಂಕೆ ಸ್ವತಂತ್ರ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾಯಕ್ರಮ ಆಯೋಜಿಸಲಾಗಿತ್ತು. ರಮಾನಂದ, ರಾಮೇಗೌಡ, ಅಮ್ಮರಾಮಚಂದ್ರ, ಎಂ.ಎನ್.ರವಿಶಂಕರ್ ಇತರರು ಇದ್ದರು.
Published on
ಸರಗೂರು: ವಿದ್ಯಾರ್ಥಿಗಳು ಪದವಿ ಪೂರ್ವ ಹಂತದಲ್ಲಿ ಪುಸ್ತಕವನ್ನು ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಪುಸ್ತಕಗಳು ಬದುಕಿನ ಶೈಲಿಯಾಗಬೇಕು. ಇದರಿಂದ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಮೈಸೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಮಾನಂದ ತಿಳಿಸಿದರು.
ಇತ್ತೀಚೆಗೆ ತಾಲೂಕಿನ ಸಮೀಪದ ತುಂಬಸೋಗೆ ಎಂಎಂಕೆ ಸ್ವತಂತ್ರ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿಮ್ಮ ಮೇಲೆ ನೀವೇ ನಂಬಿಕೆ ಇಟ್ಟು ಆತ್ಮವಿಶ್ವಾಸ ಮತ್ತು ದೃಢತೆಯಿಂದ ಮಾತನಾಡಬೇಕು. ನಿಮ್ಮಲ್ಲಿ ಸಾಧನೆ ಆಟ ಮತ್ತು ಛಲ ಇರಬೇಕು. ಪ್ರತಿ ವಿದ್ಯಾರ್ಥಿ ಕೈಯಲ್ಲೂ ಇದು ಸಾಧ್ಯ. ಆದ್ದರಿಂದ ಸಾಮಾನ್ಯ ಜ್ಞಾನ ಸಂಪಾದಿಸಬೇಕು. ಇದು ಮುಂದಿನ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುತ್ತದೆ. ನೀವು ಶಿಕ್ಷಣದಲ್ಲಿ ಸಾಧನೆ ಮಾಡಿದರೆ ನಿಮ್ಮ ಪಾಲಕರು ಖುಷಿಯಾಗಿರುತ್ತಾರೆ. ಅವರ ಆಸೆ ಈಡೇರುತ್ತದೆ. ಉತ್ತಮ ಜೀವನ ರೂಪಿಸಿಕೊಳ್ಳುವುದಕ್ಕೆ ಶಿಕ್ಷಣ ಅಗತ್ಯ ಎಂದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮೇಗೌಡ ಮಾತನಾಡಿ, ಮಕ್ಕಳಿಗೆ ಸಾಧನೆ ಮುಖ್ಯ. ಈಗಿನ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದರೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದರು.
ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಅಂತಾರಾಷ್ಟ್ರೀಯ ಜಾನಪದ ಕಲಾವಿದ ಅಮ್ಮ ರಾಮಚಂದ್ರ, ನಿವೃತ್ತ ಪ್ರಾಧ್ಯಾಪಕ ಚಂದ್ರಗೌಡ್ರು, ವಕೀಲ ಎಂ.ಎನ್.ರವಿಶಂಕರ್, ಸರ್ಕಾರಿ ಪದವಿ ಪೂರ್ವ ಕಾಲೇಜು ಹನುಮಂತರಾವ್, ಸಿ.ಡಿ.ಸಿ ಅಧ್ಯಕ್ಷ ಎಸ್.ಎನ್. ಮೋಹನ್‌ಕುಮಾರ್, ಪ್ರಾಂಶುಪಾಲ ಎಸ್.ಪಿ.ಪ್ರಕಾಶ್, ಉಪನ್ಯಾಸಕ ವಿರೂಪಾಕ್ಷ, ಸಿದ್ದರಾಜು, ಸಿದ್ದಾರ್ಥ, ಮೋಹನ್, ಮಾದೇವಿ, ಮಹೇಶ್, ಕೃಪಾ, ಮುಸ್ಕಾನ್, ತನುಜಾ, ಹರೀಶ್, ಸುಪ್ರಿಯಾ, ಜಾನ್ ಬಾಸ್ಕೋ, ಮನೋಜ್, ಸೌಜನ್ಯಾ, ನೀಲಮಣಿ, ಅನಿಲ್ ಹಾಜರಿದ್ದರು.
ಪೋಟೋ ಕ್ಯಾಪ್ಸನ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net