ಚಿಂದಿ ಆಯುವ ಯುವಕನ ಕೊಲೆ, ಆರೋಪಿಗಳ ಬಂಧನ

ಕೊಲೆ
ಕೊಲೆ
Published on

ಪ್ರಮುಖ ಮುಖ್ಯಾಂಶಗಳು

  • ನಶೆಯಲ್ಲಿದ್ದ ಸಂದರ್ಭದಲ್ಲಿ ಶಶಿಕುಮಾರ್ ಮತ್ತು ಸ್ನೇಹಿತರ ನಡುವೆ ಗಲಾಟೆ
  • ಆರೋಪಿಗಳು ನ್ಯಾಯಾಂಗ ಬಂಧನಕ್ಕೆ
  • ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿಗಳು
ಮೈಸೂರು: ನಗರದ ಚಾಮರಾಜ ಜೋಡಿರಸ್ತೆಯಲ್ಲಿ ಚಿಂದಿ ಆಯುವ ಯುವಕರಲ್ಲಿ ನಡುವೆ ನಡೆದ ಗಲಾಟೆಯಲ್ಲಿ ಒಬ್ಬನ ಕೊಲೆಯಾಗಿದೆ.
ಶಿವಮೊಗ್ಗ ಮೂಲದ ಶಶಿಕುಮಾರ್ ಕೊಲೆಯಾದ ವ್ಯಕ್ತಿ.
ಹತ್ಯೆ ಆರೋಪಿಗಳಾದ ಸ್ನೇಹಿತರಾದ ನರಸಿಂಹ, ಸೀನಾ ಮತ್ತು ಪ್ರಭು ಅವರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇತ್ತೀಚೆಗೆ ಈ ನಾಲ್ವರು ಸ್ನೇಹಿತರು ಮಾದಕ ವಸ್ತು ಸೇವನೆ ಮಾಡಿದ್ದು, ನಶೆಯಲ್ಲಿದ್ದ ಸಂದರ್ಭದಲ್ಲಿ ಶಶಿಕುಮಾರ್ ಮತ್ತು ಸ್ನೇಹಿತರ ನಡುವೆ ಗಲಾಟೆ ಉಂಟಾಗಿದೆ.
ಮೂವರೂ ಸೇರಿ ಶಶಿಕುಮಾರ್ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಅಲ್ಲಿಯಿಂದ ಓಡಿಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್.ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾಡಾ ಕಚೇರಿ ಆವರಣದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಮೃತ ಶಶಿಕುಮಾರ್ ಮತ್ತು ನರಸಿಂಹ ಶಿಕ್ಷೆಗೆ ಗುರಿಯಾಗಿ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net