ಭವನಗಳು ಸಮಾಜಮುಖಿ ಕಾರ್ಯಗಳಿಗೆ ಸದ್ಬಳಕೆಯಾಗಲಿ

ಹನಗೋಡು ಹೋಬಳಿಯ ಕಾಮಗೌಡನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಸವ ಭವನವನ್ನು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಉದ್ಘಾಟಿಸಿದರು. ಡಾ. ವೃಷಭೇಂದ್ರಸ್ವಾಮಿ, ಡಾ.ಎಚ್.ವಿ. ಕಾರ್ತಿಕ್, ಕೆ.ಇ. ಈಶ್ವರ್ ಇದ್ದರು.
ಹನಗೋಡು ಹೋಬಳಿಯ ಕಾಮಗೌಡನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಸವ ಭವನವನ್ನು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಉದ್ಘಾಟಿಸಿದರು. ಡಾ. ವೃಷಭೇಂದ್ರಸ್ವಾಮಿ, ಡಾ.ಎಚ್.ವಿ. ಕಾರ್ತಿಕ್, ಕೆ.ಇ. ಈಶ್ವರ್ ಇದ್ದರು.
Published on
ಹನಗೋಡು: ಇಲ್ಲಿನ ಕಾಮಗೌಡನಹಳ್ಳಿಯಲ್ಲಿ 80 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವೀರಶೈವ ಲಿಂಗಾಯತ ಸಮಾಜದ ಬಸವ ಭವನ ಉದ್ಘಾಟನೆಯನ್ನು ಬುಧವಾರದಂದು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ 10 ಲಕ್ಷ ರೂ. ಹಾಗೂ ದಾಸೋಹಕ್ಕೆ 50 ಸಾವಿರ ರೂ. ಗಳನ್ನು ನಮ್ಮ ತಾಯಿ ರತ್ನಮ್ಮ ಪ್ರೇಮ್ ಕುಮಾರ್ ಅವರ ಹೆಸರಿನಲ್ಲಿ ನೀಡಿದ್ದೇನೆ. ಭವನವನ್ನು ಗ್ರಾಮಸ್ಥರು ಸಾಮಾಜಿಕ ಸೇವಾ ಹಾಗೂ ಧಾರ್ಮಿಕ ಕಾರ್ಯಗಳಿಗೆ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ವೇಳೆ ಗ್ರಾಮದ ಪರವಾಗಿ ಎಚ್.ಪಿ. ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಸಮಾಜ ಸೆವಕರಾದ ಡಾ. ವೃಷಭೇಂದ್ರಸ್ವಾಮಿ, ಉದ್ಯಮಿ ಡಾ.ಎಚ್.ವಿ. ಕಾರ್ತಿಕ್, ಗ್ರಾಪಂ ಸದಸ್ಯರಾದ ಕೆ.ಇ. ಈಶ್ವರ್, ಶಿವಣ್ಣ, ಸಂತೋಷ್ ಕುಮಾರ್ ಗ್ರಾಮದ ಮುಖಂಡರಾದ ಮಹದೇವಪ್ಪ, ಮಂಜುನಾಥ್, ಲಿಂಗರಾಜಪ್ಪ, ಬಸಪ್ಪ ನಾಗರಾಜ್ ಸೇರಿದಂತೆ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net